Get Updates
Get notified of breaking news, exclusive insights, and must-see stories!

‘ಅಜರ್‌ಗೆ ಫುಲ್‌ಸ್ಟಾಪ್‌ ; ಜಡೇಜಗೆ ಕಾಮ, ಇದು ಯಾವ ನ್ಯಾಯ?’

  • ಮೊಹಮ್ಮದ್‌ ಶಫೀಕ್‌
ಹೈದರಾಬಾದ್‌ : ಅಜರ್‌ ತಪ್ಪಿತಸ್ಥನಲ್ಲ ಅಂತ ಆತನ ಕುಟುಂಬವರು ಹೇಳುತ್ತಿದ್ದರೆ, ಕ್ರಿಕೆಟ್‌ ಅಭಿಮಾನಿಗಳು ಆತನಿಗೆ ಈಗ ಕೊಟ್ಟಿರೋ ಶಿಕ್ಷೆ ಏನೇನೂ ಸಾಲದು. ಆತನ ಹೆಸರನ್ನು ಕ್ರಿಕೆಟ್‌ ಪುಸ್ತಕದಿಂದಲೇ ಅಳಿಸಿ ಹಾಕಬೇಕಿತ್ತು ಅನ್ನುತ್ತಿದ್ದಾರೆ.

ಆಜೀವ ಪರ್ಯಂತ ಕ್ರಿಕೆಟ್‌ ರಂಗದಿಂದಲೇ ಹೊರಕ್ಕಟ್ಟಲಾಗಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜರ್‌, ಬಿಸಿಸಿಐನ ಶಿಸ್ತು ಸಮಿತಿಗೆ ಅದರ ಕಟು ನಿರ್ಣಯದ ಬಗೆಗೆ ಮತ್ತೊಮ್ಮೆ ಯೋಚಿಸುವಂತೆ ಮನವಿ ಮಾಡುವ ಕೊನೆ ಅವಕಾಶವಿದೆ. ಅಜರ್‌ ಕುಟುಂಬದ ಸದಸ್ಯರು, ಆತನ ಮಾರ್ಗದರ್ಶಿಗಳು ಈ ಹೊತ್ತೂ ಆತ ನಿರಪರಾಧಿ ಎಂದೇ ವಾದಿಸುತ್ತಿದ್ದಾರೆ. ಕ್ರಿಕೆಟ್‌ಗೇ ಮಸಿ ಬಳಿದ ಈತನ ಕೃತ್ಯದಿಂದ ಭಾವನೆಗಳಿಗೆ ಕುಂದುಂಟಾಗಿರುವ ಜನ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ಲವೇ? ಎಂದು ಮರು ನುಡಿಯುತ್ತಿದ್ದಾರೆ.

ಶಿಕ್ಷೆ ಕೊಡುವ ವಿಷಯದಲ್ಲಿ ಬಿಸಿಸಿಐ ಮನಸೋ ಇಚ್ಛೆ ವರ್ತಿಸಿದೆ. ತಾನು ನಿರಪರಾಧಿ ಎಂಬುದನ್ನು ಸಿಬಿಐಗೆ ಮತ್ತು ಬಿಸಿಸಿಐ ವಿಶೇಷ ಆಯುಕ್ತರಿಗೆ ಅಜರ್‌ ಮನವರಿಕೆ ಮಾಡಿಕೊಟ್ಟಿದ್ದರೂ ಯಾರೂ ಆತನ ಮಾತಿಗೆ ಕಿವಿಗೊಡಲಿಲ್ಲ ಎನ್ನುತ್ತಾರೆ ಅಜರ್‌ ಸಹೋದರ (ಕಸಿನ್‌) ಅರ್ಬಾರ್‌.

ಎಲೈಟ್‌ ಜಾಗೆ ಬಂಜಾರ ಹಿಲ್ಸ್‌ನಲ್ಲಿರುವ ಅಜರ್‌ ಮನೆ ಈಗ ಭಣಗುಟ್ಟುತ್ತಿದೆ. ಗೇಟಿನ ಮುಂದೆ ಸದಾ ಗುಂಪುಗಟ್ಟುವ ಹಿಂಡು ಪತ್ರಕರ್ತರಿಗೆ ಅವರು ಮನೆಯಲ್ಲಿಲ್ಲ ಎಂಬ ಬಾಯಿಪಾಠವನ್ನ ವಾಚ್‌ಮನ್‌ ಒಪ್ಪಿಸುವುದು ನಿರಂತರವಾಗಿದೆ. ಮನೆ ಮುಂದೆ ಹಾದು ಹೋಗುವ ಕ್ರಿಕೆಟ್‌ ಭಕ್ತರು ದುರುಗುಟ್ಟುತ್ತಾ, ಬುಸುಗುಟ್ಟುತ್ತಾ ಸಾಗುತ್ತಿದ್ದಾರೆ.

ಅಂಥ ಅಭಿಮಾನಿಗಳಲ್ಲಿ ಒಬ್ಬ ಹೀಗೆನ್ನುತ್ತಾನೆ- 1984. ಇಂಗ್ಲೆಂಡ್‌ ಮೇಲೆ ಒಂದರ ಹಿಂದೆ ಒಂದರಂತೆ 3 ಸೆಂಚುರಿ ಹೊಡೆದಾಗ ಇಡೀ ಹೈದರಾಬಾದ್‌ ಅಜರ್‌ ಹೆಸರಿನಲ್ಲೇ ಮುಳುಗಿಹೋಗಿತ್ತು. ಇವತ್ತು ನೋಡಿ. ಹೈದರಾಬಾದಿಗೇ ಅವನು ಮಸಿ ಬಳಿದು ಬಿಟ್ಟ. ಮೊದಲನೆ ಹೆಂಡತಿ ನೌರೀನ್‌ಗೆ ಡೈವರ್ಸ್‌ ಕೊಟ್ಟು, ಇಬ್ಬರು ಮುದ್ದಾದ ಮಕ್ಕಳನ್ನ ನಡುನೀರಲ್ಲಿ ಕೈಬಿಟ್ಟು ಆ ಸಿನಿಮಾ ಸುಂದರಿ ಬಿಜಲಾನಿ ಹಿಂದೆ ಯಾವಾಗ ಸುತ್ತೋಕೆ ಶುರು ಮಾಡುದ್ನೋ ಆವತ್ತಿಂದ ಹಾಳಾದ.... ಅಭಿಮಾನಿ ಅಜರ್‌ ಮಾಡಿರೋ ಕೆಲಸದಿಂದ ತನಗೇ ಅವಮಾನವಾಗಿದೆಯೋ ಎನ್ನುವಷ್ಟು ಭಾವುಕನಾಗಿಬಿಟ್ಟ.

ಅಜರ್‌ಗೆ ಹೊಡೆತಗಳನ್ನು ಹೇಳಿಕೊಟ್ಟವರಲ್ಲಿ ಹೈದರಾಬಾದ್‌ ಕ್ರಿಕೆಟ್‌ ಒಕ್ಕೂಟದ ಈಗಿನ ಕಾರ್ಯದರ್ಶಿ ಹಾಗೂ ಮಾಜಿ ಕ್ರಿಕೆಟ್‌ ಆಟಗಾರ ಶಿವಲಾಲ್‌ ಯಾದವ್‌ ಕೂಡ ಒಬ್ಬರು. ಅಜರ್‌ ಬಗೆಗೆ ಈಗಲೂ ಅವರಿಗೆ ತುಸು ನಂಬಿಕೆ...

‘ಅಜರ್‌ ಮಧ್ಯಮ ವರ್ಗದ ಹುಡುಗ. ಸತ್ತು ಸ್ವರ್ಗ ಸೇರಿರೋ ಆತನ ತಾತ ಬಹುಶಃ ಅಲ್ಲೇ ಗೊಳೋ ಅಂತ ಅಳುತ್ತಿರಬೇಕು. ಪ್ರತಿ ನಿತ್ಯ ಅಜರ್‌ನನ್ನು ಕ್ರಿಕೆಟ್‌ ಮೈದಾನಕ್ಕೆ ಕರೆ ತರುತ್ತಿದ್ದವರೇ ಅವರು. ಆಗ ಅಜರ್‌ ಕಣ್ಣುಗಳಲ್ಲಿ ಮುಗ್ಧತೆಯಿತ್ತು, ಆತನಲ್ಲಿ ಹುಚ್ಚು ಛಲವೂ ಇತ್ತು. ಈಗಲೂ ನನಗೆ ಆತ ಹೀಗೆ ಮಾಡಿದ್ದಾನೆಂದರೆ ನಂಬಲೇ ಆಗುತ್ತಿಲ್ಲ. ಬಿಸಿಸಿಐ ಕೂಡ ಸಾಚ ಅಲ್ಲ. ತಪ್ಪು ಮಾಡಿರುವವರಿಗೆ ಶಿಕ್ಷೆ ಕೊಡಲಿ. ಅದು ಎಲ್ಲರಿಗೂ ಸಮಾನವಾಗಿರಬೇಕು. ಜಡೇಜಗೆ 5 ವರ್ಷ ಅಮಾನತು. ಅಜರ್‌ಗೆ ಜೀವನ ಪೂರ್ತಿ ನಿಷೇಧ. ಇದು ಯಾವ ನ್ಯಾಯ?’

ಫೆಬ್ರವರಿ 8, 1963ರಲ್ಲಿ ಹುಟ್ಟಿದ ಅಜರ್‌ ಬ್ಯಾಟು ಹಿಡಿದು ಎಷ್ಟೋ ಫ್ಯಾನ್‌ಗಳನ್ನು ಹುಟ್ಟು ಹಾಕಿಕೊಂಡ. ಒಮ್ಮೆ ಸುನಿಲ್‌ ಗವಾಸ್ಕರ್‌, ಭಾರತದ ಕ್ರಿಕೆಟ್‌ಗೆ ಅಜರ್‌ ದೇವರ ಕೊಡುಗೆ ಅಂತ ಶ್ಲಾಘಿಸಿದ್ದರು. ನಾಯಕನ ಪಟ್ಟಕ್ಕೇರಿದ್ದೂ ಆಯಿತು. ಫೀಲ್ಡಿಂಗ್‌ನಲ್ಲಿ ಮಿಂಚಿದ್ದೂ ಆಯಿತು. 336 ಒನ್‌ಡೇ ಪಂದ್ಯಗಳಲ್ಲಿ ಆಟ. 7 ಸೆಂಚುರಿ, 58 ಫಿಫ್ಟಿ. ಕೊನೆಗೆ ಕ್ರಿಕೆಟ್ಟನ್ನೇ ಕದ್ದು ಹಾಳಾದ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+