ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕಿ ವಿಮಲಾ ಗೌಡರ ಮನೆಯಲ್ಲಿ ಕಳ್ಳತನ

By Staff
|
Google Oneindia Kannada News

ಬೆಂಗಳೂರು : ಶಾಸಕಿ ವಿಮಲಾ ಗೌಡ ಅವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ. ದುಷ್ಕರ್ಮಿಗಳು ವಿಮಲಾ ಅವರ ಮನೆಯಿಂದ ಚಿನ್ನದ ಆಭರಣಗಳು ಹಾಗೂ ಸೆಲ್‌ ಫೋನ್‌ ಒಂದನ್ನು ದೋಚಿ ಪರಾರಿಯಾಗಿದ್ದಾರೆ.

ಶಾಸಕಿಯ ಮನೆಯಿಂದ ಕಳುವಾಗಿರುವ ವಸ್ತುಗಳ ಒಟ್ಟು ಮೌಲ್ಯ ಸುಮಾರು 55 ಸಾವಿರ ರುಪಾಯಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿದ್ದವರೆಲ್ಲರೂ ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಕಿಟಕಿಯ ಮೂಲಕ ಒಳನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದೋಚಿದ್ದಾರೆ.

ಶಬ್ದ ಕೇಳಿ ಮನೆಯಲ್ಲಿದ್ದವರು ಏಳುವ ಹೊತ್ತಿಗೆ ಕಳ್ಳರು ತಾವು ದೋಚಿದ್ದ ವಸ್ತುಗಳೊಂದಿಗೆ ಕತ್ತಲಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X