ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೀವ್‌ ವಾ ತಂಡ ಅಂಥಾ ಶ್ರೇಷ್ಠ ತಂಡವೇನಲ್ಲ ! : ನೀಲ್‌ ಹಾರ್ವೆ

By Staff
|
Google Oneindia Kannada News

ಲಂಡನ್‌ : ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ತಂಡ, ವಿಶ್ವದ ಅತ್ಯುತ್ತಮ ತಂಡಗಳಲ್ಲೊಂದು. ಭಾನುವಾರ(ಡಿ.3), ವಿಂಡೀಸ್‌ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿಶ್ವ ದಾಖಲೆಯ ಜಯ ಗಳಿಸಿದ ಸಂದರ್ಭದಲ್ಲಿ ಮೂಡಿಬಂದ ಅಭಿಪ್ರಾಯವಿದು.

ಅನೇಕ ಕ್ರಿಕೆಟ್‌ ಪಂಡಿತರು ಸ್ಟೀವ್‌ ವಾ ನೇತೃತದ ತಂಡವನ್ನು ಅದ್ವಿತೀಯ ಎಂದೇ ಬಣ್ಣಿಸಿದರು. ಆದರೆ, ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಬಲ ಹಾಗೂ ಬಲಹೀನತೆಗಳನ್ನು ಒರೆ ಹಚ್ಚುವ ಮಾತುಗಳೂ ಕೇಳಿ ಬಂದದ್ದು ವಿಶೇಷ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ತಾರೆಗಳೇ ಚರ್ಚೆಯಲ್ಲಿ ಪಾಲ್ಗೊಂಡದ್ದು ಕುತೂಹಲಕರ. ಅವರಲ್ಲಿ ಮಾಜಿ ಟೆಸ್ಟ್‌ ತಾರೆ ನೀಲ್‌ ಹಾರ್ವೆ ಅವರ ಮಾತುಗಳು ಗಮನ ಸೆಳೆಯುವಂತಿವೆ.

ಆಸ್ಟ್ರೇಲಿಯಾ ಸಾರ್ವಕಾಲಿಕ ಶ್ರೇಷ್ಠ ತಂಡ ಅನ್ನುವುದನ್ನು ನೀಲ್‌ ಹಾರ್ವೆ ಒಪ್ಪುವುದಿಲ್ಲ . 1948ರ ಡಾನ್‌ ಬ್ರಾಡ್ಮನ್‌ ನೇತೃತ್ವದ ತಂಡ, 1958 ರ ರಿಚೀ ಬೆನಾಡ್ಸ್‌ ತಂಡ ಹಾಗೂ 1972 ರ ಇಯಾನ್‌ ಚಾಪೆಲ್‌ ನೇತೃತ್ವದ ತಂಡಗಳು ಪ್ರಸ್ತುತ ತಂಡಕ್ಕಿಂಥಾ ಹೆಚ್ಚು ಧನಾತ್ಮಕ ಅಂಶಗಳನ್ನು ಹೊಂದಿದ್ದ ವು ಎಂದು ಹಾರ್ವೆ ಅಭಿಪ್ರಾಯ ಪಟ್ಟಿದ್ದಾರೆ. ಅವರು ಎಬಿಸಿ ರೇಡಿಯೋ ಉದ್ದೇಶಿಸಿ ಮಾತನಾಡುತ್ತಿದ್ದರು.

80ರ ದಶಕದ ಕ್ಲೈವ್‌ ಲಾಯ್ಡ್‌ ನೇತೃತ್ವದ ವಿಂಡೀಸ್‌ ತಂಡ ಪ್ರಸ್ತುತ ಆಸ್ಟ್ರೇಲಿಯಾ ತಂಡಕ್ಕಿಂಥ ಬಲಿಷ್ಠವಾಗಿತ್ತು .

ಉತ್ತಮ ಆಲ್‌ರೌಂಡರ್‌ ಹಾಗೂ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್‌ ಕೊರತೆಗಳನ್ನು ಸ್ಟೀವ್‌ ವಾ ನೇತೃತ್ವದ ತಂಡ ಎದುರಿಸುತ್ತಿದೆ ಎನ್ನುವುದು ಹಾರ್ವೆ ಅವರ ಖಡಾ ಖಂಡಿತ ಮಾತು.

ಇದು ಆರಂಭ ಮಾತ್ರ, ನಮ್ಮದು ವಿಶೇಷ ತಂಡ

ವಿಶ್ವ ದಾಖಲೆಯನ್ನು ಉತ್ತಮ ಪಡಿಸುವಂತೆಯೇ ನಾವು ಪ್ರತಿ ಪಂದ್ಯವನ್ನೂ ಆಡುತ್ತೇವೆ ಎಂದು ಸತತ 12 ಟೆಸ್ಟ್‌ ಜಯ ದಾಖಲಿಸುವುದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ವಾ ತಮ್ಮ ಖುಷಿಯನ್ನು ಬಣ್ಣಿಸುತ್ತಾರೆ. ನಮ್ಮದು ಅತ್ಯುತ್ತಮ ತಂಡ, ಇದು ಆರಂಭ ಮಾತ್ರ ಅನ್ನುವ ವಾ ಭವಿಷ್ಯದಲ್ಲಿ ಮೊಳಗಲಿರುವ ಹೊಸ ದಾಖಲೆಗಳ ಬಗ್ಗೆ ಸುಳಿವು ನೀಡುತ್ತಾರೆ.

(ರಾಯ್ಟರ್ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X