ಮಂಗಳೂರು- ಮುಂಬೈಗಳಲ್ಲಿ ಜೀತಕ್ಕಿದ್ದ 40 ಮಕ್ಕಳಿಗೆ ಹೊಸಜೀವನ
ಹಾಸನ : ಮಂಗಳೂರು- ಉಡುಪಿ ಹಾಗೂ ಮುಂಬೈನಲ್ಲಿ ಜೀತ ಮಾಡುತ್ತಿದ್ದ ಸುಮಾರು 40 ಮಕ್ಕಳನ್ನು ಆ ನರಕದಿಂದ ಪಾರು ಮಾಡಿ, ಅವರಿಗೆ ಹಾಸನ ಪೊಲೀಸರು ಹೊಸ ಬದುಕನ್ನು ನೀಡಿದ್ದಾರೆ.
ಜಿಲ್ಲೆಯ ಐದಹಳ್ಳಿ ಎಂಬ ಲಂಬಾಣಿ ನಾಯಕರೇ ಹೆಚ್ಚಾಗಿರುವ ಹಳ್ಳಿ. ಅಲ್ಲೊಂದು ಶಾಲೆ. ಶಾಲೆಯ ದಾಖಲಾತಿ ಪುಸ್ತಕದಲ್ಲಿ 76 ವಿದ್ಯಾರ್ಥಿಗಳ ಹೆಸರುಗಳು ನೋಂದಾವಣೆಯಾಗಿವೆ. ಆದರೆ ಶಾಲೆಗೆ ಹಾಜರಾಗುತ್ತಿದ್ದುದು 8 ಮಕ್ಕಳು ಮಾತ್ರ. ಜಿಲ್ಲೆಯ ಉಪ ವಿಭಾಗಾಧಿಕಾರಿಗೆ ಅನುಮಾನ ಬಂದ ಕಾರಣ ತಲಾಶು ಮಾಡಿದ್ದಾರೆ. ಹಿಂದುಳಿದ ಈ ಹಳ್ಳಿಯ ತಂದೆ-ತಾಯಂದಿರೇ ಹಣದಾಸೆಗೆ ತಮ್ಮ ಮಕ್ಕಳನ್ನು ಮುಂಬೈ, ಮಂಗಳೂರು- ಉಡುಪಿ ಜನರಿಗೆ ಮಾರಿಕೊಂಡಿರುವುದು ಪತ್ತೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಮುದುಸಿ ಗ್ರಾಮದ 3 ಮಕ್ಕಳು ಹಾಗೂ ಹಾಸನದ ಗೌರಿ ಕೊಪ್ಪಲಿನ ಒಬ್ಬ ಹೆಣ್ಣು ಮಗಳೂ ಜೀತಕ್ಕಿದ್ದುದು ಬೆಳಕಿಗೆ ಬಂದಿದೆ.
ಹಾಸನ ಜಿಲ್ಲಾಧಿಕಾರಿ ಕನಿರಾಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ.ಸಲೀಂ ಅವರಿಗೆ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ಪೊಲೀಸ್ ಉಪ ನಿರೀಕ್ಷಕ ಉಮೇಶ್ ಜಿ.ಸೇಠ್ ನೇತೃತ್ವದ ತಂಡ ಚುರುಕಿನಿಂದ ಕಾರ್ಯಾಚರಣೆ ನಡೆಸಿ ಮಂಗಳೂರು, ಕಾಪು, ಉಡುಪಿ,ಬೆಳ್ತಂಗಡಿ ಹಾಗೂ ಉಪ್ಪಿನಂಗಡಿಗಳಿಗೆ ಹೋಗಿ ಮಕ್ಕಳನ್ನು ಕರೆ ತಂದಿದೆ. ಮುಂಬೈ ಪೊಲೀಸರೊಂದಿಗೆ ಸಂಪರ್ಕಿಸಿ ಅಲ್ಲಿದ್ದ 8 ಮಕ್ಕಳೂ ಸೇರಿದಂತೆ ಒಟ್ಟು 39 ಮಕ್ಕಳನ್ನು ಜೀತದಿಂದ ಪಾರು ಮಾಡಿದ್ದಾರೆ.
ಮಕ್ಕಳ ವ್ಯಾಪಾರದ ಈ ಪ್ರಕರಣದಲ್ಲಿ ದಲ್ಲಾಳಿಗಳಾಗಿದ್ದ ಹಾಸನದ ಜರೂಮಿಜರೇನ, ಮುಂಬೈನ ಜೇಮ್ಸ್ ಡಿಸೋಜ ಮತ್ತು ಕೆ.ಆರ್.ಜೇಮ್ಸ್ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಪೋಷಕರ ವಿಚಾರಣೆಯೂ ನಡೆದಿದೆ. ಜೀತ ಮುಕ್ತ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯ ಜವಾಬ್ದಾರಿಯನ್ನು ಸ್ವತಃ ಜಿಲ್ಲಾಧಿಕಾರಿಯೇ ವಹಿಸಿದ್ದಾರೆ. ಈ ದೊಡ್ಡ ಸವಾಲನ್ನು ಅತಿ ಕಡಿಮೆ ಅವಧಿಯಲ್ಲಿ ಬೇಧಿಸಿದ ಉಮೇಶ್ ಜಿ.ಸೇಠ್ ನೇತೃತ್ವದ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗಿದೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications