Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಗ್ರಹಗತಿಗಳು ಚೆನ್ನಾಗಿವೆ. ನೌಕರಿಯಲ್ಲಿ ಬಡ್ತಿ, ಬಯಸಿದೆಡೆಗೆ ವರ್ಗಾವಣೆ. ಮಣ್ಣೂ ಚಿನ್ನವಾಗುವ ಕಾಲ. ದೇವತಾರ್ಚನೆಯಿಂದ ಯಶಸ್ಸು ಖಂಡಿತ.

ವೃಷಭ : ನೀವು ಬೇಡ ಬೇಡ ಎಂದರೂ ದೂರ ಪ್ರಯಾಣ ಹೋಗಲೇ ಬೇಕು. ಅನಿರೀಕ್ಷಿತವಾಗಿ ಧನಲಾಭ. ಧನದೇವತೆ ಬಾಗಿಲು ತಟ್ಟುತ್ತಿದ್ದಾಳೆ. ಉನ್ನತ ಶಿಕ್ಷಣದಲ್ಲಿ ಅದ್ವಿತೀಯ ಸಾಧನೆ.

ಮಿಥುನ : ಮನೆ ದೇವರನ್ನು ಮೂಟೆ ಕಟ್ಟಿ, ನೆರೆ ದೇವರಿಗೆ ಕೊಂಡ ಹಾಯುವ ಅಗತ್ಯ ಇಲ್ಲ. ನಿಮ್ಮ ಕುಲದೇವತೆಯೇ ನಿಮ್ಮನ್ನು ಕಾಪಾಡುತ್ತಾಳೆ, ಕಠಿಣ ಪ್ರಯತ್ನದಿಂದ ವ್ಯವಹಾರದಲ್ಲಿ ಮುನ್ನಡೆ.

ಕಟಕ : ಕೌಟುಂಬಿಕ ವ್ಯವಹಾರದಲ್ಲಿ ಇಂದು ಸ್ವಲ್ಪ ಕಿರಿಕಿರಿ. ಇಂದು ನಿಮಗೆ ಮೌನವೇ ಬಂಗಾರ. ನೀವು ಸೋತರೂ ಅಡ್ಡಿಯಿಲ್ಲ. ಮುಂದೆ ನೆಮ್ಮದಿಗೆ ಇದುವೇ ಸೋಪಾನ.

ಸಿಂಹ : ಹೇಳಿ ಕೇಳಿ ನೀವು ಸಿಂಹದಂತವರು. ಯಾವುದನ್ನೂ ಸುಲಭವಾಗಿ ತರ್ಕ ಮಾಡದೆ ಒಪ್ಪಿಕೊಳ್ಳುವುದಿಲ್ಲ. ಇಂದು ತಗ್ಗಿ ಬಗ್ಗಿ ನಡೆದರೆ ಒಳಿತು. ಅನಿರೀಕ್ಷಿತ ಸಿಹಿ ಸುದ್ದಿ ಕಾದಿದೆ.

ಕನ್ಯಾ : ಇಂದು ನಿಮ್ಮ ಮನಸ್ಸಿಗೂ ಮೋಡ ಕವಿದಂತಾಗಿದೆ. ಹೊರಗಿನ ಚಂಡಮಾರುತಕ್ಕೆ ನೀವು ಹೆದರುವ ಅಗತ್ಯವಿಲ್ಲ. ಮಳೆ ಹುಯ್ದ ಮೇಲೆ ತಣ್ಣಗಾಗುವಂತೆ ಎಲ್ಲ ಶಾಂತವಾಗುತ್ತದೆ. ತಾಳ್ಮೆ ಕಾಪಾಡಿಕೊಳ್ಳಿ.

ತುಲಾ : ಇಂದು ನಿಮ್ಮ ಎಲ್ಲ ಪ್ರಯತ್ನಗಳಿಗೂ ಅಡ್ಡಿಯೇ ಹೆಚ್ಚು. ಶತ್ರುಗಳ ಭಯ ಇದೆ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿದ್ದರೆ ಒಳಿತು. ಭೂ ವ್ಯವಹಾರದಲ್ಲಿ ಮಾತ್ರ ಜಯ ಸಿದ್ಧ.

ವೃಶ್ಚಿಕ : ಎಲ್ಲರ ಕಣ್ಣೂ ನಿಮ್ಮ ಮೇಲೇ ಇದೆ. ನಿಮ್ಮ ನಡತೆಯನ್ನು ತಿದ್ದಿಕೊಳ್ಳಿ. ಕಾಮಾತುರರಂತೆ ವರ್ತಿಸದಿರಿ. ಸಮಾಜಕ್ಕಾದರೂ ಅಂಜಲೇ ಬೇಕಲ್ಲ. ಅನವಶ್ಯಕ ಅಪವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

ಧನಸ್ಸು : ಅನಿರೀಕ್ಷಿತ ಅತಿಥಿ ಬಂದನೆಂದು ಬೇಜಾರಾಗಬೇಡಿ. ಅವರಿಂದ ನಿಮಗೇ ಹೆಚ್ಚು ಲಾಭ. ಬಾಹ್ಯ ಪ್ರಭಾವಕ್ಕೆ ಒಳಗಾಗದಿರಿ. ಮನಸ್ಸಿದ್ದರೆ ಮಾರ್ಗ.

ಮಕರ : ಹೊಸ ಯೋಚನೆಗಳಿಂದ ಪ್ರಗತಿ ಸಾಧ್ಯ. ವಿಜ್ಞಾನಿಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ತಾಯಿಯ ಕಡೆಯಿಂದ ನಿಮಗೆ ಧನಯೋಗ ಇದೆ. ಪ್ರಣಯಿಗಳಿಗೆ ಇದು ಸಂಭ್ರಮದ ಕಾಲ.

ಕುಂಭ : ಅನಿರೀಕ್ಷಿತ ಖರ್ಚು ಕಾದಿದೆ. ಎದೆಗುಂದುವ ಅಗತ್ಯವಿಲ್ಲ. ಕಾಲವೇ ಎಲ್ಲಕ್ಕೂ ಉತ್ತರ ನೀಡುತ್ತದೆ. ಆತಂಕದ ನಡುವೆಯೇ ಪ್ರಯಾಣ ಅನಿವಾರ್ಯ. ಕೈಯಿಟ್ಟ ಕೆಲಸಕ್ಕೆ ಕಂಟಕ ಇದೆ.

ಮೀನ : ಇಂದು ನಿಮಗೆ ಸಂತೋಷದ ದಿನ. ಇಲ್ಲ ಸಲ್ಲದ ಮಾತುಗಳಿಗೆ ಕವಿಗೊಡಬೇಡಿ. ಎಲ್ಲ ವ್ಯವಹಾರದಲ್ಲೂ ಜಯ ನಿಮ್ಮದೆ. ವ್ಯಾಪಾರದಲ್ಲಿ ಮುನ್ನಡೆ. ಧನಲಕ್ಷ್ಮಿಯ ಕೃಪೆ ನಿಮಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+