ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಂಖ್ಯಾ ಫಲಕವೂ.. ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯೂ.. ಲೇಖನಕ್ಕೆ ಓದುಗರ ಪ್ರತಿಕ್ರಿಯೆ

By Staff
|
Google Oneindia Kannada News

ಸ್ಪಷ್ಟೀಕರಣ

ಸಂಪಾದಕರಿಗೆ,
ಕನ್ನಡ. ಇಂಡಿಯಾಇನ್‌ಫೋ.ಕಾಂ,
ಬೆಂಗಳೂರು

ಮಾನ್ಯರೆ,

ನಿಮ್ಮ 27-11-2000 ಸಂಚಿಕೆಯಲ್ಲಿ ಕನ್ನಡ ಸಂಖ್ಯಾ ಫಲಕವೂ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯೂ - ವಾಹನಗಳಲ್ಲಿ ಭಾರತೀಯ ಭಾಷೆಗಳ ಸಂಖ್ಯಾ ಫಲಕ ಸೂಕ್ತವೇ? ಎಂಬ ಲೇಖನಕ್ಕೆ ಸ್ಪಷ್ಟನೆ ಇಲ್ಲಿದೆ.

  1. ರಾಜ್ಯದ ಸರಕಾರಿ ವಾಹನಗಳ ಮೇಲೆ ಕನ್ನಡ ಸಂಖ್ಯಾಫಲಕ ಕುರಿತ ಕರ್ನಾಟಕ ಸರಕಾರದ ಆದೇಶದ (ಸಂಖ್ಯೆ : ಸಿಅಸುಇ 174 ಶಿವಾನೀ 2000 ದಿನಾಂಕ 18-11-2000) ಪೂರ್ಣ ಪಾಠ ಇಲ್ಲಿದೆ:
ಸರಕಾರದ ವಾಹನಗಳ ಮೇಲೆ ಕೇವಲ ಆಂಗ್ಲ ಭಾಷೆಯ ಅಕ್ಷರ ಮತ್ತು ಸಂಖ್ಯೆಗಳಿದ್ದು, ಇದರ ಜತೆಗೆ ಕನ್ನಡ ಅಕ್ಷರ ಮತ್ತು ಸಂಖ್ಯೆಗಳ ಫಲಕವನ್ನು ಬರೆಸುವುದನ್ನು ಕಡ್ಡಾಯಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವುದನ್ನು ಸರಕಾರವು ಪರಿಶೀಲಿಸಿದೆ.

ಮಾನ್ಯ ಸಚಿವರ - ರಾಜ್ಯ ಸಚಿವರ ಹಾಗೂ ಅತಿಥೇಯ ಸಂಸ್ಥೆಯ ವಾಹನಗಳು ಸೇರಿದಂತೆ ಸರಕಾರದ ಎಲ್ಲ ವಾಹನಗಳ ಮೇಲೆ ಪ್ರಸ್ತುತ ಇರುವ ನೋಂದಣಿ ಸಂಖ್ಯೆಯ ಜೊತೆಗೆ ಕನ್ನಡ ಅಕ್ಷರ ಹಾಗೂ ಸಂಖ್ಯೆಗಳ ಫಲಕವನ್ನು ಅಳವಡಿಸುವಂತೆ ಸೂಚಿಸಲಾಗಿದೆ.

ಮೇಲೆ ಸೂಚಿಸಿದ ಅಂಶಗಳನ್ನು ತಪ್ಪದೆ ಪಾಲಿಸಬೇಕೆಂದು ಸಂಬಂಧಪಟ್ಟ ಎಲ್ಲರಿಗೂ ಈ ಮೂಲಕ ತಿಳಿಸಲಾಗಿದೆ.

(ಎಂ.ಎಸ್‌. ಗಣಪತಿ)
ಸರ್ಕಾರದ ಅಧೀನ ಕಾರ್ಯದರ್ಶಿಗಳು
ಸಿಅಸುಇ ( ರಾಜ್ಯ ಶಿಷ್ಠಾಚಾರ)


ಪ್ರಜಾಪ್ರಭುತ್ವ ಮೂಲ ತತ್ತ್ವದ ಗೌರವ

ಮಾನ್ಯರೇ,

ದೇಶದ ರಾಜ್ಯ ಸರಕಾರಗಳ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳ ಮೇಲೆ ಆಯಾ ರಾಜ್ಯದ ಜನತೆಗೆ ಅರ್ಥವಾಗುವಂತೆ ಮೊದಲು ರಾಜ್ಯದ ಆಡಳಿತ ಭಾಷೆಯಲ್ಲಿ ನೋಂದಣಿ ಫಲಕಗಳನ್ನು ಕಡ್ಡಾಯವಾಗಿ ಬರೆಸುವುದು ಪ್ರಜಾಸತ್ತಾತ್ಮಕವಾದುದು.

ಆನಂತರ ಬೇರೆ ರಾಜ್ಯದ ಪ್ರವಾಸಿಗಳಿಗೆ ಅನುಕೂಲವಾಗಬಹುದೆಂಬ ನಿರೀಕ್ಷೆಯಿಂದ ಹಾಗೂ ಅವರೆಲ್ಲರಿಗೂ ಇಂಗ್ಲಿಷ್‌ ಅಕ್ಷರ ಮತ್ತು ಅಂಕಿಗಳು ತಿಳಿಯುತ್ತದೆಂಬ ನಂಬಿಕೆಯಿಂದ ಅದರ ಜೊತೆಗೆ ಹೆಚ್ಚುವರಿಯಾಗಿ ಮಾತ್ರ ಇಂಗ್ಲಿಷ್‌ ಫಲಕವನ್ನು ಬರೆಸುವುದು ಉಚಿತವಾಗುತ್ತದೆ.

ಈಗ ಕರ್ನಾಟಕ ಸರಕಾರ ತನ್ನ ವಾಹನಗಳ ಮೇಲೆ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಬರೆಸಲು ನಿರ್ಧರಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ತತ್ವವನ್ನು ಗೌರವಿಸಿರುವುದು ಅಭಿನಂದನಾರ್ಹ. ಕರ್ನಾಟಕ ಸರಕಾರದ ಬಸ್ಸುಗಳ ಮೇಲೆ ಕನ್ನಡ ಮತ್ತು ಇಂಗ್ಲಿಷ್‌ ಎರಡು ಭಾಷೆಗಳ ಅಕ್ಷರ ಮತ್ತು ಅಂಕಿಗಳಲ್ಲಿಯೂ ನೋಂದಣಿ ಫಲಕ ಇರುವುದನ್ನು ತಮಿಳುನಾಡು ಹಾಗೂ ಮಹಾರಾಷ್ಟ್ರ ಸರಕಾರಗಳು ಅನುಸರಿಸಿರುವುದು ಮೆಚ್ಚುವಂಥದ್ದು.

ಕನ್ನಡಿಗರು ಮಾತ್ರ ಓದಲು ಸಾಧ್ಯವಿರುವ ನಿಮ್ಮ ಕನ್ನಡ ಅಂತರಜಾಲ ಪತ್ರಿಕೆಯಲ್ಲಿ ಕನ್ನಡ ಅಂಕಿಗಳನ್ನು ಬಳಸಿ, ಕನ್ನಡ ನಾಡಿನಲ್ಲಿ ಕನ್ನಡದ ಅಂಕಿಗಳು ಹಾಗೂ ಕನ್ನಡ ಸಂಪೂರ್ಣವಾಗಿ ಬಳಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ನಿಮ್ಮ ವರದಿಯ ಆರಂಭ ವಾಕ್ಯದ ಕಳಕಳಿಯನ್ನು ನಿಜಗೊಳಿಸಬೇಕಾಗಿ ಕೋರುತ್ತೇನೆ.

ಡಾ. ಪಂಡಿತಾರಾಧ್ಯ
ಕನ್ನಡ ಅಧ್ಯಾಪಕ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು -570 006.


Why not in kannada?

I have traveled most of the northern cities of our country everywhere they are having local language number plates on their vehicles, when they are having their local language number plates, why not in Kannada

Achar

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X