Get Updates
Get notified of breaking news, exclusive insights, and must-see stories!

ದೆಹಲಿಯ ಔಷಧಿ ಅಂಗಡಿಗಳಿಂದ ಕಡಿಮೆ ಬೆಲೆಯ ಇನ್ಸುಲಿನ್‌ ನಾಪತ್ತೆ

ನವದೆಹಲಿ : ಸಕ್ಕರೆ ರೋಗವನ್ನು ನಿಯಂತ್ರಣದಲ್ಲಿಡುವ ಜನಪ್ರಿಯ ಇನ್ಸುಲಿನ್‌ ಔಷಧಿಗಳು ರಾಜಧಾನಿಯ ಔಷಧಿ ಅಂಗಡಿಗಳಿಂದ ಕಣ್ಮರೆಯಾಗಿವೆ.

ಭಾರತದ ಜುವೆನೈಲ್‌ ಡಯಾಬಿಟಿಕ್‌ ಅಸೋಸಿಯೇಷನ್‌ನ ಅಧ್ಯಕ್ಷ ಎ.ಕೆ. ಜಿಂಜನ್‌ ಅವರ ಪ್ರಕಾರ, ಶೇ.70 ರಷ್ಟು ರೋಗಿಗಳು ಬಳಸುವ ಎನ್‌ಪಿಎಚ್‌ ಹಾಗೂ ಪ್ಲೈನ್‌ ಇನ್ಸುಲಿನ್‌ನಂತಹ ಗೋಜಾತಿಯ ಇನ್ಸುಲಿನ್‌ಗಳು ದೆಹಲಿಯ ಬಹಳಷ್ಟು ಔಷಧಿ ಅಂಗಡಿಗಳಲ್ಲಿ ಸುಮಾರು 10 ದಿನಗಳಿಂದ ದೊರೆಯುತ್ತಿಲ್ಲ .

ಜನ ಸಾಮಾನ್ಯರು ಬಳಸುವ ಇನ್ಸುಲಿನ್‌ಗಳು ಔಷಧಿ ಅಂಗಡಿಗಳಿಂದ ಕಣ್ಮರೆಯಾಗಿದ್ದರೂ, ದುಬಾರಿ ಬೆಲೆಯ ಇನ್ಸುಲಿನ್‌ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿವೆ. ಪ್ರಸ್ತುತ ಮಾರುಕಟ್ಟೆಯಿಂದ ಕಣ್ಮರೆಯಾಗಿರುವ ಇನ್ಸುಲಿನ್‌ಗಳ ಬೆಲೆ ಸುಮಾರು 55 ರಿಂದ 70 ರುಪಾಯಿಗಳಾದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ಸುಲಿನ್‌ಗಳ ಬೆಲೆ 210 ರಿಂದ 250 ರುಪಾಯಿಯಷ್ಟು ದುಬಾರಿಯಾಗಿದೆ.

ಕಡಿಮೆ ಬೆಲೆಯ ಇನ್ಸುಲಿನ್‌ಗಳು ದೊರೆಯುತ್ತಿಲ್ಲವಾದ್ದರಿಂದ ಸಕ್ಕರೆ ಕಾಯಿಲೆ ರೋಗಿಗಳು ಸಂಕಷ್ಟದಲ್ಲಿದ್ದಾರೆ. ಬಡರೋಗಿಗಳು, ಮಕ್ಕಳು ತೊಂದರೆಗೊಳಗಾಗಿದ್ದಾರೆ ಎಂದು ಜಿಂಜನ್‌ ತಿಳಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+