Get Updates
Get notified of breaking news, exclusive insights, and must-see stories!

ದೇವನಾಗರಿಲಿಪಿಯಲ್ಲಿ ಕೊಂಕಣಿ ವಿಶ್ವಕೋಶ : ಗೋವಾ ವಿ.ವಿ ಸಾಧನೆ

ಪಣಜಿ : ಗೋವಾ ವಿಶ್ವ ವಿದ್ಯಾಲಯ ಕೊಂಕಣಿ ವಿಶ್ವಕೋಶವನ್ನು ಸಿದ್ಧ ಪಡಿಸಿದ್ದು, ನವೆಂಬರ್‌ 30 ರಂದು ವಿಶ್ವ ವಿದ್ಯಾಲಯದ ಕುಲಪತಿಗಳಾಗಿರುವ ಗೋವಾ ರಾಜ್ಯಪಾಲ ಮೊಹ್ಮದ್‌ ಫಜಲ್‌ ಅವರು ಕೃತಿ ಸಂಪುಟಗಳನ್ನು ಬಿಡುಗಡೆ ಮಾಡುವರು.

ಸುಮಾರು 4000 ಪುಟಗಳ ನಾಲ್ಕು ಸಂಪುಟಗಳನ್ನೊಳಗೊಂಡಿರುವ ಈ ಕೃತಿ, ಕೊಂಕಣಿ ಭಾಷೆಯಲ್ಲಿ ಜಗತ್ತಿನ ಸಂಪೂರ್ಣ ಮಾಹಿತಿ ಒದಗಿಸುತ್ತದೆ. ದೇವನಾಗರಿ ಲಿಪಿಯಲ್ಲಿ ಪುಸ್ತಕವನ್ನು ಬರೆಯಲಾಗಿದ್ದು, ಸುಮಾರು 5000 ವಿಷಯಗಳನ್ನು ಮತ್ತು ಸುಮಾರು 800 ವಿವರಣೆಗಳನ್ನು ಒಳಗೊಂಡಿದೆ.

ಜಗತ್ತಿನ ವಿವಿಧ ವಿವರಣಾತ್ಮಕ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು, ಕೊಂಕಣಿ ನೆಲ, ಜನ, ಭಾಷೆ, ಸಂಸ್ಕೃತಿ ಬಗ್ಗೆ ವಿವರವಾದ ಮಾಹಿತಿ ಲಭ್ಯವಿದೆ. ಕೊಂಕಣಿ ಮಾತೃ ಭಾಷೆಯವರಿಗೆ ಮಾತ್ರವಲ್ಲದೆ, ದೇವನಾಗರಿ ಲಿಪಿ ಓದುವ ಎಲ್ಲರಿಗೂ ಇದೊಂದು ಉಪಯುಕ್ತ ಗ್ರಂಥವಾಗಿರುತ್ತದೆ ಎಂದು ಕೊಂಕಣಿ ವಿಶ್ವ ಕೋಶದ ಕಾರ್ಯ ನಿರ್ವಾಹಕ ಸಂಪಾದಕ ತನಜಿ ಹಲಾರ್ನಕರ್‌ ಹೇಳಿದಾ್ದರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+