Get Updates
Get notified of breaking news, exclusive insights, and must-see stories!

ನೆರೆ ರಾಜ್ಯದಲ್ಲಿ ಚಂಡಮಾರುತದ ಭೀತಿ

ಬೆಂಗಳೂರು : ಬಿಳಿಯ ಗೋಧಿ ಬಣ್ಣದ ಮೈಯೆಲ್ಲಾ ಬೂದು ಬಣ್ಣಕ್ಕೆ ತಿರುಗುತ್ತಿದೆ. ತುಟಿಗಳೆಲ್ಲಾ ಒಡೆಯುತ್ತಿದೆ. ಚಳಿಗೆ ಮೈ ಒಡೆಯಲು ಸಣ್ಣನೆಯ ನವೆ ಶುರುವಾಗಿದೆ. ಔಷಧದಂಗಡಿಗಳಲ್ಲಿ ಹಾಗೂ ಜನರಲ್‌ ಸ್ಟೋರ್ಸ್‌ಗಳಲ್ಲಿ ಪಿಯರ್ಸ್‌ ಸೋಪು ಹಾಗೂ ವ್ಯಾಸಲಿನ್‌ಗೆ ಭಾರಿ ಬೇಡಿಕೆ ಬಂದಿದೆ.

ಬುಧವಾರ ಬೆಳಗ್ಗೆಯ ಹೊತ್ತಿಗೆ ಬಂಗಾಳಕೊಲ್ಲಿಯ ಆಗ್ನೇಯ ಮೂಲೆಯಿಂದ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹವಾಮಾನದಲ್ಲೂ ಕೊಂಚ ಏರಿಳಿತ ಕಂಡು ಬಂದಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಂಭವ ಇದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಣಹವೆ ಮುಂದುವರಿದಿತ್ತು. ದಕ್ಷಿಣ ಒಳನಾಡಿನ ಕೆಲವುಕಡೆ ಕನಿಷ್ಠ ತಾಪಮಾನ ಹೆಚ್ಚಿತ್ತು. ಉಳಿದಂತೆ ರಾಜ್ಯದ ಬಹುತೇಕ ಎಲ್ಲೆಡೆ ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ತಾಪಮಾನ 19.9 ಡಿಗ್ರಿ ಸೆಲ್ಸಿಯಸ್‌ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು.

ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಮಳೆ ಅಥವಾ ಗುಡುಗಿನಿಂದ ಕೂಡಿದ ಮಳೆ ಒಂದೆರಡು ಬಾರಿ ಬೀಳುವ ಸಂಭವ ಇದೆ. ಕನಿಷ್ಠ ತಾಪಮಾನ 18 ಡಿಗ್ರಿಗೆ ಇಳಿಯುವ ಸೂಚನೆ ಇದೆ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+