ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್‌ ಧ್ವನಿ ದೂರವಾಣಿ ಮೇಲಿನ ನಿಷೇಧ ತೆರವಿಗೆ ನಾಯ್ಡು ಆಗ್ರಹ

By Staff
|
Google Oneindia Kannada News

* ದೀಪಾಕ್ಷಿ ಘೋಷ್‌

ನವದೆಹಲಿ : ಸರಕಾರಿ ಸ್ವಾಮ್ಯದ ವಿಎಸ್‌ಎನ್‌ಎಲ್‌ನ ಮೇಲಿನ ಏಕಸ್ವಾಮ್ಯಕ್ಕೆ ಮಂಗಳ ಹಾಡಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂ. ಚಂದ್ರಬಾಬು ನಾಯ್ಡು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ಕರೆಗಳಿಗೆ ಸಂಬಂಧಿಸಿದಂತೆ ಏಕಸ್ವಾಮ್ಯವನ್ನು ತೆರವುಗೊಳಿಸಲು 2002ನೇ ಇಸವಿಯ ಕಾಲಮಿತಿಯನ್ನು ತೆಗೆದು ಹಾಕಬೇಕೆಂದು ಹೇಳಿರುವ ನಾಯ್ಡು, ಹೊಸ ದೂರವಾಣಿ ನೀತಿಯಲ್ಲಿ ಇಂಟರ್‌ನೆಟ್‌ ಧ್ವನಿ ದೂರವಾಣಿ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.

ಭಾರತದ 15ನೇ ರಾಷ್ಟ್ರೀಯ ಆರ್ಥಿಕ ಸಮಾವೇಶ ಸಂದರ್ಭದಲ್ಲಿ ಮಾತನಾಡುತ್ತಿದ್ದ ನಾಯ್ಡು, ಅಂತಾರಾಷ್ಟ್ರೀಯ ಇಂಟರ್‌ನೆಟ್‌ ಧ್ವನಿ ದೂರವಾಣಿಯ ಮೇಲಿನ ನಿಷೇಧವನ್ನು ತೆಗೆದು ಹಾಕುವ ಕಾಲವನ್ನು ಮಂದೂಡಬಾರದಾಗಿತ್ತು ಎಂದು ಸಂಪರ್ಕ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ. ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ದೂರ ಸಂಪರ್ಕ, ವಾರ್ತಾ ಮತ್ತು ಪ್ರಸಾರ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರ ನಡುವೆ ಹೆಚ್ಚಿನ ಹೊಂದಾಣಿಕೆ ಅಗತ್ಯ ಎಂದು ನಾಯ್ಡು ಹೇಳಿದ್ದಾರೆ.

ಟೆಲಿಕಾಂ ವಲಯವನ್ನು ಮುಕ್ತ : ವೆಚ್ಚ ತಗ್ಗಿಸಲು ಟೆಲಿಕಾಂ ವಲಯವನ್ನು ಮುಕ್ತಗೊಳಿಸಬೇಕೆಂದು ಅನೇಕ ಸಲಹೆಗಳನ್ನು ನೀಡಿರುವುದಾಗಿ ಹೇಳಿರುವ ನಾಯ್ಡು, ಸಿಂಗಪೂರ್‌ ಮತ್ತು ಹಾಂಕಾಂಗ್‌ಗಳಲ್ಲಿ ನೀಡಿರುವಂತೆ, ಹೆಚ್ಚುವರಿ ಹಣ ನೀಡುವ ಮೂಲಕ ವಿಎಸ್‌ಎನ್‌ಎಲ್‌ನ ಏಕಸ್ವಾಮ್ಯವನ್ನು ತೆಗೆಯಲು ಹಾಕಿಕೊಂಡಿರುವ ಕಾಲಮಿತಿಯನ್ನು ಹಿಂದಕ್ಕೆ ಹಾಕಿಕೊಳ್ಳಬೇಕು. ಅಂತಾರಾಷ್ಟ್ರೀಯ ಕರೆಗಳ ಮೇಲಿನ ಸರಾಕರದ ಏಕಸ್ವಾಮ್ಯವನ್ನು ಕಡೆಗಾಣಿಸಲು ಹಾಂಕಾಂಗ್‌ ಸರಕಾರ ನಿಗದಿತ 8 ವರ್ಷಕ್ಕೆ ಮುಂಚೆ, ಪರಿಹಾರ ನೀಡಿ ವಲಯವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದೆ. ಸಿಂಗಪೂರ್‌ನಲ್ಲಿ ಸ್ಟಾರ್‌ಹಬ್‌ ಮತ್ತು ಇನ್ಫೋಕಾಮ್‌ ಡವಲಪ್‌ಮಂಟ್‌ ಅಥಾರಿಟಿ ಸಂಸ್ಥೆಗಳು ನಿಗದಿತ ಅವಧಿಗೆ ಎರಡು ವರ್ಷಕ್ಕೆ ಮುಂಚೆ ಪ್ರಾದೇಶಿಕ ದೂರವಾಣಿ ಸೌಲಭ್ಯ ಕಲ್ಪಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ನಾಯ್ಡು ತಿಳಿಸಿದ್ದಾರೆ.

ದೂರವಾಣಿ ಟ್ರಾಫಿಕ್‌ : ಹೊಸ ದೂರವಾಣಿ ನೀತಿಯಲ್ಲಿ ನಿಷೇಧಿಸಲಾಗಿರುವ ಇಂಟರ್‌ನೆಟ್‌ ಧ್ವನಿ ದೂರವಾಣಿ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಬಲವಾಗಿ ಪ್ರತಿಪಾದಿಸಿರುವ ನಾಯ್ಡು, ಕಳೆದ ವರ್ಷದಲ್ಲಿ ಈ ವಲಯದ ಗ್ರಾಹಕರ ವೇಳೆ 2.7 ಬಿಲಿಯನ್‌ ನಿಮಿಷಗಳಿಗೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. 2004ನೇ ಇಸವಿ ಹೊತ್ತಿಗೆ ಇದನ್ನು 135 ಬಿಲಿಯನ್‌ ನಿಮಿಷಗಳಷ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಜಪಾನ್‌ ಮತ್ತು ದಕ್ಷಿಣ ಕೊರಿಯಾಗಳಲ್ಲಿ ದೂರವಾಣಿ ಟ್ರಾಫಿಕ್‌ನ ಶೇಕಡಾ 15ರಷ್ಟು ಇಂಟರ್‌ನೆಟ್‌ಗೆ ವರ್ಗಾವಣೆಗೊಂಡಿದೆ ಎಂದು ನಾಯ್ಡು ವಿವರಿಸಿದ್ದಾರೆ.

ಭಾರತದಲ್ಲಿ ಡಿಜಿಟಲ್‌ ವಲಯದ ನಿರೀಕ್ಷಿತ ಕ್ರಾಂತಿ ಆಗದಿರುವುದರಿಂದ ಸಧ್ಯ ಭಾರತ ಅಪಾಯದ ಸ್ಥಿತಿ ಎದುರಿಸುತ್ತಿದೆ. ಇದರಿಂದಾಗಿ ಇಂಟರ್‌ನೆಟ್‌ ವೇಗವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಆದ್ದರಿಂದ ಇದ್ದಕ್ಕಾಗಿ ಪ್ರತ್ಯೇಕ ಬ್ಯಾಂಡ್‌ವಿಡ್ತ್‌ ಅಗತ್ಯವಿದ್ದು, ವಲಯವನ್ನು ಖಾಸಗಿಯವರಿಗೆ ಮುಕ್ತಗೊಳಿಸಬೇಕಾದ ಅಗತ್ಯವನ್ನು ನಾಯ್ಡು ಪ್ರತಿಪಾದಿಸಿದ್ದಾರೆ.

ಇಂಟರ್‌ನೆಟ್‌ ಬೆಳವಣಿಗೆ ವೇಗಗೊಳಿಸಲು ಕೇಂದ್ರ ಸರಕಾರ ಮಾನವ ಸಂಪನ್ಮೂಲ ಹೆಚ್ಚಿಸುವತ್ತ ಗಮನ ಹರಿಸಬೇಕಾಗಿದೆ. ಗ್ರಾಹಕರ ಹಿತ ರಕ್ಷಿಸಲು ಮತ್ತು ಸೈಬರ್‌ ಅಪರಾಧ ಹತ್ತಿಕ್ಕಲು ಪ್ರಮುಖವಾಗಿ ಉತ್ತಮ ದರ್ಜೆಯ ಶಿಕ್ಷಣದತ್ತ ಹಾಗೂ ಕಾಪಿರೈಟ್‌ ಮತ್ತು ಖಾಸಗಿ ವಿವರಗಳ ಮೇಲಿನ ರಕ್ಷಣೆ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮಾಹಿತ ತಂತ್ರಜ್ಞಾನದ ಬೆಳವಣಿಗೆ ಉತ್ತಮವಾಗಿ ನಡೆಯುತ್ತಿರುವಾಗ ಅದನ್ನು ನಿಯಂತ್ರಿಸುವ ನಿಯಮಗಳನ್ನು ಕಡಿಮೆ ಮಾಡಬೇಕೆಂದು ಎಂಟರ್‌ಟೈನ್‌ಮಂಟ್‌ನ ದೈತ್ಯ ಸಾಫ್ಟವೇರ್‌ ಸಂಸ್ಥೆಗಳಲ್ಲಿ ಒಂದಾದ ರಿkುೕ ಟೆಲಿವಿಷನ್‌ನ ಅಧ್ಯಕ್ಷ ಸುಭಾಷ್‌ ಚಂದ್ರ ಸರಕಾರವನ್ನು ಈ ಮುಂಚೆ ಆಗ್ರಹಿಸಿದ್ದರು. ಹೊರದೇಶಕ್ಕೆ ವಲಸೆ ತಪ್ಪಿಸಲು, ಇಂಟರ್‌ನೆಟ್‌ನಲ್ಲಿ ಕರೆಲಸ ಮಾಡುವ ಪ್ರತಿಯಾಬ್ಬರಿಗೂ ಎರಡು ಮೆಗಾ ಬಿಟ್‌ ಬ್ಯಾಂಡ್‌ವಿಡ್ತ್‌ಗಳನ್ನು ಮೀಸಲಿಡಬೇಕು ಎಂದು ಸುಭಾಷ್‌ ಚಂದ್ರ ಹೇಳಿದ್ದಾರೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X