ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಪಿ ಡಬಲ್ಸ್‌ ಗೆಲ್ಲುವ ಹುರುಪಿನಲ್ಲಿ ಪೇಸ್‌- ಭೂಪತಿ

By Staff
|
Google Oneindia Kannada News

ಬೆಂಗಳೂರು : ಡಿಸೆಂಬರ್‌ 13ರಿಂದ ಪ್ರಾರಂಭವಾಗಲಿರುವ ಗೋಲ್ಡ್‌ ಫ್ಲೇಕ್‌ ಎಟಿಪಿ ವಿಶ್ವ ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ 8ನೇ ಜೋಡಿಯಾಗಿ ಆಡಲಿದ್ದಾರೆ.

ಟೂರ್ನಿಯ ಸಂಯೋಜಕ ಕೃಷ್ಣ ಭೂಪತಿ ಮಂಗಳವಾರ ಸುದ್ದಿ ಪ್ರಕಟಣೆ ಹೊರಡಿಸಿ ಈ ವಿಷಯ ತಿಳಿಸಿದ್ದಾರೆ. 1997 ಹಾಗೂ 1999ರಲ್ಲಿ ಎರಡು ಬಾರಿ ವಿಶ್ವ ಡಬಲ್ಸ್‌ ಟೂರ್ನಿಯ ಫೈನಲ್ಸ್‌ ಪ್ರವೇಶಿಸಿರುವ ಪೇಸ್‌- ಭೂಪತಿ ಜೋಡಿ 1952ರ ನಂತರ ಒಂದು ವರ್ಷದಲ್ಲಿನ ಎಲ್ಲಾ ಗ್ರ್ಯಾಂಡ್‌ ಸ್ಲ್ಯಾಮ್‌ ಫೈನಲ್ಸ್‌ ಪ್ರವೇಶಿಸಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಳೆದ ವರ್ಷದ ಎಟಿಪಿ ಟೂರ್‌ ರ್ಯಾಂಕಿಂಗ್‌ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ಟೆನಿಸ್‌ ಒಕ್ಕೂಟ ಮೊದಲ ಸ್ಥಾನ ನೀಡಿತ್ತು.

ಕಳೆದ ಸಾಲಿನ ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ ಡಬಲ್ಸ್‌ ಗೆದ್ದಿರುವ ಹುರುಪಿನಲ್ಲಿರುವ ಪೇಸ್‌- ಭೂಪತಿ ಜೋಡಿ ವಿರಸ ಮರೆತು ಮತ್ತೆ ಒಂದಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳಿ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X