ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಪೆ ಬಂದರಿಗೆ ಬಂದವು ಯುದ್ಧ ನೌಕೆಗಳು

By Staff
|
Google Oneindia Kannada News

ಉಡುಪಿ : ದಕ್ಷಿಣ ವಿಭಾಗ ನೌಕಾದಳ ಸಪ್ತಾಹದ ಅಂಗವಾಗಿ ಪಶ್ಚಿಮ ಕರಾವಳಿಯಲ್ಲಿ ತನ್ನ ಯುದ್ಧ ನೌಕೆಗಳನ್ನು ಪ್ರದರ್ಶಿಸುತ್ತಿದ್ದು, ಐಎನ್‌ಎಸ್‌ ಮಲ್ವಾನ್‌ ಮತ್ತು ಐಎನ್‌ಎಸ್‌ ಮಲ್ಪೆ ಯುದ್ಧ ನೌಕೆಗಳು ಉಡುಪಿಯ ಮಲ್ಪೆ ಬಂದರಿಗೆ ಆಗಮಿಸಿವೆ.

ಈ ವಿಶೇಷ ಯುದ್ಧ ನೌಕೆಗಳು ಭಯೋತ್ಪಾದಕರು ನೀರಿನ ಆಳದಲ್ಲಿ ಹುದುಗಿಸಿಟ್ಟಿರುವ ಜಲಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕಿೃಯ ಗೊಳಿಸುತ್ತವೆ ಎಂದು ಲೆ.ಕ. ಅಜೆಯ್‌ ಸಿರೋಹಿ ಹೇಳಿದ್ದಾರೆ.

1984 ರಲ್ಲಿ ರಷ್ಯಾದಿಂದ ಖರೀದಿಸಲಾಗಿರುವ ಈ ನೌಕೆಗಳು ಆಯಸ್ಕಾಂತದ ಆಕರ್ಷಣೆಗೆ ಒಳಗಾಗುವುದಿಲ್ಲ, ಸದ್ಯ ಪಶ್ಚಿಮ ಕರಾವಳಿಯಲ್ಲಿ ಆರು ನೌಕೆಗಳು ಸಂಚರಿಸುತ್ತಿದ್ದು, ಇಬ್ಬರು ನೌಕಾ ಅಧಿಕಾರಿಗಳು, 20 ಇತರ ಸಿಬ್ಬಂದಿ ನೌಕೆಯಲ್ಲಿರುತ್ತಾರೆ. ಮಲ್ಪೆ ಬಂದರಿಗೆ ಆಗಮಿಸಿದ ನೌಕೆಯನ್ನು ವೀಕ್ಷಿಸಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X