Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನೀ ನನಗಿದ್ದರೆ ನಾ ನಿನಗೆ ಎಂಬ ಕ್ಯಾಟಗರಿಯವರಲ್ಲ ನೀವು. ಗೆಳೆಯನ ಮೇಲೆ ಎಷ್ಟೇ ಸಿಟ್ಟಿದ್ದರೂ ಅವನ ಕಷ್ಟ ಕ್ಕೆ ಸ್ಪಂದಿಸುವವರಾದ್ದರಿಂದ, ಇವತ್ತು ನಿಮಗೆ ಗೆಳೆಯನ ದರ್ಶನವಾಗಲಿದೆ. ಜೇಬು ಖಾಲಿಯಾಗಲಿದೆ ಅಂತ ಬೇರೆ ಹೇಳಬೇಕಾ, ಕೊಡುವಿಕೆಯಲ್ಲಿಯೇ ಖುಷಿ ಪಡುತ್ತಾರಿ. ನಿಮ್ಮ ಸನಿಹದಲ್ಲಿಯೇ ಶೃಂಗಾರ ಭಾಗ್ಯವಿದೆ. ಗುಡ್‌ ಲಕ್‌ !

ವೃಷಭ : ಅಯ್ಯಯ್ಯಾ.. ಎಷ್ಟು ಕೆಲಸ ನಿಮ್ಮ ಮುಂದೆ ರಾಶಿ ಬಿದ್ದಿದೆ. ನಿಮ್ಮ ಬಳಿ ತಾಳ್ಮೆ ಯಾಂದಿದ್ದರೆ, ಸಾಮಾಜಿಕ ಕೆಲಸದಲ್ಲಿ , ಜಯಲಕ್ಷ್ಮಿ ತಾನಾಗೇ ಬಂದು ಪಕ್ಕ ನಿಲ್ಲುತ್ತಾಳೆ. ಸಂಜೆಯಷ್ಟೊತ್ತಿಗೆ ರಜಾ ಕಾಲದ ಪ್ರವಾಸ ಯೋಜನೆ ನಿಮ್ಮ ಟೇಬಲ್‌ ಮುಂದೆ ಬರಬಹುದು. ಗೆಳೆಯರನ್ನು ಪೂರ್ತಿ ನಂಬಿ ಬಿಟ್ಟೀರಾ... ಕೆಟ್ಟಿರಿ.

ಮಿಥುನ : ನಿಮ್ಮ ಹೈಟೆಕ್‌ ಯೋಚನೆಗಳು ಕಾರ್ಯಗತವಾಗಲಿವೆ. ನೀವು ಯಾವುದರ ಬಗ್ಗೆ ಅಧ್ಯಯನ ಮಾಡಬೇಕೆಂದು ಕೊಂಡಿದ್ದೀರೋ, ಆ ಕ್ಷೇತ್ರದಲ್ಲಿ ನಿಮಗೀಗಾಲೇ ಪರಿಣತಿ ಇದೆ. ಆದರೆ ನೀವಿನ್ನೂ ವಿದ್ಯಾರ್ಥಿ . ಕಲಿಯುವುದಕ್ಕೆ ಸಮುದ್ರದಷ್ಟಿದೆ.

ಕಟಕ : ಬಿಸಿನೆಸ್‌ ಸಮಸ್ಯೆಗಳ ಬಗ್ಗೆ ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತೀರಿ , ಅವು ಅವುಗಳ ಪಾಡಿಗೆ ಸರಿಹೋಗುತ್ತವೆ. ಇದು ನಿಮಗೆ ರಿಲ್ಯಾಕ್ಸಿಂಗ್‌ ದಿನ. ಅದೇನೋ ಪ್ರೊಜೆಕ್ಟ್‌ ಇದೆಯಲ್ಲಾ, ಮರೆತಿರಾ.. ಈಗ ಸುಸಮಯ ಮುಂದುವರೆಸಿ.

ಸಿಂಹ : ಸ್ನೇಹಿತರು, ಕುಟುಂಬ ನಿಮ್ಮ ಬಗ್ಗೆ ಇಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಕೆಲಸದಲ್ಲಿ ತುಸು ಬದಲಾವಣೆಯಾದರೂ ಹೆಚ್ಚು ತಲೆ ಬಿಸಿ ಮಾಡಿಕೊಳ್ಳಬೇಡಿ.

ಕನ್ಯಾ : ಇವತ್ತು ಸಂಜೆ ನೀವು ಬಂಧುಗಳೊಡನೆ ಗಮ್ಮತ್ತು ಮಾಡಬಹುದು. ಸಂಥಿಂಗ್‌ ಇಂಟರೆಸ್ಟಿಂಗ್‌. ಮನರಂಜನೆ ಕೊಡುವ ಸಂಜೆಯ ಪ್ರತೀಕ್ಷೆಯಲ್ಲಿರಿ. ನಾಳೆ ಟ್ರಿಪ್‌ ಹೊರಡುವ ಅವಕಾಶವೂ ಸಿಕೀತು. ಈ ನವೆಂಬರ್‌ ಚಳಿಯಿಂದ ರಕ್ಷಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಮತ್ತೆ.

ತುಲಾ : ಇವತ್ತೇನೋ ತೊಂದರೆ ಯಾಗುತ್ತದೆ ಎಂದು ಹೆದರಿಕೊಂಡ್ಹಂಗಿದೆ. ಹಾಗೇನಾಗದು. ಅಚಾನಕ್‌ ಆಗಿ ಸ್ವಲ್ಪ ಬೇಸರದ ಸುದ್ದಿ ಬರಬಹುದು. ಕಾಗೆ ಕೋಳಿ ಜಗಳಗಳದಂತಹುದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.

ವೃಶ್ಚಿಕ : ನೀವು ಹಾಕಿಕೊಂಡಿರುವ ಬಿಸಿನೆಸ್‌ ಪ್ಲಾನ್‌ ಸುಪರ್‌. ಗೋ ಅಹೆಡ್‌. ರಜಾಗಳೂ ಕಾದಿವೆ. ಆದರೂ ಮಜಾ ಮಾಡುವುದು ಬಿಟ್ಟು, ಕೆಲಸದ ಕಡೆಗೆ ಸ್ವಲ್ಪ ಗಮನ ಕೊಡಿ.

ಧನಸ್ಸು : ಲೋನು, ಫೈನಾನ್ಸ್‌ ಆಫೀಸರ್‌ ಅಂತ ಸುತ್ತಾಡಿ ಸುಸ್ತಾಯಿತೇ ... ಕೊನೆಗೆ ಗೆಲುವು ನಿಮ್ಮದೇ ಆದ್ದರಿಂದ ಡೋಂಟ್‌ ಬಿ ಡಿಪ್ರೆಸ್ಡ್‌.

ಮಕರ : ಆತ್ಮ ಸಾಕ್ಷಿ ಏನೋ ಕಿರಿ ಕಿರಿ ಮಾಡುತ್ತಿದೆ ಅನಿಸುತ್ತಿದೆ ತಾನೇ. ಕಿವುಡರಾದೀರಾ ಜೋಕೆ. ಅನಾಸಕ್ತಿ ತೋರಿದರೆ, ದಾರಿ ಮಧ್ಯೆ ರಾಶಿ ಕಷ್ಟಗಳು ಕುಟುಕಬಹುದು.

ಕುಂಭ : ಉತ್ತರೋತ್ತರ ಅಭಿವೃದ್ಧಿಯ ಕನಸಿನ ಮೊದಲು ಮೆಟ್ಟಿಲು ಏರುತ್ತಿದ್ದೀರಿ. ಆರೋಗ್ಯ, ಸಂಗೀತ ... ವ್ಯಾಯಾಮ ಎಲ್ಲ ಈಗ ಆರಂಭಿಸಲು ಸಕಾಲ.

ಮೀನ : ಪರಿಸ್ಥಿತಿಯ ಪೂರ್ತಿ ಉಪಯೋಗ ಪಡೆದುಕೊಳ್ಳುವುದು ನಿಮ್ಮ ಜಾಣತನಕ್ಕೆ ಬಿಟ್ಟಿದ್ದು. ಔದ್ಯೋಗಿಕ ಕ್ಷೇತ್ರದಲ್ಲಿನ ಜನಪ್ರಿಯತೆ, ಪೂಸಿ ಹೊಡೆಯುವಿಕೆಯಿಂದ ಲಾಭವಾದೀತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+