ಫ್ಲಾರೆನ್ಸ್ ಸ್ಕೂಲ ಕೋಣೆಯಲ್ಲಿ ಟೈಟಾನಿಕ್ ಷಿಪ್!
ಬೆಂಗಳೂರು : ಆ ಪುಟ್ಟ ಹುಡುಗಿಗೆ ಮೇಜು ಪೂರ್ತಿಯಾಗಿ ಎಟುಕುವುದಿಲ್ಲ. ಮೇಜಿನ ವೆೆುೕಲೊಂದು ಬಾಟಲಿ, ಅದರಡಿಗೊಂದು ದೀಪ. ಬಾಟಲಿಗೆ ಬೆಲೂನೊಂದನ್ನೇ ಮುಚ್ಚಳವಾಗಿ ಕಟ್ಟಿದ್ದಳು. ಕಿರ್ರನೆ ಕಡ್ಡಿ ಗೀರಿ ದೀಪ ಹಚ್ಚುತ್ತಾಳೆ. ಬಾಟಲಿ ಬಿಸಿಯಾಗಿ ಬಲೂನು ದೊಡ್ಡದಾಗುತ್ತಾ ಬರುತ್ತದೆ. ಇದು ಗಾಳಿಯ ಕಣಗಳು ಬಿಸಿಯಾದಂತೆ ಉಬ್ಬುತ್ತವೆ ಎಂಬುದನ್ನು ತೋರಿಸುತ್ತದೆ ಎಂದು ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ವಿವರಿಸುತ್ತಾಳೆ.
ನಗರದ ರಾಜ್‌ಮಹಲ್ ವಿಲಾಸ್ ಬಡಾವಣೆಯಲ್ಲಿರುವ ಫ್ಲಾರೆನ್ಸ್ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ನವಂಬರ್ 25 ಮತ್ತು 26 ರಂದು ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಲ್ಲಿ ಕಂಡ ಪುಟಾಣಿಗಳ ಕುಶಲತೆಯ ಅಭಿವ್ಯಕ್ತಿಗೊಂದು ಉದಾಹರಣೆ ಇದು.
ವಸ್ತು ಪ್ರದರ್ಶನಕ್ಕೆ ನೂರಾರು ಪೋಷಕರು ಹಾಗೂ ವಿಜ್ಞಾನಾಸಕ್ತರು ಭೇಟಿ ಕೊಟ್ಟಿದ್ದರು. ತಮ್ಮ ಮಕ್ಕಳು ಕ್ಲಾಸ್ ರೂಂನಲ್ಲಿ ಏನೇನು ಕಲಿತಿದ್ದಾರೆ, ಅವರಿಗೆ ಸಾಮಾನ್ಯ ಜ್ಞಾನ ಎಷ್ಟು ತಿಳಿದಿದೆ ಎಂದು ವಸ್ತು ಪ್ರದರ್ಶನಕ್ಕೆ ಬಂದ ಪಾಲಕರು ತಮಗೆ ತಾವೇ ಲೆಕ್ಕ ಹಾಕಿಕೊಂಡು ಖುಷಿ ಪಟ್ಟರು.
ಶಾಲೆಯ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಭೇಟಿ ಕೊಟ್ಟವರಿಗೆ ವಿವರಿಸಿದರು. ಒಂದು ಕಡೆ ಟೈಟಾನಿಕ್ ಶಿಪ್‌ನ ಪ್ರಾತ್ಯಕ್ಷಿಕೆ, ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿಯ ಕಪ್ಪು ಡಾಂಬರು ರಸ್ತೆಯ ಮಾಡೆಲ್, ಮಗದೊಂದು ಕಡೆ ಬೋಟಿಂಗ್ ಕ್ಲಬ್ .... ಹೀಗೆ ಪ್ರೆೃಮರಿ ಮತ್ತು ಹೈಸ್ಕೂಲ್ ಮಕ್ಕಳ ಕೈ ಚಳಕ ಶನಿವಾರ ಮತ್ತು ಆದಿತ್ಯವಾರ ಶಾಲೆಯ ತುಂಬಾ ಅಚ್ಚು ಕಟ್ಟಾಗಿ ಹರಡಿಕೊಂಡಿತ್ತು. ಒಂದೊಂದು ಪ್ರಾತ್ಯಕ್ಷಿಕೆಗಳ ಹಿಂದೆಯೂ ಒಬ್ಬೊಬ್ಬ ಪುಟ್ಟ ಮರಿ, ವೀಕ್ಷಿಸಲು ಬಂದವರಿಗೆ ವಿವರಿಸಲು ಬದ್ಧವಾಗಿ.
ಪುಟ್ಟ ಮನೆ, ಇಂಜಿನ್‌ನ ಮಾದರಿಗಳನ್ನು ಪ್ರದರ್ಶನ ವೀಕ್ಷಿಸಲು ಬಂದ ಹಿರಿಯರ ಮುಂದೆ ತಮ್ಮದೇ ಪುಟಾಣಿ ಭಾಷೆಯಲ್ಲಿ ವಿವರಿಸಿದರು. ಬೆಂಗಳೂರು ಪಟ್ಟಣದ ನಾಗರಿಕರಿಗೆ ಹಳ್ಳಿ ಬದುಕಿನ ಪ್ರಾತ್ಯಕ್ಷಿಕೆಯನ್ನು ಮುಂದೆ ಹರಡಿಕೊಂಡು, ರಾಷ್ಟ್ರೀಯ ಅಭಯಾರಣ್ಯದ ಹಸಿರಿನ ಹಿಂದೆ ನಿಂತುಕೊಂಡು ಕತ್ತೆತ್ತಿ ಹಿರಿಯರ ಮುಖನೋಡುತ್ತಾ ವಿವರಿಸಿದ ಪುಟಾಣಿಗಳನ್ನು ನೋಡಿ ವೀಕ್ಷಕರು ಕೂಡ ಖುಷಿ ಪಟ್ಟುಕೊಂಡು , ತಮ್ಮ ತಮ್ಮ ಮಗಳ- ಮಗನ ಕೌಶಲ್ಯವನ್ನು ಹೊಗಳಿಕೊಂಡು ಪರಸ್ಪರ ಮಾತಾಡಿಕೊಂಡು ಖುಷಿಯಾದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications