ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಬರಲಿರುವ ವೈದ್ಯಕೀಯ ಕಸ ಸಂಸ್ಕರಣಾ ಘಟಕ

By Staff
|
Google Oneindia Kannada News

*ಇಮ್ರಾನ್‌ ಖುರೇಶಿ (ಐಎಎನ್‌ಎಸ್‌)

ಬೆಂಗಳೂರು : ಸಿಲಿಕಾನ್‌ ವ್ಯಾಲಿಯಲ್ಲಿ ಪ್ರತಿದಿನ ಸಂಗ್ರಹವಾಗುವ ವೈದ್ಯಕೀಯ ಕಸವನ್ನು ಸಂಸ್ಕರಿಸುವ ದೇಶದ ಪ್ರಪ್ರಥಮ ಘಟಕ ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ಮಾಡಲಿದೆ.

ಬೆಂಗಳೂರಿನಲ್ಲಿರುವ 400ಕ್ಕೂ ಹೆಚ್ಚು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹೊರಹಾಕುವ ಸಿರಂಜ್‌, ಪ್ಲಾಸ್ಟಿಕ್‌ ಮುಂತಾದ ಅಪಾಯಕಾರಿ ವೈದ್ಯಕೀಯ ಕಸಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸಂಸ್ಕರಿಸಲಾಗುತ್ತದೆ. ನಾಲ್ಕು ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ತಲೆ ಎತ್ತಲಿರುವ ಈ ಸಂಸ್ಕರಣಾ ಘಟಕವನ್ನು ಮುಂಬೈ ಮೂಲದ ಮೆರಿಡಿ ಈಕೋ ಇಂಡಸ್ಟ್ರೀಸ್‌ ಆರಂಭಿಸಲಿದ್ದು, ಸಂಸ್ಕರಣಕ್ಕೆ ಮೈಕ್ರೋವೇವ್‌ ತಾಂತ್ರಿಕತೆಯನ್ನು ಬಳಸಿಕೊಳ್ಳಲಿದೆ. ನಗರದಲ್ಲಿರುವ 400ಕ್ಕೂ ಹೆಚ್ಚು ಆಸ್ಪತ್ರೆಗಳು ಪ್ರತಿದಿನ ಕನಿಷ್ಟ ತಲಾ ಅರ್ಧ ಕೆಜಿಯಿಂದ 2.5 ಕೆಜಿಗಳವರೆಗೆ ವೈದ್ಯಕೀಯ ಕಸವನ್ನು ಹೊರಹಾಕುತ್ತವೆ. ಈಗಿನ ಕಾನೂನು ಪ್ರಕಾರ ಬರುವ ಜೂನ್‌ನೊಳಗೆ ಪ್ರತಿ ಆಸ್ಪತ್ರೆಗಳೂ ತನ್ನದೇ ಆದ ಕಸ ನಿರ್ವಹಣಾ ಘಟಕಗಳನ್ನು ಸ್ಥಾಪಿಸಿಕೊಳ್ಳಬೇಕಿದೆ. ಆದರೆ ಕಲವೇ ಅಸ್ಪತ್ರೆಗಳು ಮಾತ್ರ ವ್ಯವಸ್ಥೆ ಮಾಡಿಕೊಂಡಿವೆ. ಉಳಿದ ಆಸ್ಪತ್ರೆಗಳಲ್ಲಿ ಸುಮಾರು 65 ಆಸ್ಪತ್ರೆಗಳು ಮೆರಿಡಿ ಕಂಪನಿಯಾಂದಿಗೆ ಒಪ್ಪಂಧ ಮಾಡಿಕೊಂಡಿದ್ದು, ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಲಿ ಕೂಡ ಹಸಿರು ನಿಶಾನೆ ತೋರಿಸಿದೆ ಎಂದು ಮೆರಿಡಿ ಈಕೋ ಇಂಡಸ್ಟ್ರೀಸ್‌ನ ರಮೇಶ್‌ ಬಾಬು ತಿಳಿಸಿದ್ದಾರೆ.

ಪರಿಸರ ಮಿತ್ರ : ಈಗ ಕೆಲವು ಖಾಸಗಿ ನರ್ಸಿಗ್‌ ಹೋಂಗಳು ಇನ್ಸಿನೇಟರ್‌ ಉಪಯೋಗಿಸಿ ಸಂಸ್ಕರಣೆ ಮಾಡುತ್ತಿವೆ. ಇದು ಪರಿಸರದ ಮೆಲೆ ಹಾನಿ ಮಾಡುವುದರಿಂದ ಈ ವಿಧಾನದ ಸಂಸ್ಕರಣಕ್ಕೆ ತಾವು ಪ್ರೋತ್ಸಾಹ ನೀಡುತ್ತಿಲ್ಲ. ಆದರೆ ಮೈಕ್ರೋವೈವ್‌ ಉಪಯೋಗಿಸಿ ಸಂಸ್ಕರಿಸುವುದರಿಂದ ಪರಿಸರದ ಮೇಲೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಂಸ್ಕರಿಸಿದ ನಂತರ ಬರುವ ಕಸವನ್ನು ದೂರ ಸಾಗಿಸಲಾಗುವುದು ಎಂದು ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದ್ದಾರೆ.

ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಿಂದ ಬರುವ ಕಸವನ್ನು ವಿಶೇಷ ಚೀಲಗಳಲ್ಲಿ ತುಂಬಿ, ಸಾಗಿಸುವ ಸಲುವಾಗಿಯೇ ನಿರ್ಮಿಸಲಾದ ವಾಹನದಲ್ಲಿ ಸಂಸ್ಕರಣಾ ಘಟಕದ ಜಾಗಕ್ಕೆ ಒಯ್ಯಲಾಗುವುದು. ಕಸದಲ್ಲಿರುವ ಸಿರಿಂಜ್‌ ಮತ್ತು ಪ್ಲಾಸ್ಟಿಕ್‌ ವಸ್ತುಗಳನ್ನು ಮೈಕ್ರೋವೇವ್‌ ಮುಖಾಂತರ ಸಂಸ್ಕರಿಸಲಾಗುವುದು. ಹೀಗೆ ಸಂಸ್ಕರಿಸಲಾದ ವಸ್ತುಗಳನ್ನು ಪುನಾ ಉಪಯೋಗಿಸಬಹುದು. ಈ ವಿಧಾನದ ಸಂಸ್ಕರಣೆಯಿಂದ ಯಾವುದೇ ರೀತಿಯ ಅಪಾಯಕಾರಿ ಅನಿಲವಾಗಲಿ, ದ್ರವವಾಗಲಿ ಹೊರಬರುವುದಿಲ್ಲ ಎಂದು ರಮೇಶ್‌ ಬಾಬು ವಿವರಿಸಿದ್ದಾರೆ.

ಅಗತ್ಯ ತಾಂತ್ರಿಕತೆ : ವಸ್ತುಗಳು ಮೈಕ್ರೋವೇವ್‌ ತಾಂತ್ರಿಕತೆಯಿಂದ ಸಂಸ್ಕರಣೆಗೊಂಡ ನಂತರ ಶ್ರೆಡ್ಡರ್‌ ಮತ್ತು ಇನ್ಸಿನೇಟರ್‌ ಮೂಲಕ ಹಾದು ಹೋಗುತ್ತವೆ. ಆದ್ದರಿಂದ ಮೈಕ್ರೋವೇವ್‌ ತಾಂತ್ರಿಕತೆ ಅತ್ಯಂತ ಸೂಕ್ತ ಎಂದು ಎಂ. ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜಿನ ಗೋಪೀನಾಥ್‌ ತಿಳಿಸಿದ್ದಾರೆ. ಎಂ. ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜು ಇತರ ಕೆಲವು ಸಂಸ್ಥೆಗಳ ಜೊತೆಗೂಡಿ ವೈದ್ಯಕೀಯ ಕಸ ನಿರ್ವಹಣೆ ಕುರಿತು ಸಂಶೋಧನೆ ನಡೆಸುತ್ತಿದೆ.

ಆಸ್ಪತ್ರೆಗಳು ಹೊರಹಾಕುವ ಇತರ ವೈದ್ಯಕೀಯ ಕಸಗಳಾದ ಬ್ಯಾಂಡೇಜ್‌ ಮುಂತಾದ ಕಸಗಳನ್ನು ಸಂಸ್ಕರಿಸಿದ ನಂತರ ನಗರಪಾಲಿಕೆ ಕಸದಲ್ಲಿ ದೂರ ಸಾಗಿಸಲಾಗುವುದು. ಸಂಸ್ಕರಿಸಿದ ಕಸ ಸೋಂಕುರಹಿತವಾಗಿರುವುದಲ್ಲದೆ ಶೇಕಡಾ 80ರಷ್ಟು ಗಾತ್ರವನ್ನು ಕಳೆದುಕೊಳ್ಳುತ್ತದೆ ಎಂದು ಬಾಬು ವಿವರಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X