ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗ-ತೀ-ಕ-ರ-ಣ-ದ ಭರ-ದ-ಲ್ಲಿ ವಿಜ್ಞಾ-ನ-ದ ಸವಾ-ಲು-ಗ-ಳ ನಿರ್ಲ-ಕ್ಷಿ-ಸ-ಬೇ-ಡಿ- ಮಾಶೆ-ಲ್ಕ-ರ್‌

By Staff
|
Google Oneindia Kannada News

ಬೆಂಗಳೂರು : ಜಾಗತೀಕರಣದ ಓಟದಿಂದ ದೂರ ನಿಂತು ವೈಜ್ಞಾನಿಕ ಸೂಕ್ಷ್ಮತೆಗಳಲ್ಲಿರುವ ಸವಾಲುಗಳನ್ನು ಎದುರಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಅಧ್ಯಯನ ವಿಭಾಗದ ಕಾರ್ಯದರ್ಶಿ ಡಾ. ಆರ್‌. ಎ. ಮಾಶೆಲ್ಕರ್‌ ವೈಜ್ಞಾನಿಕ ಸಮೂದಾಯವನ್ನು ಎಚ್ಚರಿಸಿದ್ದಾರೆ.

ಮಾಧ್ಯಮಗಳಲ್ಲಾಗುತ್ತಿರುವ ಬದಲಾವಣೆ ಮತ್ತು ಜ್ಞಾನ ನಿರ್ವಹಣೆ ಎಂಬ ವಿಷಯದ ಕುರಿತ ಮೂರು ದಿನಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪ್ರಸ್ತುತ ವೈಜ್ಞಾನಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳಿಗೆ ಸ್ಪಂದಿಸುವುದು ಭಾರತೀಯ ವಿಜ್ಞಾನದ ಧರ್ಮವಾಗಬೇಕು ಎಂದರು.

ಮಾಹಿತಿ ತಂತ್ರಜ್ಞಾನ ತಜ್ಞರು ನಮ್ಮ ಪರಂಪರಾ ಜ್ಞಾನವನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಅರಿಶಿಣ, ಬಾಸ್ಮತಿ ಅಕ್ಕಿಗಾಗಿ ಹೋರಾಡಿದಂತೆ ಬೌದ್ಧಿಕ ಜ್ಞಾನಕ್ಕಾಗಿ ದೇಶ ಹೋರಾಡಬೇಕಾಗುತ್ತದೆ ಎಂದು ಅವರು ಎಚ್ಚ-ರಿ-ಸಿದರು. ವಿಜ್ಞಾನ ವಲಯದಿಂದ ಪ್ರತಿಭೆಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬೃಹತ್‌ ಪ್ರಮಾಣದಲ್ಲಿ ಕಾಲಿಡುತ್ತಿರುವುದರಿಂದ ಇತರ ಕ್ಷೇತ್ರಗಳಲ್ಲಿನ ಸಾಧನೆಗಳಿಗೆ ಕೊರತೆಯುಂಟಾಗುತ್ತದೆ ಎಂದು ಮಾಶೆಲ್ಕರ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X