Get Updates
Get notified of breaking news, exclusive insights, and must-see stories!

ದೀನ್‌ದಾರ್‌ ಚನ್ನಬಸವೇಶ್ವರ ಸಂಘಟನೆ ನಿಷೇಧಿಸಿ- ಸರ್ವಧರ್ಮ ಸಮ್ಮೇಳನ

ಬೆಂಗಳೂರು : ದೀನ್‌ದಾರ್‌ ಚನ್ನ ಬಸವೇಶ್ವರ ಸಂಘಟನೆಯನ್ನು ನಿಷೇಧಿಸಬೇಕೆಂದು ಸರ್ವ ಧರ್ಮಗಳ ಸಮ್ಮೇಳನ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಸಂಘಟನೆಯ ಸದಸ್ಯರು ಮುಸ್ಲಿಂ ಧರ್ಮಕ್ಕೆ ಸೇರಿದವರಲ್ಲ ಎಂದು ಸಮ್ಮೇಳನ ಅಭಿಪ್ರಾಯ ಪಟ್ಟಿತು.

ಧರ್ಮಗಳ ನಡುವೆ ಗೊಂದಲವನ್ನು ಸೃಷ್ಟಿಸಿ, ಹಿಂಸಾಚಾರ ನಡೆಸುತ್ತಿರುವ ಸಂಘಟನೆಯ ಕೃತ್ಯವನ್ನು ಸಭೆ ಒಮ್ಮತದಿಂದ ಖಂಡಿಸಿತು. ಜಮಾಯಿತ್‌ ಇ ಇಲಾಮ್‌ ಹಿಂದ್‌ ಸಂಘ ಶನಿವಾರ ಸರ್ವಧರ್ಮ ಸಮ್ಮೇಳನವನ್ನು ಏರ್ಪಡಿಸಿತ್ತು .

ಮುಸ್ಲಿಮರು ಶಾಂತಿ ಪ್ರಿಯರು. ಅವರಿಗೂ, ದೇಶದಲ್ಲಿ ವಿಷ ಬೀಜ ಬಿತ್ತುವ ಮೂಲಕ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ದೀನ್‌ದಾರ್‌ ಸಂಘಟನೆಗೂ ಸಂಬಂಧವಿಲ್ಲ ಎಂದು ಸಮ್ಮೇಳನದಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ಐ.ಜಿ. ಸನದಿ ಹೇಳಿದರು. ದೀನ್‌ದಾರ್‌ನ ಸ್ಥಾಪಕ ಸಿದ್ದಿಕ್‌ ದೀನ್‌ದಾರ್‌ ಅವರು, ವೀರಶೈವ ಮತ್ತು ಇಸ್ಲಾಂ ಧರ್ಮಗಳಿಗೆ ಮೋಸ ಮಾಡಿದ್ದಾರೆ. ಅವರು ತಾವೇ ಚನ್ನಬಸವೇಶ್ವರರ ಅವತಾರ ಅನ್ನುವ ಭ್ರಮೆಯನ್ನು ಹುಟ್ಟಿಸಿದರು ಹಾಗೂ ತಾವು ಪ್ರಚಾರ ಮಾಡಿದ ಖಾದಿಯಾನಿ ಧರ್ಮವನ್ನು ನಿಜವಾದ ಇಸ್ಲಾಂ ಎನ್ನುವ ತಪ್ಪು ಕಲ್ಪನೆಯನ್ನು ಮೂಡಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ ಸನದಿ, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದರು.

ಸಮ್ಮೇಳನದಲ್ಲಿ ಮಾತನಾಡಿದ ಆದಿ ಚುಂಚನಗಿರಿ ಕ್ಷೇತ್ರದ ಬಾಲ ಗಂಗಾಧರನಾಥ ಸ್ವಾಮೀಜಿ ಧರ್ಮದ ಹೆಸರಿನಲ್ಲಿ ಅನೈತಿಕ ಕೆಲಸ ಮಾಡಬಾರದು. ಪ್ರೀತಿ, ವಿಶ್ವಾಸ ಹಂಚುವುದು ಧರ್ಮದ ಕೆಲಸವಾಗಬೇಕು ಎಂದರು. ಚರ್ಚ್‌ ಸ್ಫೋಟವನ್ನು ಬಲವಾಗಿ ಖಂಡಿಸಿದ ಸ್ವಾಮೀಜಿ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತಿರುವ ಸಂಘಟನೆಯ ಕೃತ್ಯಗಳ ಬಗ್ಗೆ ವಿಷಾದಿಸಿದರು.

ವಸತಿ ಸಚಿವ ಕಮರುಲ್‌ ಇಸ್ಲಾಂ, ಸಂಸದ ಸಿ.ಕೆ. ಜಾಫರ್‌ ಷರೀಫ್‌, ಜೈನ ಮುನಿ ಕಮಲ್‌ ಮುನಿ ಮಹಾರಾಜ್‌, ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+