ಡಾ. ರಾಜ್ಕುಮಾರ್ ಬಿಡುಗಡೆ ಮಾಡಿಸಿದ್ದು ನಾನಲ್ಲ : ಡಾ. ಭಾನು
ಬೆಂಗಳೂರು : ರಾಜ್ರನ್ನು ಬಿಡುಗಡೆ ಮಾಡಿಸಿದ ಕೀರ್ತಿ ಯಾರಿಗೆ ? ಇದು ಈಗ ಬಗೆಹರಿಯದ ಪ್ರಶ್ನೆಯಾಗಿದೆ. ತಮ್ಮನ್ನು ಬಿಡುಗಡೆ ಮಾಡಿಸಿದ್ದು ಡಾಕ್ಟ್ರಮ್ಮ ಭಾನುಮತಿ ಎಂದು ರಾಜ್ಕುಮಾರ್ ಅವರೇ ಸ್ವತಃ ವಿಧಾನಸೌಧದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ 24 ಗಂಟೆಗಳೊಳಗೆ ಚೆನ್ನೈನಲ್ಲಿ ನೆಡುಮಾರನ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ವೈದ್ಯೆ ಭಾನು ಅವರ ಸಲಹೆಯಂತೆ ತಾವು ಅನಾರೋಗ್ಯದ ನಾಟಕ ಆಡಿದ್ದರಿಂದಲೇ ತಮ್ಮ ಬಿಡುಗಡೆ ಆಯಿತು ಎಂಬ ಹೇಳಿಕೆಯನ್ನು ರಾಜ್ ಅಲ್ಲಗಳೆದಿದ್ದಾರೆ ಎಂದು ನೆಡುಮಾರನ್ ತಿಳಿಸಿದ್ದಾರೆ. ಈ ಸಂಬಂಧದ ರಾಜ್ಕುಮಾರ್ ಹೇಳಿಕೆಯನ್ನು ಪಳ ನೆಡುಮಾರನ್ ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ್ದಾರೆ. ರಾಜ್ರನ್ನು ಬಿಡುಗಡೆ ಮಾಡಿಸಿದ್ದು, ತಾವೇ ಎಂದು ಹೇಳಿಕೊಂಡಿರುವ ನೆಡುಮಾರನ್ ಅದಕ್ಕಾಗಿ ತಾವು ವೀರಪ್ಪನ್ಗೆ ನೀಡಿರುವ ವಾಗ್ದಾನಗಳ ಬಗ್ಗೆ ಕೂಡ ವಿವರಿಸಿದ್ದಾರೆ.
ಡಾ. ಭಾನು ಸ್ಪಷ್ಟನೆ : ರಾಜ್ಕುಮಾರ್ ಬಿಡುಗಡೆಗೆ ತಾವೇ ಮುಖ್ಯಕಾರಣ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಡಾ. ಭಾನು ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಕುಮಾರ್ ಅವರ ಆರೋಗ್ಯ ತಪಾಸಣೆಗಾಗಿ ಮಾತ್ರವೇ ವೈದ್ಯಯಾದ ನಾನು ಕಾಡಿಗೆ ಹೋಗಿದ್ದೆ. ಇದಕ್ಕಿಂತ ಹೆಚ್ಚಿನ ಪಾತ್ರವನ್ನೇನೂ ನಾನು ವಹಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸಂಧಾನಕಾರರು ವೀರಪ್ಪನ್ ಜತೆ ಮಾತುಕತೆ ನಡೆಸುತ್ತಿದ್ದಾಗ, ನಾನು ರಾಜ್ ಅವರ ಆರೋಗ್ಯ ತಪಾಸಣೆ ಮಾಡಿ ಶುಶ್ರೂಷೆ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ತಾವು ಯಾವುದೇ ಸೂಚನೆ ನೀಡಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಬಿಡುಗಡೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications