ಮೇಲ್ಮನೆಯಲ್ಲಿ ಚರ್ಚೆಗೆ ವಸ್ತುವಾದ ರಾಜ್ ಬಿಡುಗಡೆ ಮಾಡಿಸಿದ ಡಾಕ್ಟ್ರಮ್ಮ
ಬೆಂಗಳೂರು : ರಾಜ್‌ಕುಮಾರ್ ವೀರಪ್ಪನ್ ಒತ್ತೆಯಿಂದ ಬಿಡುಗಡೆಯಾಗಿದ್ದು ಸಂತೋಷದ ವಿಷಯ. ಆದರೆ, ರಾಜ್ ಅವರನ್ನು ಬಿಡುಗಡೆ ಮಾಡಿಸಿದ ಈ ಡಾಕ್ಟ್ರಮ್ಮ ಯಾರು? ಆಕೆಯ ಮೂಲ ಏನು? ವೀರಪ್ಪನ್ ಹಾಗೂ ಡಾ. ಭಾನು ಅವರಿಗೂ ಯಾವ ರೀತಿಯ ಅನುಬಂಧ, ಆಕೆಗೂ ರಾಜ್ ಪ್ರಕರಣಕ್ಕೂ ಏನು ಸಂಬಂಧ? ಎಂಬಿತ್ಯಾದಿ ಪ್ರಶ್ನೆಗಳು ಶುಕ್ರವಾರ ಮೇಲ್ಮನೆಯಲ್ಲಿ ಉದ್ಭವಿಸಿದವು.
109ದಿನಗಳ ಕಾಲದ ರಾಜ್ ವನವಾಸವನ್ನು ತಪ್ಪಿಸಲು ಪುರುಷರಿಗೇ ಸಾಧ್ಯವಾಗದಿರುವಾಗ, ಒಬ್ಬ ಹೆಣ್ಣು ಮಗಳು ಅನಾಯಾಸವಾಗಿ ಈ ಬಿಕ್ಕಟ್ಟು ಬಗೆಹರಿಸಿದ್ದಾದರೂ ಹೇಗೆ? ಆಕೆಯ ಮೂಲ ಏನು ಎಂಬ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಪ್ರಫುಲ್ಲಾ ಮಧುಕರ್ ಪ್ರತಿಪಾದಿಸಿದರು. ಸದನ ಆರಂಭವಾಗುತ್ತಿದ್ದಂತೆಯೇ ಸದಸ್ಯರಿಂದ ಈ ಸಂಶಯದ ಪ್ರಶ್ನೆಗಳು ಆಡಳಿತಾರೂಢ ಸರಕಾರವನ್ನು ಕಂಗೆಡಿಸಿದವು.
ಶ್ವೇತ ಪತ್ರಕ್ಕೆ ಆಗ್ರಹಿಸಲಾಯಿತು. ವೀರಪ್ಪನ್ ತನ್ನ ಆತ್ಮ ಚರಿತ್ರೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ರಾಜಕಾರಣಿಗಳೊಂದಿಗೆ ತಮಗೆ ಸಖ್ಯವಿದೆ ಎಂದು ಹೇಳಿಕೊಂಡಿದ್ದಾನೆ. ಆ ರಾಜಕಾರಣಿಗಳು ಯಾರಾರು? ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಪಟ್ಟುಹಿಡಿದರು.
ರಾಜ್ ನಿಗೂಢವಾಗಿ ಅಪಹರಣವಾದರು, ಈಗ ನಿಗೂಢವಾಗಿಯೇ ವಾಪಸಾದರು ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕೆಂದು ಪ್ರತಿಪಕ್ಷ ನಾಯಕರು ಒತ್ತಾಯಿಸಿದರು. ವಿಜಯೋತ್ಸವದ ಹೆಸರಲ್ಲಿ ರಾಜ್ಯದಲ್ಲಿ ಗಲಭೆಗಳು ನಡೆಯುವ ಸಾಧ್ಯತೆ ಇದ್ದು, ಸರಕಾರವೇ ಸಾಂಕೇತಿಕವಾಗಿ ವಿಜಯೋತ್ಸವ ಆಚರಿಸಬೇಕು ಎಂಬ ಸಲಹೆಯೂ ಬಂತು.
ವಾರ್ತಾ ಸಂಚಯ
ಮುಖಪುಟ / ವಿಧಾನ ಮಂಡಲ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications