Get Updates
Get notified of breaking news, exclusive insights, and must-see stories!

ಭೌತವಿಜ್ಞಾನದ ಅಧ್ವರ್ಯು ಸರ್‌.ಸಿ.ವಿ. ರಾಮನ್‌

ಬ್ರಿಟಿಷ್‌ ಸರಕಾರ ನೀಡುತ್ತಿದ್ದ ಸರ್‌ ಗೌರವಕ್ಕೆ ಪಾತ್ರರಾದ ಕನ್ನಡಿಗರಲ್ಲಿ ಸಿ. ವಿ. ರಾಮನ್‌ ಒಬ್ಬರು. ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ ಕನ್ನಡದ ಹೆಮ್ಮೆಯ ಎಂಜಿನಿಯರ್‌ ದಿವಾನ್‌ ವಿಶ್ವೇಶ್ವರಯ್ಯ ಸರ್‌.ಎಂ.ವಿ. ಎಂದೇ ಖ್ಯಾತರಾಗಿದ್ದರು. ಧರ್ಮರತ್ನಾಕರ ಪುಟ್ಟಣ್ಣ ಚೆಟ್ಟಿ ಅವರಿಗೂ ಈ ಗೌರವ ದೊರಕಿತ್ತು. ತಿರುಚಿನಾಪಳ್ಳಿಯಲ್ಲಿ ಹುಟ್ಟಿದರೂ ಕಂನಾಡಿನಲ್ಲಿ ನೆಲೆಸಿದ್ದ ಚಂದ್ರಶೇಖರ ವೆಂಕಟರಾಮನ್‌ ಕರ್ನಾಟಕವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಭೌತವಿಜ್ಞಾನಿ , ನೊಬೆಲ್‌ ಪ್ರಶಸ್ತಿ ಪುರಸ್ಕೃತ .

ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ. ಭೌತವಿಜ್ಞಾನಕ್ಕೆ ಹೊಸ ಆಯಾಮ ನೀಡಿ, ಭೌತ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೆಸರು ಚಿರಸ್ಥಾಯಿಯಾಗಿ ನೆಲೆಗೊಳಿಸಿ, ಶಾಶ್ವತ ಕೀರ್ತಿ ಪಡೆದ ಶ್ರೇಷ್ಠಾತಿಶ್ರೇಷ್ಠ ವಿಜ್ಞಾನಿ. ಅವರ ಸಂಶೋಧನೆ ರಾಮನ್‌ ಪರಿಣಾಮ (ರಾಮನ್‌ ಎಫೆಕ್ಟ್‌) ಎಂದೇ ಜಗದ್ವಿಖ್ಯಾತ.

ಸರ್‌. ಸಿ.ವಿ. ರಾಮನ್‌ ಜನಿಸಿದ್ದು, 1888ರ ನವೆಂಬರ್‌ 7ರಂದು. 82 ವರ್ಷಗಳ ತುಂಬು ಜೀವನ ನಡೆಸಿದ ರಾಮನ್‌ ಕೊನೆಯುಸಿರೆಳೆದದ್ದೂ ನವೆಂಬರ್‌ನಲ್ಲೇ. ಭೌತವಿಜ್ಞಾನಕ್ಕೆ ಅಭೂತಪೂರ್ವ ಕಾಣಿಕೆ ಇತ್ತ ಅವರು, ಭೌತಿಕ ಶರೀರ ತೊರೆದದ್ದು, 1970ರ ನವೆಂಬರ್‌ 21ರಂದು. ಹುಟ್ಟು - ಸಾವುಗಳೆರಡನ್ನೂ ನವೆಂಬರ್‌ನಲ್ಲೇ ಕಂಡ ರಾಮನ್‌ರ ಸ್ಮರಣೆ:

1928ರ ಮಾರ್ಚ್‌ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್‌ ಕಾಲೇಜಿನ ವಿಜ್ಞಾನ ವೇದಿಕೆಯ ಸದಸ್ಯರಿಗೆ ರೋಮಾಂಚಕ ಅನುಭವ. ಜಗತ್ತಿಗೇ ತಿಳಿಯದ ಹೊಸ ವಿಷಯವನ್ನು ಸಂಶೋಧಕರ ಬಾಯಿಂದಲೇ ಕೇಳಿ ತಿಳಿಯುವ ಅವಿಸ್ಮರಣೀಯ ಸದವಕಾಶ.

ಬೆಳಕಿನ ಕಿರಣಗಳು ಪಾರದರ್ಶಕ ವಸ್ತುಗಳ ಮೂಲಕ ಹರಿಯುವಾಗ ಹಲವು ಅಣುಗಳಿಂದ ಚೈತನ್ಯ ಪಡೆದು, ಕೆಲವು ಅಣುಗಳಿಗೆ ಚೈತನ್ಯ ನೀಡುತ್ತವೆ. ಆ ರೀತಿ ಚದುರಲ್ಪಟ್ಟ ಬೆಳಕು ಪತನಗೊಂಡ ಬೆಳಕಿಗಿಂತಲೂ ಕಡಿಮೆ ತರಂಗಾಂತರ ಹಾಗೂ ಹೆಚ್ಚು ತರಂಗಾಂತರ ಹೊಂದಿರುತ್ತದೆ. ಬೆಳಕು ಬಿಳಿಯ ಬಟ್ಟೆ ಅಥವಾ ಬಿಳಿ ಕಾಗದದ ಮೇಲೆ ಹಾಯ್ದಾಗ ಯಾವುದೇ ವ್ಯತ್ಯಾಸ ಆಗದು. ಆದರೆ ಅದೇ ಬೆಳಕು ಬಣ್ಣದ ಬಟ್ಟೆ ಅಥವಾ ಬಣ್ಣದ ಕಾಗದದ ಮೇಲೆ ಬಿದ್ದಾಗ, ಸ್ವಲ್ಪ ಬೆಳಕು (ಸ್ಪೆಕ್ಟ್ರಂ) ವರ್ಣದಲ್ಲಿ ಸೇರಿ ಚದುರುವುದರಿಂದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆಯಾದರೂ ಅದು ಅದರ ನೈಜ ವರ್ಣವಲ್ಲವೆಂಬ ವಿಚಾರಧಾರೆಯನ್ನು ತಿಳಿಯುವ ಗಳಿಗೆ.

ನಿಬ್ಬೆರಗಾದ ವಿಜ್ಞಾನಿಗಳಿಂದ ಈ ಗಂಭೀರ ಸಂಶೋಧನೆಯ ಬಗ್ಗೆ ತೀವ್ರ ವಿಚಾರ ಮಂಥನ. ಬೆಳಕಿನ ಪ್ರಸರಣದಲ್ಲಿ ಅಣು ರಚನೆಯ ಕುರಿತು ಸವಿಸ್ತಾರವಾಗಿ ತಿಳಿವಳಿಕೆ ಮೂಡಿಸುವ ಈ ಸಿದ್ಧಾಂತವನ್ನು ವೈಜ್ಞಾನಿಕ ವಿಶ್ವ ರಾಮನ್‌ ಪರಿಣಾಮ ಎಂದೇ ಕರೆಯಿತು. ಈ ಪರಿಣಾಮಕಾರಿ ವಿಚಾರಧಾರೆ ವಿಶ್ವಾದ್ಯಂತ ಬೆಳಕಿನ ವೇಗದಲ್ಲೇ ಸಂಚರಿಸಿ, ಜಗದ್ವಿಖ್ಯಾತವಾಯಿತು. ಇದುವೇ ರಾಮನ್‌ರಿಗೆ 1929ರಲ್ಲಿ ಸರ್‌ ಪುರಸ್ಕಾರ ದೊರಕಲು ಕಾರಣವಾಯಿತು.

ಭೌತ ವಿಜ್ಞಾನ ಕ್ಷೇತ್ರಕ್ಕೆ ಅತ್ಯಪೂರ್ವ ಕೊಡುಗೆ ನೀಡಿದ ರಾಮನ್‌ರಿಗೆ 1930ರಲ್ಲಿ ನೊಬೆಲ್‌ ಪುರಸ್ಕಾರವೂ ದೊರಕಿತು. ಈ ಮೂಲಕ ಭೌತ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾದ ಪ್ರಪ್ರಥಮ ಭಾರತೀಯ ಎಂಬ ಹಿರಿಮೆಯೂ ರಾಮನ್‌ರದಾಯ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+