Get Updates
Get notified of breaking news, exclusive insights, and must-see stories!

ಶಾಲು ಹೊದಿಸಿ, ನೆನಪಿನ ಕಾಣಿಕೆ ಇತ್ತು ಬೀಳ್ಕೊಟ್ಟ ವೀರಪ್ಪನ್‌

ಬೆಂಗಳೂರು : ವೀರಪ್ಪನ್‌ ಒಬ್ಬ ಕಾಡುಗಳ್ಳ, ದಂತ ಚೋರ, ನರಹಂತಕ ಆದರೂ 109 ದಿನಗಳ ಕಾಲ ಜನಮನ ಗೆದ್ದ ಕನ್ನಡದ ಮೇರು ನಟನೊಂದಿಗಿದ್ದು, ವೀರಪ್ಪನ್‌ ಸುಸಂಸ್ಕೃತನಂತಾಗಿದ್ದಾನೆ. ರಾಜ್‌ ಅವರನ್ನು ಬಿಡುಗಡೆ ಮಾಡುವ ಮುನ್ನ ಆತ ತನ್ನ ಸಹಚರರಾದ ಸೇತುಕುಳಿ ಮುಂತಾದವರ ಸಮ್ಮುಖದಲ್ಲಿ ಕನ್ನಡ ವರ ನಟನಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಿ ನಾಡಿಗೆ ಕಳುಹಿಸಿಕೊಟ್ಟಿದ್ದಾನೆ.

ಸಂಧಾನಕ್ಕಾಗಿ ತೆರಳಿದ್ದ ನೆಡುಮಾರನ್‌, ಪ್ರೊ. ಕಲ್ಯಾಣಿ ಇತರರ ಜತೆಯಲ್ಲಿ ತಾನೂ ನಿಂತು ರಾಜ್‌ಕುಮಾರ್‌ರೊಂದಿಗೆ ಅನೇಕ ಭಾವಚಿತ್ರಗಳನ್ನೂ ತೆಗೆಸಿಕೊಂಡಿದ್ದಾನೆ. ರಾಜ್‌ ಅವರು ಕಾಡಿನಲ್ಲಿ ಇರುವಷ್ಟು ದಿನವೂ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾನೆ. ಸತ್ಸಂಗದಲ್ಲಿ ದಾನವನೂ ಮಾನವನಾಗಿದ್ದಾನೆ ಎನ್ನಬಹುದಲ್ಲವೇ..

ವಿಧಾನಸೌಧ ಪ್ರವೇಶ: ಕರ್ನಾಟಕ ಸರಕಾರದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕನ್ನಡ ಮಣ್ಣಿನಲ್ಲಿ ಬಂದಿಳಿದ ಕರ್ನಾಟಕ ರತ್ನ ರಾಜ್‌ಕುಮಾರ್‌ ಅವರು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು. ಈಹೊತ್ತು ರಾಜ್‌ಕುಮಾರ್‌ ಅವರು ಕರ್ನಾಟಕದ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಇನ್ನು ಕೆಲವೇ ಕ್ಷಣದಲ್ಲಿ ತಮ್ಮ 109 ದಿನಗಳ ವನವಾಸದ ಅನುಭವಗಳನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+