ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀರಪ್ಪ ದ್ಯಾವರ ಗುಡಿಯಲ್ಲಿ ಪೂಜೆ

By Super
|
Google Oneindia Kannada News

ಗಾಜನೂರು : ಮೂರುವರೆ ತಿಂಗಳು ಅಣ್ಣಾವ್ರಿಲ್ಲ ಎಂಬ ನೋವನ್ನು ಕಣ್ಣಲ್ಲಿ ತುಂಬಿ ಕೊಂಡೇ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಗಾಜನೂರಿನ ಮಂದಿಯ ಕಣ್ಣುಗಳಲ್ಲಿ ಬುಧವಾರದಂದು ಸಂತೋಷ ಮಿಂಚು !

ಗಾಜನೂರಿನಲ್ಲಿ ಬುಧವಾರ ದೀಪಾವಳಿ, ನಾಡಹಬ್ಬ. ಪಟಾಕಿ ಸಿಡಿಸಿ, ಸಿಹಿ ಹಂಚಿದ ಗಾಜನೂರ ಸಂಭ್ರಮದಲ್ಲಿ ಗಲಾಟೆಯಿರಲಿಲ್ಲ. ರಾಜ್‌ ಕುಮಾರ್‌ ಅವರ ಇಷ್ಟ ದೈವಸ್ಥಾನ, ಬೀರಪ್ಪ ದೇವರ ಗುಡಿಯಲ್ಲಿ ಪೂಜೆ, ಪುನಸ್ಕಾರಗಳು ನಡೆದವು.

ಸರಿಯಾಗಿ 108 ದಿನಗಳ ಹಿಂದೆ ರಾಜ್‌ ಕುಮಾರ್‌ ಅವರ ಗಾಜನೂರಿನ ಮನೆಯಲ್ಲಿ ಗೃಹ ಪ್ರವೇಶದ ಕಲರವ ತುಂಬಿತ್ತು. ಮನೆ ತುಂಬಾ ನಗು , ಮಾತು, ಹೋಮ ಹವನದ ಹೊಗೆ ಸುಳಿದಾಡುತ್ತಿತ್ತು. ಮತ್ತೆ ಅದೇ ಸ್ಥಿತಿ ಗಾಜನೂರ ಹೊಸ ಮನೆಯಲ್ಲಿ ಬುಧವಾರದಿಂದ ಮರುಕಳಿಸಿದೆ.

ದೇವರು ನಮ್ಮ ದೀರ್ಘ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದಾನೆ. ಸಂಭ್ರಮ ಆಚರಿಸಲು ಇದಕ್ಕಿಂತ ಸುದಿನ ಇನ್ನೊಂದಿಲ್ಲ ಎಂದು ರಾಜ್‌ಕುಮಾರ್‌ ಅವರ ಅಕ್ಕನ ಮಗ ಗೋಪಾಲ್‌ ತನ್ನ ಖುಷಿಯನ್ನು ಹಂಚಿಕೊಳ್ಳುತ್ತಾರೆ. ಅವರ ಪತ್ನಿ ಮನೆ ದೇವರ ಪೂಜಾ ಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಸಂತಸವನ್ನು ಹಂಚಿಕೊಳ್ಳುವುದಕ್ಕೂ ಪುರುಸೊತ್ತಿಲ್ಲದೇ ಓಡಾಡುತ್ತಿದ್ದರು. ರಾಜ್‌ ಮನೆಯಲ್ಲಿ ಬುಧವಾರ ತೋಟದ ಕೆಲಸಕ್ಕೆ ರಜೆ ನೀಡಲಾಗಿತ್ತು .

ಹೊಸ ಮನೆಯಲ್ಲಿ ರಾಜ್‌ ಅಪಹರಣದ ದಿನ ಮಾಂಸದೂಟವನ್ನು ಏರ್ಪಡಿಸಿದ್ದಂತೆ, ಬಿಡುಗಡೆಯ ದಿನವೂ ಮಾಂಸದೂಟ ಏರ್ಪಡಿಸಲಾಗಿತ್ತು. ರಾಜ್‌ರ ತಂದೆ ಸಿಂಗನೆಲ್ಲೂರು ಪುಟ್ಟಸ್ವಾಮಯ್ಯ ಅವರ ತಿಥಿಯನ್ನೂ ಮಹಾಲಯ ಪಕ್ಷದಲ್ಲಿ ಆಚರಿಸಲಾಗದಿರುವುದರಿಂದ, ಈಗ ಆಚರಿಸಲಾಗುವುದು ಎಂದು ಗೋಪಾಲ್‌ ಹೇಳಿದ್ದಾರೆ.

ಅನೇಕ ಪತ್ರಕರ್ತರು, ಚಾಮರಾಜ ನಗರದ ಪೊಲೀಸ್‌ ಅಧೀಕ್ಷಕ ಮತ್ತು ಇತರ ಪೊಲೀಸ್‌ ಹಿರಿಯ ಅಧಿಕಾರಿಗಳು ಮೂರು ಗಂಟೆ ಅವಧಿಗೂ ಮುಂಚೆ ಗಾಜನೂರ ಮನೆಗೆ ತೆರಳಿ ರಾಜ್‌ ಕುಮಾರ್‌ ಅವರ ಬರವಿಗೆ ಕಾದು ಕುಳಿತಿದ್ದರು.

English summary
Rajkumar is back in Gajanoor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X