ನೆಡುಮಾರನ್... ಯೂ ಹ್ಯಾವ್ ಡನ್ ಇಟ್ !
ಚೆನ್ನೈ: ಅಪಹರಣ ಪ್ರಕರಣದಲ್ಲಿ ಅನಿವಾರ್ಯ ಎಂಬಂತೆ ಬಂದ ಈ ನೆಡುಮಾರನ್ ಯಾರು? ಹಿನ್ನಲೆ ಏನು ಎಂಬ ಅನೇಕ ಪ್ರಶ್ನೆಗಳು ರಾಜ್ ಅಪಹರಣ ಪ್ರಕರಣದಲ್ಲಿ ನೆಡುಮಾರನ್ ಪ್ರವೇಶವಾದಂದಿನಿಂದ ಹುಟ್ಟಿಕೊಂಡಿದ್ದವು.
ರಾಜ್ ಬಿಡುಗಡೆಗೆ ಐದು ಬಾರಿ ಕಾಡಿಗೆ ತೆರಳಿ ವಿಫಲರಾಗಿದ್ದ ಗೋಪಾಲ್ ಅವರ ನಾಲ್ಕು ವಿಫಲ ಯತ್ನಗಳ ನಂತರ ಸಂಧಾನಕಾರರಾದ ನೆಡುಮಾರನ್, ಎರಡನೇ ಯತ್ನದಲ್ಲೇ ಯಶಗಳಿಸುವ ಮೂಲಕ ಇದೀಗ ಸುದ್ದಿ ಮಾಡಿದ್ದಾರೆ.
ಕಟ್ಟಾ ಪ್ರತ್ಯೇಕತಾವಾದಿ, ಎಲ್ಟಿಟಿಈ ಮುಖಂಡ ಪ್ರಭಾಕರ್ ಬೆಂಬಲಿಗ, ಕಟ್ಟಾ ತಮಿಳು ರಾಷ್ಟ್ರೀಯವಾದಿ ಎಂಬ ವಾಕ್ಯಗಳಿಗೆ ಅನ್ವರ್ಥದಂತಿರುವ ನೆಡುಮಾರನ್, ಅವರ ಮದ್ಯಪ್ರವೇಶದಿಂದಲೇ ಸುಮಾರು ಮೂರು ತಿಂಗಳ ಅಪಹರಣ ಪ್ರಕರಣಕ್ಕೆ ಅಂತ್ಯ ಸಿಗಲಿದೆ ಎಂಬ ಮಾತು ಹುಟ್ಟಿಕೊಳ್ಳುವ ಪರಿಸ್ಥಿತಿ ನೆಡುಮಾರನ್ ಪ್ರವೇಶದಿಂದ ನಿರ್ಮಾಣವಾಗಿತ್ತು. ಇದರಲ್ಲಿ ನೆಡುಮಾರನ್ ಯಶಸ್ವಿಯಾಗಿದ್ದಾರೆ. ಅಪಹರಣ ಪ್ರಕರಣಕ್ಕೆ ಅಂತ್ಯ ಕಂಡ ತಕ್ಷಣ, ನೆಡುಮಾರನ್ ಅವರನ್ನು ಬಳಸಿಕೊಂಡದ್ದಕ್ಕೆ ಕರುಣಾನಿಧಿ ಸರಕಾರ ಭಾರೀ ಬೆಲೆ ತೆರಲೇಬೇಕಾಗುತ್ತದೆ ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿಬರುತ್ತಿವೆ.
ನೆಡುಮಾರನ್ ಹಿನ್ನಲೆ ಏನು ?: ತಮಿಳು ದೇಶೀಯ ಇಯಕ್ಕಂ (ಟಿಡಿಐ) ನ ನಾಯಕ ನೆಡುಮಾರನ್, ತಮ್ಮ ಮತ್ತು ಎಲ್ಟಿಟಿಈ ನಡುವಿನ ಅವಿನಾಭಾವ ಸಂಬಂಧದಿಂದ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ಜಾಫ್ನಾದಲ್ಲಿ ಶ್ರೀಲಂಕಾ ಸೇನೆ ಎಲ್ಟಿಟಿಈ ಉಗ್ರಗಾಮಿಗಳನ್ನು ಸುತ್ತುವರಿದಾಗ ಚೆನ್ನೈನಲ್ಲಿ ತಮಿಳು ಉಗ್ರರ ಪರ ಸಭೆ ನಡೆಸಲು ಯತ್ನಿಸಿ ಕರುಣಾನಿಧಿ ಸರಕಾರದಿಂದ ನಿರ್ಭಂದ ಎದುರಿಸಿ ಸುದ್ದಿ ಮಾಡಿದ್ದರು. ರಾಜೀವ್‌ಗಾಂಧಿ ಹತ್ಯೆಯಲ್ಲಿ ಭಾಗಿಗಳಾದ ಆರೋಪದ ಮೇಲೆ ಸುಪ್ರೀಂಕೋರ್ಟ್ ನಾಲ್ವರಿಗೆ ಮರಣದಂಡನೆ ವಿಧಿಸಿದಾಗ ಈ ನೆಡುಮಾರನ್ ತೀರ್ಪನ್ನು ಪುನಾಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದರು. ಕೋರ್ಟ್ ಮನವಿ ತಿರಸ್ಕರಿಸಿದಾಗ ಸಹಿ ಸಂಗ್ರಹಕ್ಕಿಳಿದ ಮಾರನ್, ಅದನ್ನು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಸಲ್ಲಿಸಿದ್ದರು.
ಉಗ್ರ ಟೀಕೆ : ಇಂಥ ಹಿನ್ನಲೆಯಿರುವ ಮಾರನ್ ಅವರನ್ನು ಸಂಧಾನಕ್ಕೆ ಕಳಿಸಲು ಕರುಣಾನಿಧಿ ಅವರಿಗೆ ಇದ್ದ ಒತ್ತಡವಾದರೂ ಏನು ಎಂದು ಎಲ್ಲರೂ ಕೇಳುತ್ತಿದ್ದರು. ಇಂಥ ಪ್ರಶ್ನೆಯ ಮೊನೆಯಿಡಿದು ಜಯಲಲಿತಾ ಕೂಡಾ ಗುಡುಗಿದ್ದರು. ರಾಜ್ ಅಪಹರಣ ಪ್ರಕರಣದಲ್ಲಿ ಕೇವಲ ವೀರಪ್ಪನ್ ಪಾತ್ರವಿದ್ದಿದ್ದರೆ ಬಹುಶಃ ಮಾರನ್ ಸಹಾಯ ಬೇಕಾಗಿರಲಿಲ್ಲ. ಪ್ರಕರಣದಲ್ಲಿ ಎಲ್ಟಿಟಿಈ ಅಲ್ಲದೆ ತಮಿಳು ಉಗ್ರಗಾಮಿ ಸಂಘಟನೆಗಳಾದ ತಮಿಳುನಾಡು ಲಿಬರೇಷನ್ ಆರ್ಮಿ (ಟಿಎನ್‌ಎಲ್‌ಎ), ತಮಿಳುನಾಡು ರಿಟ್ರೆೃವಲ್ ಫೋರ್ಸ್ (ಟಿಎನ್‌ಆರ್‌ಎಫ್) ಕೈವಾಡವಿದೆ ಎಂಬ ಊಪಾಪೋಹಗಳಿಗೆ ಈಗಾಗಲೇ ಅನೇಕ ಪುರಾವೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಅವುಗಳೆಲ್ಲವುಗಳ ಜೊತೆ ನಿಕಟ ಸಂಬಂಧ ಹೊಂದಿರುವ ನೆಡುಮಾರನ್ ಅವರ ಮಧ್ಯಸ್ಥಿಕೆ ಅನಿಮಾರ್ಯವಾಗಿ ಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು.
ತಮಿಳು ರಾಷ್ಟ್ರೀಯವಾದಿ ಚಿಂತನೆಯನ್ನು ಬಹಳ ಕಾಲ ಜೀವಂತವಿಟ್ಟುಕೊಂಡು ಬಂದ ಖ್ಯಾತಿ ನೆಡುಮಾರನ್‌ಗೆ ಸಲ್ಲುತ್ತದೆ. ಹೀಗಾಗಿ ತಮಿಳು ರಾಷ್ಟ್ರೀಯವಾದಿಗಳ ಸಂಧಾನ ನೈಪುಣ್ಯತೆಯನ್ನು ಬೆಳಕಿಗೆ ತಂದ ಮೊದಲ ಪ್ರಕರಣವೂ ರಾಜ್ ಅಪಹರಣ ಪ್ರಕರಣವಾಗಿ ಇತಿಹಾಸದಲ್ಲಿ ದಾಖಲಾಗಿದೆ.
ಎಲ್ಟಿಟಿಈ ಪ್ರತಿನಿಧಿ : ವಿರೋಧಿಗಳ ಪ್ರಕಾರ ನೆಡುಮಾರನ್ ಅವರ ಎಲ್ಟಿಟಿಈ ಪರವಾದ ನಿಲುವು ಅಕ್ಷಮ್ಯ. ಹಾಗಾಗಿ ಮಾರನ್ ಚೆನ್ನೈನ ಎಲ್ಟಿಟಿಈ ಪ್ರತಿನಿಧಿಯಂತಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಇವತ್ತಿಗೂ ಎಲ್ಟಿಟಿಈ ಮುಖ್ಯಸ್ಥ ಪ್ರಭಾಕರನ್ ಅವರ ಫೋಟೋ ಮಾರನ್ ಕಛೇರಿಯಲ್ಲಿ ನೇತಾಡುತ್ತಿದೆ. ಈ ಎಲ್ಲ ಪ್ರಭಾವಗಳ ಮೇಲೆ ಸಂಧಾನಕಾರರಾಗಿ ಯಶಸ್ವಿಯಾದ ನೆಡುಮಾರನ್ ಅವರನ್ನು ಎರಡೂ ರಾಜ್ಯಗಳ ಅಧಿಕಾರಿಶಾಹಿ ಮತ್ತು ಪೋಲೀಸರು ಹ್ಯಾಪು ಮೋರೆ ಹಾಕಿಕೊಂಡು ನೋಡುವಂತಾಗಿದೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications