Get Updates
Get notified of breaking news, exclusive insights, and must-see stories!

ಮಾಧವನ್‌ರನ್ನು ನಾನು ಭೇಟಿ ಮಾಡುವುದಿಲ್ಲ: ಅಜಯ್‌ ಶರ್ಮ

ನವ ದೆಹಲಿ : ಮೋಸದಾಟ ಪ್ರಕರಣದಲ್ಲಿ ಸಿಬಿಐ ಹೆಸರಿಸಿರುವ ಐವರು ಆಟಗಾರರಲ್ಲಿ ಒಬ್ಬರಾದ ಮಾಜಿ ಕ್ರಿಕೆಟ್‌ ತಾರೆ ಅಜಯ್‌ ಶರ್ಮ ಅವರು, ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ತನಿಖೆ ನಡೆಸುತ್ತಿರುವ ಬಿಸಿಸಿಐನ ವಿಶೇಷ ಆಯುಕ್ತ ಮಾಧವನ್‌ ಎದುರು ಹಾಜರಾಗಲು ನಿರಾಕರಿಸಿದ್ದಾರೆ.

ಈವರೆಗೂ ನನಗೆ ಸಿಬಿಐ ತನಿಖೆಯ ಪ್ರತಿ ದೊರೆತಿಲ್ಲ . ಆದ್ದರಿಂದ ತಮ್ಮನ್ನು ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದು ಅಜಯ್‌ ಶರ್ಮ ಅವರು ತಮಗೆ ಪತ್ರ ಬರೆದಿದ್ದಾರೆ ಎಂದು ಮಾಧವನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನಿಖೆಯ ಸಂಬಂಧ ಮಂಗಳವಾರ ತಮ್ಮನ್ನು ಭೇಟಿಯಾಗುವಂತೆ ಮಾಧವನ್‌ ಅವರು ಈ ಮೊದಲು ಅಜಯ್‌ ಶರ್ಮ ಅವರಿಗೆ ಸೂಚಿಸಿದ್ದರು.

ಅಜಯ್‌ ಶರ್ಮ ಅವರ ನಿರಾಕರಣೆಯಿಂದ ನನಗೆ ಆಶ್ಚರ್ಯವಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವುದರಿಂದ ತನಿಖೆಗಾಗಿ ಚೆನ್ನೈಗೆ ಬರಲು ಸಾಧ್ಯವಿಲ್ಲ , ದೆಹಲಿಯಲ್ಲೇ ವಿಚಾರಣೆಗೆ ಸಿದ್ಧ ಎಂದು ಈ ಮೊದಲು ತಿಳಿಸಿದ್ದರು. ಆಗ ಸಿಬಿಐ ತನಿಖೆಯ ಬಗ್ಗೆ ಚಕಾರ ಎತ್ತದ ಅವರು ಏಕಾಏಕಿ ವರಸೆ ಬದಲಿಸಿರುವುದು ಆಶ್ಚರ್ಯ ತಂದಿದೆ ಎಂದು ಮಾಧವನ್‌ ಹೇಳಿದ್ದಾರೆ.

ಸಿಬಿಐ ವರದಿಯಲ್ಲಿ ಹೆಸರಿಸಿರುವ ಅಜಯ್‌ ಜಡೇಜ, ಮನೋಜ್‌ ಪ್ರಭಾಕರ್‌, ನಯನ್‌ ಮೊಂಗಿಯ, ಡಾ. ಆಲಿ ಇರಾನಿ ಅವರು ಈಗಾಗಲೇ ಮಾಧವನ್‌ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಪ್ರಮುಖ ಆರೋಪಿ ಎನ್ನಲಾದ ಅಜರುದ್ದೀನ್‌ ಈವರೆಗೂ ಬಿಸಿಸಿಐ ಆಯುಕ್ತರ ಮುಂದೆ ಹಾಜರಾಗಿಲ್ಲ . ಅಜರ್‌ ಬಯಸಿದರೂ ಇನ್ನು ಮುಂದೆ ನಾನವರನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಮಾಧವನ್‌ ಹೇಳಿದ್ದಾರೆ. ಆದರೆ, ಅಜಯ್‌ ಶರ್ಮ ಅವರು ತಮ್ಮ ನಿಲುವು ಬದಲಿಸಿಕೊಂಡಲ್ಲಿ ಅವರಿಗೆ ಮತ್ತೊಂದು ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+