ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರು ಎಣಿಕೆ ಮುಗಿದಿದೆ, ಬುಷ್‌ ಮುಂದಿದ್ದಾರೆ, ಮುಂದೇನು?

By Staff
|
Google Oneindia Kannada News

George Dubya Bushಮಿಯಾಮಿ : ಅಮೆರಿಕ ಅಧ್ಯಕ್ಷ ಪದವಿಗೆ ನಡೆದ ಚುನಾವಣೆ ಫಲಿತಾಂಶದಲ್ಲಿನ ಗೊಂದಲ ಫ್ಲೋರಿಡಾದ 67 ಕೌಂಟಿಗಳಲ್ಲಿ ಮರುಎಣಿಕೆ ಮುಗಿದ ನಂತರವೂ ಮುಂದುವರೆದಿದೆ. ಡೆಮಾಕ್ರಟಿಕ್‌ ಪಕ್ಷದ ಅಲ್‌ ಗೋರ್‌ಗಿಂತ ರಿಪಬ್ಲಿಕನ್‌ನ ಜಾರ್ಜ್‌ ಡಿ ಬುಷ್‌ 327 ಹೆಚ್ಚು ಮತಗಳನ್ನು ಪಡೆದಿದ್ದಾರೆ (ಬುಷ್‌- 2,910,198, ಗೋರ್‌- 2,909,871).

ಪೋಸ್ಟಲ್‌ ಬ್ಯಾಲೆಟ್‌ಗಳ ಎಣಿಕೆ ನವೆಂಬರ್‌ 17ರವರೆಗೆ ಮುಂದುವರೆಯಲಿದ್ದು, ಆ ನಂತರದ ಫಲಿತಾಂಶ ಗೊರ್‌ ಹಾಗೂ ಬುಷ್‌ ಅವರ ಹಣೆಬರಹಗಳನ್ನು ನಿರ್ಧರಿಸಲಿದೆ. ಈಗ ಇಷ್ಟು ಕಡಿಮೆ ಇರುವ ಅಂತರ ಪೋಸ್ಟಲ್‌ ಬ್ಯಾಲೆಟ್‌ಗಳ ಎಣಿಕೆ ನಂತರ 2300ರಷ್ಟಾಗುವ ಸಂಭವವಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮರು ಎಣಿಕೆಯಿಂದ ಗೋರ್‌ ಅವರಿಗೆ ಸಿಕ್ಕಿರುವ ಮತಗಳ ಸಂಖ್ಯೆಯಲ್ಲಿ ಬಹಳ ಹೆಚ್ಚಳವಾಗಿದೆ. ಈ ಹಿಂದೆ ಮತಗಳ ಅಂತರ 1,725ರಷ್ಟಿತ್ತು.

ಈ ಹಿಂದಿನ ಚುನಾವಣೆಗಳಲ್ಲಿ ಪೋಸ್ಟಲ್‌ ಬ್ಯಾಲೆಟ್‌ಗಳ ಮತಗಳು ರಿಪಬ್ಲಿಕನ್‌ ಪಕ್ಷದ ಪರವಾಗೇ ಬಿದ್ದಿವೆ. ಆದರೆ ಈ ಹೊತ್ತಿನ ಗೋರ್‌- ಬುಷ್‌ ಟಂಗಾಟುಂಗಿಯಲ್ಲಿ ಏನು ಬೇಕಾದರೂ ಆಗಬಹುದು. ಒಂದು ವೇಳೆ ಮತಗಳ ಅಂತರ 2000 ದಾಟದಿದ್ದರೆ ಫ್ಲೋರಿಡಾದ ಸರ್ಕಿಟ್‌ ಕೋರ್ಟಿನ ನ್ಯಾಯಮೂರ್ತಿಗಳು ಗೆಲುವನ್ನು ನಿರ್ಧರಿಸುವ ಸಾಧ್ಯತೆಯಿದೆ. ಮುಂದೇನು? ಇನ್ನೂ 7 ದಿನಗಳವರೆಗೆ ಕಾಯಬೇಕು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X