ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಮುಖ್ಯಮಂತ್ರಿ ಕೃಷ್ಣ ಅವರಿಂದ ‘ರಂಗ ಶಂಕರ’ದ ಶಂಕು ಸ್ಥಾಪನೆ

By Staff
|
Google Oneindia Kannada News

ಬೆಂಗಳೂರು : ಇನ್ನು ಕೆಲ ತಿಂಗಳುಗಳಲ್ಲೇ ಚಿತ್ರನಟ ದಿವಂಗತ ಶಂಕರ್‌ನಾಗ್‌ ಅವರ ಥಿಯೇಟರ್‌ ಸಂಕೀರ್ಣ ಕಟ್ಟಬೇಕೆಂಬ ಕನಸು ನನಸಾಗಲಿದೆ. ಗುರುವಾರ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಜೆಪಿ ನಗರ 2ನೇ ಹಂತದ ನಿವೇಶನದಲ್ಲಿ ಥಿಯೇಟರ್‌ ಸಂಕೀರ್ಣ ರಂಗ ಶಂಕರದ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಮೂರು ಕೋಟಿ ರುಪಾಯಿಗಳ ಈ ಯೋಜನೆ ರೂಪುಗೊಂಡದ್ದು ಸಂಕೇತ್‌ ಬಳಗದ ಟ್ರಸ್ಟಿಗಳಾದ ಗಿರೀಶ್‌ ಕಾರ್ನಾಡ್‌, ಅರುಂಧತಿ ನಾಗ್‌, ಸುರೇಂದ್ರನಾಥ್‌, ಪರಮೇಶ್ವರಪ್ಪ, ವಿಜಯ್‌ ಪಡಕಿ ಹಾಗೂ ಎಂ.ಎಸ್‌. ಸತ್ಯು ಅವರಿಂದ. 300 ಪ್ರೇಕ್ಷಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೊಂದಲಿರುವ ಸಂಕೀರ್ಣ ಸುಂದರ ವಿನ್ಯಾಸದಲ್ಲಿ 3 ಸ್ಥರಗಳಲ್ಲಿ ನಿರ್ಮಾಣವಾಗಲಿದೆ.

ಮುಖ್ಯಮಂತ್ರಿಗಳೇ ಖುದ್ದು ಸಮಾರಂಭಕ್ಕೆ ಬರುತ್ತಿರುವುದರಿಂದ ಯೋಜನೆಗೆ ಸರ್ಕಾರ ಬೆಂಬಲ ನೀಡಲಿದೆ ಎಂಬುದು ಖಾತ್ರಿಯಾಗಲಿದೆ. ಈಗಾಗಲೇ ಸರ್ಕಾರ 20 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಈ ಸಂಕೀರ್ಣದಲ್ಲಿ ಕಲಾವಿದರ ತಾಲೀಮು ಹಾಗೂ ಅಭ್ಯಾಸಕ್ಕೂ ಅವಕಾಶ ದೊರೆಯಲಿದೆ.

ನಿವೇಶನದಲ್ಲಿ ರಂಗ ಸಮೂಹ ರಂಗಗೀತೆಗಳು ಹಾಗೂ ಎಲಿಫೆಂಟ್‌ ಅಂಡ್‌ ದಿ ಮೈಸ್‌ನ ಎರಡು ಪ್ರದರ್ಶನಗಳನ್ನು ಗುರುವಾರ ಏರ್ಪಡಿಸಿದೆ.

ಈ ಯೋಜನೆಗೆ ನೀವೂ ನೆರವು ನೀಡಬಯಸಿದಲ್ಲಿ ದಿ ಸಂಕೇತ್‌ ಟ್ರಸ್ಟ್‌, ದೂರವಾಣಿ ಸಂಖ್ಯೆ 2213737ನ್ನು ಸಂಪರ್ಕಿಸಿ. ಇ- ಮೇಲ್‌ : [email protected]ವೆಬ್‌ಸೈಟ್‌ : www.rangashankara.org

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಒಂದಾನೊಂದು ಕಾಲದ ಒಂದು ಮುತ್ತಿನ ಕಥೆ
ಸಂಕೇ-ತ್‌ ಅ-ಳು-ತ್ತಿ-ದ್ದಾ-ನೆ, ಎ-ತ್ತಿ-ಕೊ-ಳ್ಳು-ವ-ವ-ರು ಯಾರು?
Sanket: on the foot

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X