Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಲಗ್ಗೆಯಿಟ್ಟ ಮಣಿಪಾಲ ಗ್ರೂಪ್ಸ್‌: ಸರ್ಜಾಪುರದಲ್ಲಿ ಐಟಿ ವಿವಿ

ಬೆಂಗಳೂರು : ಮಣಿಪಾಲ ಗ್ರೂಪ್ಸ್‌ನವರು ಮಣಿಪಾಲ ಇನ್ಸ್‌ಸ್ಟಿಟ್ಯೂಷನ್ಸ್‌ ಆಫ್‌ ಇನ್ಫರ್‌ಮೇಷನ್‌ ಟೆಕ್ನಾಲಜಿ(ಎಂಐಐಟಿ) ಎನ್ನುವ ಐಟಿ ವಿಶ್ವ ವಿದ್ಯಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ.

ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌- ಮಾಹೆಯ ಶಾಖೆ ಪ್ರಸ್ತುತ ಬೆಂಗಳೂರು ಸೆಂಟ್ರಲ್‌ ಪಾರ್ಕ್‌ ಹೋಟೆಲ್‌ನ ಮಾಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನು ಮುಂದೆ ಸರ್ಜಾಪುರದಲ್ಲಿ 20 ಎಕರೆ ವಿಸ್ತಾರ ಪ್ರದೇಶದಲ್ಲಿ ತನ್ನ ಕ್ಯಾಂಪಸ್‌ ನಿರ್ಮಿಸಲಿದೆ.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದರೂ ಇಂಜಿನಿಯರಿಂಗ್‌ನಲ್ಲಿ ಕಲಿಸುವ ವಿಷಯಕ್ಕೂ, ಉದ್ಯೋಗ ಕ್ಷೇತ್ರದಲ್ಲಿ ಮಾಡುವ ಕೆಲಸಕ್ಕೂ ತುಂಬಾ ವ್ಯತ್ಯಾಸವಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಅಗತ್ಯವಾಗುವ ವಿಷಯಗಳ ಕುರಿತು ಈ ವಿವಿಯಲ್ಲಿ ಬೋಧಿಸಲಾಗುವುದು’ ಎಂದು ಮಾಹೆಯ ಪ್ರೊ. ಎನ್‌. ಚಂದ್ರಶೇಖರನ್‌ ಹೇಳುತ್ತಾರೆ. ಚಂದ್ರಶೇಖರನ್‌ ಈ ಹಿಂದೆ ಸಿ-ಡಾಕ್‌ನ ನಿರ್ದೇಶಕರಾಗಿದ್ದು ಪ್ರಸ್ತುತ ರಾಜ್ಯದ ಐಟಿ ಕಾರ್ಯಪಡೆಯ ಮುಖ್ಯಸ್ಥರಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಸರ್ಜಾಪುರದಲ್ಲಿ ಸ್ಥಾಪಿಸಲಿರುವ ವಿವಿಯನ್ನು 40 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಿಸುವ ಯೋಜನೆಯಿದೆ.

ಈ ವಿವಿಯ ಪದವೀಧರರು ಐಟಿ ಕ್ಷೇತ್ರದಲ್ಲಿ ಪರಿಣತರಾಗಿರುತ್ತಾರೆ. ಬೋಧಕರು, ಬೋಧಿಸಲಿರುವ ವಿಷಯದ ಕುರಿತು ವಿಶೇಷ ಅಧ್ಯಯನ ಮಾಡಿದವರಾಗಿರುತ್ತಾರೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಬೆಂಗಳೂರಿನ ಡಾ. ಎಂ. ಆರ್‌. ರಾವ್‌, ಇಸ್ರೋದ ಇಸಾಕ್‌ನ ನಿರ್ದೇಶಕಿ ಡಾ. ಎನ್‌. ರಮಣಿ ಮತ್ತು ಇನ್‌ಫೋ ಸಿಸ್‌, ವಿಪ್ರೋದಂತಹ ಪ್ರತಿಷ್ಠಿತ ಕಂಪೆನಿಗಳ ಐಟಿ ತಜ್ಞರು ಬೋಧಕವರ್ಗದಲ್ಲಿರುತ್ತಾರೆ ಎಂದು ಹೇಳಿದ ಚಂದ್ರಶೇಖರ್‌ ಇದು ವಿಶ್ವವಿದ್ಯಾಲಯವಾಗಿದೆಯೇ ಹೊರತು ಲಾಭಮಾಡುವ ಫ್ರಾಂಚೈಸ್‌ ಅಲ್ಲ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+