Get Updates
Get notified of breaking news, exclusive insights, and must-see stories!

ಏಷ್ಯಾದಲ್ಲಿಯೇ ದೊಡ್ಡ ಐಟಿ ಮೇಳ ಮುಕ್ತಾಯ

ಬೆಂಗಳೂರು : ಇಡೀ ಏಷ್ಯಾದಲ್ಲಿಯೇ ಐಟಿಯ ಅತ್ಯಂತ ದೊಡ್ಡ ವಸ್ತು ಪ್ರದರ್ಶನ ಎನ್ನುವ ಪ್ರಶಂಸೆಗೆ ಪಾತ್ರವಾದ 5 ದಿನಗಳ ಬೆಂಗಳೂರು ಐಟಿ.ಕಾಂ - 2000 ಮೇಳಕ್ಕೆ ಭಾನುವಾರ ತೆರೆ ಬಿತ್ತು .

ಸುಮಾರು 60 ಸಾವಿರಕ್ಕೂ ಹೆಚ್ಚು ವ್ಯಾಪಾರ ಪ್ರತಿನಿಧಿಗಳು ಹಾಗೂ 3 ಲಕ್ಷಕ್ಕೂ ಅಧಿಕ ಆಸಕ್ತರು ಮೇಳಕ್ಕೆ ಭೇಟಿ ಕೊಟ್ಟಿದ್ದಾರೆ ಹಾಗೂ ಈ ಪ್ರಮಾಣ ಕಳೆದ ವರ್ಷಕ್ಕಿಂತ ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಹೇಳಿದ್ದಾರೆ. ಸಾಫ್ಟ್‌ವೇರ್‌ ಕಂಪನಿಗಳು ಅಂದಾಜು 40 ದಶಲಕ್ಷ ಡಾಲರ್‌ ವಹಿವಾಟು ನಡೆಸಿರುವ ನಿರೀಕ್ಷೆಯಿದೆ.

ಅಮೆರಿಕ, ಜಪಾನ್‌, ಸಿಂಗಪುರ, ಇಂಗ್ಲೆಂಡ್‌, ಚೀನಾ, ಜರ್ಮನಿ, ಸ್ವೀಡನ್‌ ಮುಂತಾದ ದೇಶಗಳ ಪ್ರತಿನಿಧಿಗಳು ಹಾಗೂ 500 ವಿದೇಶಿ ಗಣ್ಯರು ಮೇಳದಲ್ಲಿ ಭಾಗವಹಿಸಿದ್ದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಮೇಳಕ್ಕೆ ಭೇಟಿ ಕೊಟ್ಟಿದ್ದರು. ಕೊನೆಯ ದಿನದಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್‌ ಐಟಿ.ಕಾಂಗೆ ಭೇಟಿ ನೀಡಿ ತಂತ್ರಾಂಶಗಳ ಬಗೆಗೆ ಮಾಹಿತಿ ಪಡೆದರು.

ಪ್ರತಿವರ್ಷ ನವಂಬರ್‌ನಲ್ಲಿ ಬೆಂಗಳೂರು ಐಟಿ ಮೇಳ ಜರುಗಲಿದ್ದು , ಸ್ಥಳೀಯ ಕಂಪನಿಗಳು ನೆರವು ನೀಡಿದರೆ ಮೈಸೂರು, ಬೆಳಗಾವಿ, ಹುಬ್ಬಳ್ಳಿ ಪಟ್ಟಣಗಳಲ್ಲೂ ಐಟಿ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ವಿವೇಕ್‌ ಕುಲಕರ್ಣಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+