ಪೂರ್ಣ ಸ್ಥಗಿತಗೊಂಡ ಇನ್ಸಾಟ್-2ಬಿ ಇನ್ನು ಪ್ರಯೋಗಗಳಿಗಷ್ಟೆ ಸೀಮಿತ
ಬೆಂಗಳೂರು : ಭಾರತದ ಬಹು ಉಪಯೋಗಿ ಉಪಗ್ರಹ ಇನ್ಸಾಟ್- 2ಬಿಯ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಅದನ್ನು ವಿವಿಧ ಪ್ರಯೋಗಗಳಿಗೆ ಬಳಸುವುದಾಗಿ ಇಸ್ರೋ ತಿಳಿಸಿದೆ.
ಕಳೆದ ಶುಕ್ರವಾರ ಭೂ ನಿಯಂತ್ರಣಕ್ಕೆ ಸಿಕ್ಕದ ಉಪಗ್ರಹವನ್ನು ವಿಜ್ಞಾನಿಗಳು ಶತಾಯ ಗತಾಯ ಯತ್ನಿಸಿ ಮತ್ತೆ ಶನಿವಾರ ನಿಯಂತ್ರಣಕ್ಕೆ ತಂದಿದ್ದರು. ಭಾನುವಾರ ಮತ್ತೆ ನಿಯಂತ್ರಣಕ್ಕೆ ಸಿಗದ ಉಪಗ್ರಹದ ಕಾರ್ಯ ಸೋಮವಾರ ಸಂಪೂರ್ಣ ಸ್ಥಗಿತಗೊಂಡಿದೆ.
ಜುಲೈ, 1993ರಲ್ಲಿ ಉಡಾಯಿಸಲಾದ 7 ವರ್ಷ ಆಯುಷ್ಯದ ಈ ಉಪಗ್ರಹದ ಕಾರ್ಯಾವಧಿ ಕಳೆದ ಜುಲೈಗೇ ಅಂತ್ಯಗೊಂಡಿತ್ತು. ಆದಾಗ್ಯೂ ಮುಂದುವರೆದ ಅದರ ಸೇವೆ ಶುಕ್ರವಾರ ಕೈಕೊಟ್ಟಿತು. ಪದೇ ಪದೇ ಭೂ ನಿಯಂತ್ರಣಕ್ಕೆ ಸಿಗದ ಈ ಉಪಗ್ರಹದ ಮೂಲಕ ವಿಎಸ್ಎಟಿ, ದೂರಸಂಪರ್ಕ ಇಲಾಖೆ ಮತ್ತು ದೂರದರ್ಶನ ಪ್ರಸಾರಕ್ಕೆ ಒದಗಿಸುತ್ತಿದ್ದ ಸೇವೆಗಳನ್ನು ಇಸ್ರೋ ಹಿಂತೆಗೆದುಕೊಂಡಿದೆ.
ಇನ್ಸಾಟ್- 2ಇ ಹಾಗೂ ಇನ್ಸಾಟ್- 3ಬಿ ಸೇರಿದಂತೆ ಉಳಿದ ಉಪಗ್ರಹಗಳಿಗೆ ಇನ್ಸಾಟ್- 2ಬಿ ಕಾರ್ಯಗಳನ್ನು ವರ್ಗಾಯಿಸಲಾಗಿದೆ. 4 ಉಪಗ್ರಹಗಳ ನೆರವಿನಿಂದ ಒಟ್ಟು 90 ಟ್ರಾನ್ಸ್ಪಾಂಡರ್ಗಳ ಸೇವೆ ಒದಗಿಸುತ್ತಿರುವ ಇಸ್ರೋ ಸಂಸ್ಥೆ ಇನ್ನೂ 10 ಟ್ರಾನ್ಸ್ಪಾಂಡರ್ಗಳನ್ನು ಥೈಕಾಂನಿಂದ ಗುತ್ತಿಗೆ ಪಡೆದಿದೆ. ಮುಂದಿನ ವರ್ಷ ಇನ್ಸಾಟ್- 3ಸಿಯನ್ನು ಸಂಸ್ಥೆ ಉಡಾಯಿಸಲಿದ್ದು, ಇನ್ನೂ 33 ಟ್ರಾನ್ಸ್ಪಾಂಡರ್ಗಳ ಸೇವೆ ನೀಡಲಿದೆ.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications