Get Updates
Get notified of breaking news, exclusive insights, and must-see stories!

ಮಂಗಳೂರಿನಲ್ಲಿ ಎರಡು ಕೋಟಿ ರುಪಾಯಿ ಮೌಲ್ಯದ ಹೆರಾಯಿನ್‌ ವಶ

ಮಂಗಳೂರು : ಹೆರಾಯಿನ್‌ ವ್ಯವಹಾರದಲ್ಲಿ ತೊಡಗಿದ್ದ ನಾಲ್ವರನ್ನು ಭಾನುವಾರ ಸಂಜೆ ಬಂಧಿಸಿರುವ ನಗರದ ಪೊಲೀಸರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 2 ಕೋಟಿ ರುಪಾಯಿ ಬೆಲೆ ಬಾಳುವ ಸುಮಾರು 800 ಗ್ರಾಂ ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ವಿಜಯ ರಾಜ್‌, ಸ್ವರೂಪ್‌, ಯಾಕೂಬ್‌ ಮತ್ತು ರಜಾಕ್‌ ಎಂದು ಗುರ್ತಿಸಲಾಗಿದೆ. ಈ ನಾಲ್ವರ ಹಿಂದೆ ಬಹು ದೊಡ್ಡ ಜಾಲ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠ ಕಮಲ್‌ ಪಂತ್‌ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ನಗರ ಡಿವೈಎಸ್ಪಿ ಟಿಸಿಎಂ ಶರೀಫ್‌ ವಹಿಸಿದ್ದರು. ಮಂಗಳಾ ಕ್ರೀಡಾಂಗಣದ ಬಳಿ ಹೊಂಚು ಹಾಕಿ ಆರೋಪಿಗಳನ್ನು ಬಂಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ ಎನ್ನುವ ಗುಮಾನಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಿಂದ ಅಶೋಕ್‌ ಮತ್ತು ಮೋಹನ್‌ ಎಂಬ ಇಬ್ಬರು ಪೇದೆಗಳನ್ನು ಮಫ್ತಿಯಲ್ಲಿ ಗೂಢಚರ್ಯೆಗಾಗಿ ಕಳಿಸಲಾಗಿತ್ತು . ದಲ್ಲಾಳಿಗಳಂತೆ ನಟಿಸಿರುವ ಪೊಲೀಸರು, ಕೇರಳದ ವ್ಯಕ್ತಿಗೆ ಹೆರಾಯಿನ್‌ ಬೇಕಾಗಿದೆ ಎಂದು ತಿಳಿಸಿದಾಗ, ಆರೋಪಿಗಳು ಮಾರುತಿ ಕಾರಿನಲ್ಲಿ ಮಾಲಿನೊಂದಿಗೆ ಬಂದು ಕಾಯುತ್ತಿದ್ದಾಗ, ಪೊಲೀಸರು ದಿಢೀರ್‌ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+