ಟಿ.ವಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?
ಲಂಡನ್ : ಮನೇಲಿ ಮಕ್ಳು ಟಿ.ವಿ ನೋಡ್ತಾ ಇದ್ರೆ. ನಾವೆಲ್ಲಾ ಬೈದೇ ಬೈತೀವಿ. ಓದೋದು ಬಿಟ್ಟು ಸದಾ ಟಿವಿ ನೋಡ್ತಾನೆ ಅಂತ ಕೆಲವೊಮ್ಮೆ ಹೊಡೆಯೋದು ಉಂಟು. ಟಿ.ವಿ ನೋಡುವುದರಿಂದ ಮಕ್ಕಳ ನಡೆವಳಿಕೆ ಹದಗೆಡುತ್ತದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಆದರೆ, ಈ ಅಭಿಪ್ರಾಯ ಸುಳ್ಳು ಎಂದು ಈಗ ಸಾಬೀತಾಗಿದೆ.
ಇಲ್ಲಿನ ಡೈಲಿ ಎಕ್ಸ್‌ಪ್ರೆಸ್‌ನಲ್ಲಿ ಬಂದಿರುವ ವರದಿ ಟಿ.ವಿ. ನೋಡುವುದರಿಂದ ಮಕ್ಕಳ ನಡೆವಳಿಕೆ ಹಾಳಾಗುವುದಿಲ್ಲ ಎಂದು ಹೇಳಿದೆ. ಬ್ರಿಟಿಷ್‌ನ ಮಕ್ಕಳ ಮನಃಶಾಸ್ತ್ರಜ್ಞರೊಬ್ಬರು ಎಂಟು ವರ್ಷಗಳ ಕಾಲ ನಡೆಸಿದ ಅಧ್ಯಯನವನ್ನು ಉದ್ದರಿಸಿರುವ ವರದಿ ಈ ನಂಬಿಕೆ ಸುಳ್ಳು ಎಂದು ಹೇಳಿದೆ.
ಪ್ರೊ. ಟೋನಿ ಕಾರ್ಲ್‌ಟನ್ ಅವರ ಹೆಸರನ್ನು ಉಲ್ಲೇಖಿಸಿರುವ ಈ ವರದಿ ಕಿರುಪರದೆಯ ಮೇಲೆ ಮೂಡುವ ಹಿಂಸಾತ್ಮಕ ನಡೆವಳಿಕೆ ಪಾಲಕರ ಮಾರ್ಗದರ್ಶನ ಹಾಗೂ ಉತ್ತಮ ಸಮುದಾಯದಲ್ಲಿರುವ ಮಕ್ಕಳ ಮೇಲೆ ಹಾಗೂ ಯುವಕರ ಮೇಲೆ ಪರಿಣಾಮ ಬೀರದು ಎಂದೂ ಹೇಳಿದೆ.
ನಮಗಿದು ಅನ್ವಯಿಸೀತೆ ? : ಮನಃಶಾಸ್ತ್ರಜ್ಞರ ಅಧ್ಯಯನ ಮಕ್ಕಳ ಮೇಲೆ ಟಿ.ವಿ.ಯಲ್ಲಿ ಬರುವ ಕಾರ್ಯಕ್ರಮಗಳು ಪ್ರಭಾವ ಬೀರದು ಎಂದು ಹೇಳಿದ್ದಾರೆ. ಆದರೆ, ಸಾಂಪ್ರದಾಯಿಕ ಪರಂಪರೆಯ ಭಾರತಕ್ಕೂ ಅದು ಅನ್ವಯಿಸೀತೆ ಎಂಬುದು ಈಗಿನ ಪ್ರಶ್ನೆ. ನಾವು ದೂರದರ್ಶನದಲ್ಲಿ ಹಾಗೂ ವಿವಿಧ ಕನ್ನಡ ಟಿ.ವಿ. ಚಾನೆಲ್‌ಗಳಲ್ಲಿ ಬರುವ ಕನ್ನಡ ಕಾರ್ಯಕ್ರಮಗಳನ್ನೇ ಉದಾಹರಣೆಗೆ ತೆಗೆದುಕೊಂಡರೆ, ಮಕ್ಕಳ ನಡವಳಿಕೆ ಬದಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲು ಬರುವುದಿಲ್ಲ.
ಕನ್ನಡ ಚಲನಚಿತ್ರಗಳಲ್ಲಿ ಬರುವ ದ್ವಂದ್ವಾರ್ಥ ಸಂಭಾಷಣೆ, ಕನ್ನಡದ ಕೆಲವು ಹಾಸ್ಯ ಕಾರ್ಯಕ್ರಮಗಳಲ್ಲಿ ಬಳಸುವ ಬೈಗುಳಗಳು ಹಾಗೂ ಅಸಹ್ಯ ಅಭಿನಯವನ್ನು ಮಕ್ಕಳು ಪುನಾರಾವರ್ತಿಸುವುದನ್ನು ನಾವು ಕಾಣುತ್ತೇವೆ. ಶಕ್ತಿಮಾನ್ ಕಾರ್ಯಕ್ರಮ ನೋಡಿ ಪ್ರಚೋದನೆಗೆ ಒಳಗಾಗಿ ಮಕ್ಕಳು ಮಾಡಿಕೊಂಡ ಅನಾಹುತ ನಮ್ಮ ಮುಂದೆ ಜ್ವಲಂತವಾಗಿದೆ. ಬೈಗುಳವೇ ಹಾಸ್ಯ ಎಂದು ತಿಳಿದಿರುವ ನಮ್ಮ ಕಾರ್ಯಕ್ರಮ ತಯಾರಕರು, ತಿಳಿಹಾಸ್ಯವನ್ನೇ ಮರೆತು ಬಿಟ್ಟಿದ್ದಾರೆ. ಹಾಸ್ಯ ರತ್ನ ನರಸಿಂಹರಾಜು ಅವರ ಕಾಲದಲ್ಲಿದ್ದ ಅಭಿನಯ ಹಾಸ್ಯ ಇಂದು ಮೂಲೆ ಗುಂಪಾಗಿದೆ. ಇಂದಿನ ಮಕ್ಕಳು ಕೆಟ್ಟ ಮಾತುಗಳನ್ನು ಟಿ.ವಿ. ನೋಡಿಯೇ ಕಲಿತ ಉದಾಹರಣೆ ಸಾವಿರಾರು. ಸದ್ಯಕ್ಕಿದು ಮತ್ತೊಂದು ಅಧ್ಯಯನಕ್ಕೆ ಸೂಕ್ತ ವಿಷಯ. (ಎಎಫ್‌ಪಿ, ಇಂಡಿಯಾ ಇನ್‌ಫೋ ವರದಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications