ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ಬೇಜಾರಾಗಿದೆ, ಮಂಗಳ ಕರೆಯುತ್ತಿದ್ದಾನೆ

By Staff
|
Google Oneindia Kannada News

Future is ours. Lets go to Marsವೈಜ್ಞಾನಿಕ ಅನ್ವೇಷಣೆಗಳು ಶುರುವಾಗುವುದೇ ಹೀಗೆ. ಅವು ಸಫಲವಾಯಿತೆಂದರೆ ನಮಗೆ, ನಿಮಗೆ ಅವರಿಗೆ , ಇವರಿಗೆ ಎಲ್ಲರಿಗೂ ಪ್ರಯೋಜನಕ್ಕೆ ಬರತ್ತೆ...... ಹೌದು . ಹಿಂದೆ , ಬಹು ಹಿಂದೆಯೇ ಭಾರತದ ಜ್ಯೋತಿಷಿಗಳು ನಮಃಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ...... ಕೇತುವೇ ನಮಃ ಎಂದು ಹೇಳುವ ಮೂಲಕ 9 ಗ್ರಹಗಳಿವೆ ಎಂದು ಹೇಳಿದ್ದರು. ಖಗೋಳ ಶಾಸ್ತ್ರಜ್ಞರು ಆನಂತರ ಸೂರ್ಯನನ್ನು ಹೊರತುಪಡಿಸಿ ನವಗ್ರಹಗಳಿವೆ ಎಂಬುದನ್ನು ಸಾರಿದರು.

ಈ 9 ಗ್ರಹಗಳಲ್ಲಿ ಒಂದಾದ ಮಂಗಳ ಕೆಂಪು ಮಣ್ಣನ್ನೂ ಕಲ್ಲನ್ನೂ ಹೊಂದಿರುವ ಗ್ರಹ . ಹೀಗಾಗೇ ಇದಕ್ಕೆ ಅಂಗಾರಕ ಎಂಬ ಮತ್ತೊಂದು ಹೆಸರೂ ಇದೆ. ಇತ್ತೀಚೆಗೆ ವಿಜ್ಞಾನಿಗಳು ಮಂಗಳನನ್ನು ಕೆಂಪು ಗ್ರಹ ಎಂದು ಕರೆದರು. ಪಾತಾಳದಲ್ಲಿ ಹಾಗೂ ಆಕಾಶದಲ್ಲಿ (ದೇವಲೋಕ) ಅನುಕ್ರಮವಾಗಿ ನಾಗರಾಜನೂ, ದೇವತೆಗಳೂ ಇದ್ದಾರೆ ಎಂದು ನಾವೆಲ್ಲ ನಂಬಿದರಲ್ಲವೆ ?

ಈಗ ನಾಸಾದ ವಿಜ್ಞಾನಿಗಳು ಮಂಗಳನಲ್ಲಿರಬಹುದಾದ ಜೀವಿಗಳ ಹಾಗೂ ಈ ಜೀವಿಗಳಿಂದ ಹೊರಹೊಮ್ಮುವ ರಾಸಾಯನಿಕಗಳ ಕುರಿತು ಅಧ್ಯಯನ ನಡೆಸಲು ನೌಕೆಯಾಂದನ್ನು ರವಾನಿಸಲು ಸನ್ನದ್ಧರಾಗುತ್ತಿದ್ದಾರೆ. ಭೂಮಿಯಂತೆಯೇ ಅನುಕೂಲಕರವಾದ ವಾತಾವರಣ ಇರುವುದೆಂದು ನಂಬಲಾಗಿರುವ ಹಾಗೂ ಕುತೂಹಲದ ಕೇಂದ್ರಬಿಂದುವಾಗಿರುವ ಮಂಗಳ ಗ್ರಹಕ್ಕೆ ನೌಕೆಯಾಂದನ್ನು ಕಳುಹಿಸಲು ಎರಡು ಬಾರಿ ಪ್ರಯತ್ನಿಸಿ ವಿಫಲವಾಗಿರುವ ನಾಸಾ ವಿಜ್ಞಾನಿಗಳು ಛಲ ಬಿಡದ ತ್ರಿವಿಕ್ರಮರಂತೆ ಮುಂದಿನ 20 ವರ್ಷಗಳ ಅವಧಿಯಲ್ಲಿ ಈ ಗ್ರಹಕ್ಕೆ ಮಾನವನನ್ನು ಕಳುಹಿಸಲು ವಿಶೇಷ ಯೋಜನೆಯಾಂದನ್ನು ರೂಪಿಸಿದ್ದಾರೆ.

2004ರ ಜನವರಿಯಲ್ಲಿ ಯಂತ್ರಮಾನವನನ್ನು ಅಂಗಾರಕನಲ್ಲಿಗೆ ಕಳುಹಿಸಲು ಕಳೆದ ತಿಂಗಳು ನಾಸಾ ಯೋಜನೆ ರೂಪಿಸಿತ್ತು. ಕಳೆದ ವರ್ಷ ಮೂರು ತಿಂಗಳ ಅವಧಿಯಲ್ಲಿ ಎರಡು ಬಾರಿ ನೌಕೆಯನ್ನು ಇಲ್ಲಿಗೆ ಕಳುಹಿಸಲು ವಿಫಲ ಯತ್ನ ನಡೆಸಿದ್ದ ವಿಜ್ಞಾನಿಗಳು ಸರಿ ಸುಮಾರು 500 ದಶಲಕ್ಷ ಡಾಲರ್‌ ನಷ್ಟ ಅನುಭವಿಸಿದ್ದರು. ಆದರೂ ಶೀತಲ ಮತ್ತು ಧೂಳಿನಿಂದ ಕೂಡಿದ ನೆರೆಯ ಗ್ರಹಕ್ಕೆ 2010ರ ತನಕ ಪ್ರತಿ 26 ತಿಂಗಳಿಗೊಂದರಂತೆ ನೌಕೆಯನ್ನು ಕಳುಹಿಸಿ ಅಲ್ಲಿನ ನಿಗೂಢತೆಯನ್ನು ಅಭ್ಯಸಿಸಲು ಅವರು ತೀರ್ಮಾನಿಸಿದ್ದಾರೆ. 2004ರಲ್ಲಿ ಯಂತ್ರಮಾನವನನ್ನು ಕಳುಹಿಸುವ ಪ್ರಯತ್ನ ಯಶಸ್ವಿಯಾದರೆ ಕೂಡಲೇ ಅತ್ಯಂತ ಶಕ್ತಿಶಾಲಿ ವೈಜ್ಞಾನಿಕ ವೀಕ್ಷಕನಾದ ಆರ್ಬಿಟರ್‌ ಕಳುಹಿಸುವ ಯೋಜನೆ ಇದೆ.

ಮಂಗಳ ಗ್ರಹದಲ್ಲಿ ಸ್ವಂತಮನೆ : ಅಂಗಾರಕನ ಅಂಗಳಕ್ಕೆ ಕಾಲಿಡಲು ಅಡ್ಡಿಯಾಗಿರುವ ಕಲ್ಲು ಬಂಡೆಗಳ ಕುರಿತು ಸಹ ಈ ರೋಬೋ ಸಮಗ್ರ ಮಾಹಿತಿ ನೀಡಲಿದೆ. ಮುಂದಿನ 20 ವರ್ಷಗಳ ಅವಧಿಯಲ್ಲಿ ಮನುಜನನ್ನು ಈ ಗ್ರಹದ ಮೇಲೆ ಕಾಲಿರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮಂಗಳನ ಅಂಗಳದ ವೈಜ್ಞಾನಿಕ ಸಮೀಕ್ಷೆ ಅನಿವಾರ್ಯವಾಗಿದೆ. 2009ರಲ್ಲಿ ಇಟಲಿಯ ಸಹಯೋಗದಲ್ಲಿ ಕಳುಹಿಸಲು ಉದ್ದೇಶಿಸಿರುವ ಅರ್ಬಿಟರ್‌ ಮಂಗಳನ ಮೇಲ್ಪದರದ ಮೇಲೆ ರೆಡಾರ್‌ ಕಿರಣಗಳನ್ನು ಪಸರಿಸಿ ಅಲ್ಲಿರಬಹುದಾದ ಜಲ ನಿಕ್ಷೇಪದ ವರದಿ ನೀಡಲಿದೆ. ಆನಂತರ 2011ರಲ್ಲಿ ಬಯಾಪ್ಸಿ ಎಂಬ ಉಪಕರಣವನ್ನು ಮಂಗಳನ ಅಂಗಳಕ್ಕೆ ಇಳಿಸುವ ಯೋಜನೆ ಇದೆ. ಇದು ಮಂಗಳನಲ್ಲಿರುವ ಕಲ್ಲು ಮಣ್ಣಿನ ಮಾದರಿ ಸಂಗ್ರಹಿಸಿ ನಂತರ ಭೂಮಿಗೆ ಮರಳುತ್ತದೆ.

ಮಂಗಳಗ್ರಹ ಭೂಮಿಯ ನಂತರ ಬದುಕಲು ಯೋಗ್ಯವಾದ , ಸೂಕ್ತವಾದ ಗ್ರಹ ಎಂದು ನಂಬಲಾಗಿದ್ದು, ಈ ಗ್ರಹದಲ್ಲಿ ಜೀವಿಗಳು ಇವೆ ಎಂಬ ಶಂಕೆ ವಿಜ್ಞಾನಿಗಳಲ್ಲಿ ಬಲಗೊಳ್ಳುತ್ತಿದೆ. ಮಂಗಳನ ಯಾತ್ರೆ ಸುಲಭವೇನಲ್ಲ. ಇದು ಅತ್ಯಂತ ದೀರ್ಘವೂ ದುರ್ಗಮವೂ ಆದದ್ದಾಗಿದೆ. ಆದರೂ, ಪ್ರತಿ 26 ತಿಂಗಳುಗಳಿಗೊಮ್ಮೆ ಭೂಮಿ ಮತ್ತು ಮಂಗಳ ಗ್ರಹಗಳು ಅನುಕೂಲಕರ ಪಥಕ್ಕೆ ಬರುತ್ತವೆ. ಆ ಸಂದರ್ಭದಲ್ಲಿ ಈ ಎಲ್ಲ ಪ್ರಯೋಗ , ಪ್ರಯಾಣ ನಡೆಸಲು ನಾಸಾ ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಚಂದ್ರನ ನಂತರ ಮಂಗಳನ ಅಂಗಳದಲ್ಲಿ ವಿಹರಿಸುವ ವಿಜ್ಞಾನಿಗಳ ಉದ್ದೇಶ ಸಫಲವಾಗಲಿ. ಆಗಲಾದರೂ ನಾವು ಬಾಡಿಗೆ ಮನೆಗೆ ಗುಡ್‌ಬೈ ಹೇಳಿ ಮಂಗಳ ಅಂಗಳದಲ್ಲಿ ಒಂದು ಸ್ವಂತ ಮನೆ ಕಟ್ಟಿಕೊಳ್ಳುವಾ ! ಜೈ ವಿಜ್ಞಾನ್‌.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X