ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್‌ನಲ್ಲಿ ಬಂಡವಾಳ ಹೂಡಿ : ಬ್ರಿಟನ್‌ ಸಚಿವೆ

By Staff
|
Google Oneindia Kannada News

ಬೆಂಗಳೂರು : ಭಾರತದ ಮಾಹಿತಿ, ಸಂವಹನೆ ಮತ್ತು ಮನರಂಜನಾ ಸಂಸ್ಥೆಗಳಿಗೆ (ಐಸಿಇ) ಲಂಡನ್‌ನಲ್ಲಿ ಬಂಡವಾಳ ಹೂಡುವಂತೆ ಬ್ರಿಟನ್‌ನ ಮಾಹಿತಿ ತಂತ್ರಜ್ಞಾನ ಸಚಿವೆ ಪ್ಯಾಟ್ರಿಕ್‌ ಹಾವಿಟ್‌ ಬುಧವಾರ ಸಂಜೆ ಕರೆ ನೀಡಿದರು.

ಬೆಂಗಳೂರು ಐಟಿ ಡಾ-ಟ್‌ ಕಾಂನ ಉದ್ಘಾಟನಾ ಭಾಷಣದಲ್ಲಿ ಅವರು ಕಂಪ್ಯೂಟರ್‌ ಕ್ಷೇತ್ರ, ಮೊಬೈಲ್‌ ಫೋನ್‌ಗಳು ಮತ್ತು ಇಂಟರ್ಯಾಕ್ಟಿವ್‌ ಬ್ರಾಡ್‌ ಕಾಸ್ಟಿಂಗ್‌ ಕ್ಷೇತ್ರದಲ್ಲಿ ಭಾರತೀಯರಿಗೆ ಉತ್ತಮ ಪಾಲುದಾರರನ್ನು ಮತ್ತು ಮಾರುಕಟ್ಟೆಯನ್ನು ಬ್ರಿಟನ್‌ ಸರಕಾರ ಒದಗಿಸುವುದು ಎನ್ನುತ್ತಾ ಮಾಹಿತಿ ಕ್ಷೇತ್ರದಲ್ಲಿ ಭಾರತ ಮುಂದಿರುವುದನ್ನು ಒಪ್ಪಿಕೊಂಡರು. ಅಮೆರಿಕಾದತ್ತ ಮುಖ ಮಾಡಿರುವ ಐಟಿ ತಜ್ಞರು ಬ್ರಿಟನ್‌ಗೆ ಬರಲು ಇದು ಸುಸಮಯ. ಮಾಹಿತಿ ಆಧಾರಿತ ಆರ್ಥಿಕ ಕ್ಷೇತ್ರದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಸಹಜವಾಗಿ ಪಾಲುದಾರರೇ. ಆದ್ದರಿಂದ ಇನ್ನಷ್ಟು ಐಸಿಇ ಕಂಪೆನಿಗಳು ಲಂಡನ್‌ನಲ್ಲಿಯೂ, ಬ್ರಿಟಿಷ್‌ ಕಂಪೆನಿಗಳು ಭಾರತದಲ್ಲಿ ಬಂಡವಾಳ ಹೂಡುವುದನ್ನು ನೋಡಲು ಇಷ್ಟ ಪಡುತ್ತೇನೆ ಎಂದು ಸಚಿವೆ ತಮ್ಮ ಇಂಗಿತವನ್ನು ತೋಡಿಕೊಂಡರು.

ಲಂಡನ್‌ ಮತ್ತು ಭಾರತ ನಡುವಿನ ಪ್ರವಾಸಕ್ಕೆ ಅನುಕೂಲಾಗುವಂತೆ ಬ್ರಿಟನ್‌ ಆರಂಭಿಸುವ ಈ ಹೊಸ ಸ್ಕೀಮನ್ನು ಉಪಯೋಗಿಸಿಕೊಂಡು ಹೆಚ್ಚು ಮಂದಿ ಭಾರತೀಯ ಬಂಡವಾಳಗಾರರು ಈ ಅವಕಾಶವನ್ನು ಉಪಯೋಗಿಸಕೊಳ್ಳಬೇಕಲ್ಲದೆ, ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ಬ್ರಿಟಿಷ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಬೇಕು ಎಂದರು.

( ಯುಎ--ನ್‌-ಐ)

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X