Get Updates
Get notified of breaking news, exclusive insights, and must-see stories!

ಹಸುರು ಮನಸಿನವರ ಕನಸಿಗೊಂದು ಹು-ಲ್ಲು-ಗಾ-ವ-ಲು

ಕಾರ್ಪೊರೇಟ್‌ ಜಗತ್ತು ಮನಸ್ಸಿನ ವೇಗವನ್ನೂ ಮೀರಿ ಸಾಗುತ್ತಿದೆ. ಒಮ್ಮೆಲೇ ಮಿದುಳಲ್ಲಿ ನೂರಾರು ಲೆಕ್ಕಾಚಾರಗಳು. ಹಿಂದೂಮುಂದೂ ನೋಡದೆ ಹಾದಿಯಲ್ಲಿ ಮುನ್ನುಗ್ಗುವಾಗ ಪಾರ್ಥೇನಿಯಂ ಅಲರ್ಜಿಯ ತುರುಸು, ಮುಳ್ಳುಬೇಲಿಯ ತರಚು. ಎಲ್ಲವುಗಳನ್ನೂ ಮೀರಿ ನಿಲ್ಲುವುದು ಯುವಕರ ಆತ್ಮವಿಶ್ವಾಸ, ಮಾಡಿಯೇ ತೀರುತ್ತೇನೆಂಬ ಛಲ. ಪರಿಣಾಮ ‘ಯುರೇಕಾ’ ಎಂಬ ಸಾಧನೆಯ ಕೂಗು.

ಬೆಂಗಳೂರಲ್ಲಿ ಸರಿ ಸುಮಾರು ಒಂದು ಲಕ್ಷ ಛಲವಂತ ಐಟಿ ನುರಿತರಿದ್ದಾರೆ. ಮುಂದೊಂದು ದಿನ ತಾವೂ ಯಾವುದೋ ಒಂದು ಕಂಪನಿಯ ಮಾಲೀಕರಾಗುವ ಕನಸು ಅವರ ಕಣ್ಣುಗಳಲ್ಲಿ ಮನೆ ಮಾಡಿದೆ. ಇಂಥ ಉತ್ಸಾಹಿ ಯುವಕರಿರುವ ತಾಣದಲ್ಲಿ ಪ್ರಸಿದ್ಧ ಜನರಲ್‌ ಎಲೆಕ್ಟ್ರಿಕ್ಸ್‌ ಮೊನ್ನೆ ಮೊನ್ನೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ತೆರೆದಿದೆ. ಪ್ರಸ್ತುತ 500 ಪಿಎಚ್‌.ಡಿ. ಪದವೀಧರರು ಹಾಗೂ ವಿಜ್ಞಾನಿಗಳಿರುವ ಈ ಕೇಂದ್ರ ಇನ್ನೊಂದು ವರ್ಷದಲ್ಲಿ 1800 ಸಂಶೋಧಕರಿಗೆ ಮನೆಯಾಗುವ ಉದ್ದಿಶ್ಯ ಹೊಂದಿದೆ.

ಜಗತ್ತಿನ ಸಿಇಐ ಸಿಎಂಎಂ 5ನೇ ವಿಭಾಗದ 22 ಸಾಫ್ಟ್‌ವೇರ್‌ ಕಂಪನಿಗಳಲ್ಲಿ 12 ಬೆಂಗಳೂರಿನಲ್ಲೇ ಇವೆ. ಅವಕಾಶವೇನೋ ಇಲ್ಲಿ ಆಕಾಶದಷ್ಟಿದೆ. ಉತ್ಸಾಹಿ ಯುವಕರಿಗೂ ಕೊರತೆ ಇಲ್ಲ. ಆದರೆ ಒಂದು ಕಂಪನಿ ಕಟ್ಟಿ- ಬೆಳೆಸಲು ಅಗತ್ಯವಾದ ಅಂಶಗಳು ಯಾವುವು? ನಿಮಗೇನಾದರೂ ತಿಳಿದಿದೆಯೇ?

ಯೋಜನೆಗಳನ್ನು ರೂಪಿಸುವುದು, ಯೋಚನಾ ಲಹರಿ ವಿಸ್ತರಿಸಿಕೊಳ್ಳುವುದು, ಅನುಸರಣಾರ್ಹ ಅಂಶಗಳನ್ನು ಎರವಲು ಪಡೆಯುವುದು, ಫಾಸ್ಟ್‌ ಪ್ರಪಂಚಕ್ಕೆ ತಕ್ಕಂತೆ ಹೆಜ್ಜೆ ಇಡುವುದು, ಮಾರುಕಟ್ಟೆಯ ಮೇಲೆ ನಿಗಾ ವಹಿಸುವುದು, ಮಿಗಿಲಾಗಿ ವೆಂಚರ್‌ ಕ್ಯಾಪಿಟಲ್‌ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ತೊಡಗಿಸುವುದು..... ಹೀಗೆ ಇನ್ನಿತರೆ ವಿಷಯಗಳ ಬಗೆಗೆ ನಿಮಗೆ ನುರಿತರು ಹಾಗೂ ಜಗಜ್ಜಾಣರೆಂದು ಗುರುತಿಸಿಕೊಂಡವರಿಂದ ಮಾಹಿತಿ ಲಭ್ಯ, ನವೆಂಬರ್‌ 3 ಹಾಗೂ 4ರಂದು ಬೆಂಗಳೂರು ಐಟಿ ಡಾಟ್‌ ಕಾಂ ಮೇಳದಲ್ಲಿ ನಡೆಯಲಿರುವ ‘ಟಿಐ ಇ ಕಾನ್‌ 2000 ಬೆಂಗಳೂರು’ ಸಮಾವೇಶದಲ್ಲಿ. ತಾಜ್‌ ವೆಸ್ಟೆಂಡ್‌ನಲ್ಲಿ ನಡೆಯಲಿರುವ ಈ ಸಮಾವೇಶ ಹಸುರು ಮನಸಿನವರ ಕನಸುಗಳನ್ನು ನನಸಾಗಿಸುವ ಉದ್ದಿಶ್ಯ ಹೊಂದಿದೆ.

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+