ನೀವೀಗ ವೀಸಾಕ್ಕಾಗಿ ಚೆನ್ನೈಗೆ ಅಲೆಯಬೇಕಾದ್ದಿಲ್ಲ
ಬೆಂಗಳೂರು : ಅಕ್ಟೋಬರ್ 29ರ ಭಾನುವಾರ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಮೊಟ್ಟಮೊದಲ ಅಂತಾರಾಷ್ಟ್ರೀಯ ವಿಮಾನ ಬಂದಿಳಿದ ಐತಿಹಾಸಿಕ ದಿನ. ಈ ಸುದ್ದಿಯ ಬೆನ್ನ ಹಿಂದೆಯೇ ಅಮೆರಿಕಕ್ಕೆ ಹಾರಲಿರುವವರಿಗೆ ವೀಸಾ ನೀಡಲು ನಡೆಯುವ ಕೆಲವು ಪೂರ್ವಭಾವಿ ಸಿದ್ಧತೆಗಳ (ಡ್ರಾಪ್ ಬಾಕ್ಸ್) ಕೇಂದ್ರ ಬೆಂಗಳೂರಿನಲ್ಲಿ ಮಂಗಳವಾರ ಆರಂಭಗೊಂಡಿದೆ.
ಈ ಸಂಬಂಧ ಟಿಟಿ ಸರ್ವೀಸ್ ಕೇಂದ್ರದ ಕಛೇರಿಯನ್ನು, ಚೆನ್ನೈನಲ್ಲಿ ಅಮೆರಿಕದ ಸಲಹೆಗಾರರಾಗಿರುವ ಕ್ಲೈಡ್ ಜೋನ್ಸ್ ಉದ್ಘಾಟಿಸಿದ್ದಾರೆ. ಇಂಥ ಕಛೇರಿ ಚೆನ್ನೈನಲ್ಲಿ ಈಗಾಗಲೇ ಕಳೆದ ಫೆಬ್ರವರಿಯಿಂದ ಕೆಲಸ ನಿರ್ವಹಿಸುತ್ತಿದೆ. ಈ ಕೇಂದ್ರದ ವತಿಯಿಂದ ಅಮೆರಿಕಾಕ್ಕೆ ಹೋಗಲಿರುವವರಿಗೆ ವೀಸಾ ನೀಡಲು ಕೇವಲ 48ಗಂಟೆಯಿಂದ 72 ಗಂಟೆಗಳೊಳಗೆ ಪೂರ್ವಭಾವಿ ಕೆಲಸಗಳನ್ನು ಮುಗಿಸಿಕೊಡಲಾಗುವುದು.
ರಾಜ್ಯದ ಅರ್ಜಿದಾರರು ಈ ಕೇಂದ್ರದ ಮೂಲಕ ತಮ್ಮ ವೀಸಾ ಪಡೆಯಬಹುದು. 30 ಸಾವಿರ ಎಚ್1 ಬಿ ವಿಸಾ ಸೇರಿದಂತೆ ಒಂದು ಲಕ್ಷ 60 ಸಾವಿರ ಅರ್ಜಿಗಳನ್ನು ಚೆನ್ನೈನ ಕಛೇರಿ ಪರಿಶೀಲಿಸಿ ದಾಖಲೆ ಮಾಡಿದೆ. ಈ ಕೇಂದ್ರದ ಮೂಲಕ ಅರ್ಜಿ ಸಲ್ಲಿಸುವವರು ಸಂದರ್ಶನಕ್ಕೆ ಖುದ್ದಾಗಿ ಹಾಜರಾಗಬೇಕಾದ್ದಿಲ್ಲ. ಇಂಥದೇ ಇನ್ನೊಂದು ಕೇಂದ್ರ ಹೈದರಾಬಾದಿನಲ್ಲಿ ನವೆಂಬರ್ 15ರಿಂದ ಕಾರ್ಯಾರಂಭ ಮಾಡಲಿದೆ ಎಂದು ಎಂದು ಜೋನ್ಸ್ ತಿಳಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications