ನೆಹರು ನಂಬಿದ ದೇಗುಲಕ್ಕೆ ಇನ್ನೊಂದು ಗೋಪುರ ಕಟ್ಟಿದ ಇನ್‌ಫೋಸಿಸ್
( ನಮ್ಮ ಪ್ರತಿನಿಧಿಯಿಂದ )
ಬೆಂಗಳೂರು : ಎನ್. ಆರ್. ನಾರಾಯಣ ಮೂರ್ತಿ ಹೇಳುತ್ತಿದ್ದರು. ‘ಭಾರಿ ಕೈಗಾರಿಕೆ, ಅಣೆಕಟ್ಟು , ಉನ್ನತ ಶಿಕ್ಷಣದ ಕೇಂದ್ರಗಳು ಈ ರಾಷ್ಟ್ರದ ದೇವಾಲಯಗಳು ಎಂಬ ಜವಹರಲಾಲ್ ನೆಹರು ಅವರ ಮಾತುಗಳಲ್ಲಿ ನಂಬುಗೆ ಇಟ್ಟವನು ನಾನು. ತುರುಸಿನ ಪೈಪೋಟಿಯ ಮಾರುಕಟ್ಟೆಯಲ್ಲಿ ನಾವು , ಅಂದರೆ ಭಾರತ ವಿಜಯದ ಗೆರೆ ದಾಟಬೇಕಾದರೆ ಜಾಗತಿಕ ಮಟ್ಟದಲ್ಲಿ ನಾವಿನ್ನೂ ವಿಶಾಲವಾದ ದೇಗುಲಗಳನ್ನು ನಿರ್ಮಿಸುತ್ತಾ ಸಾಗಬೇಕು’ ಮೂರ್ತಿ ಅವರು ಕೊಡುತ್ತಿದ್ದ ಈ ಸಾದೃಶ್ಯಕ್ಕೆ ಹಿನ್ನೆಲೆ ಇತ್ತು.
ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಹುರಾಷ್ಟ್ರೀಯ ಸಂಸ್ಥೆಗಳು ಕಾಲಿಟ್ಟಾಗ ಜನ ಮಾತನಾಡಿಕೊಳ್ಳುತ್ತಿದ್ದರು. ‘ಅವರ ಮುಂದೆ ನಮ್ಮ ಆಟ ನಡೆಯುವುದಿಲ್ಲ , ನಮಗೆ ಬೇರೆ ದಾರಿಯಿಲ್ಲ , ಎಲ್ಲಾ ನಮ್ಮ ಕರ್ಮ ಅಂತ ಕೈಚೆಲ್ಲಬೇಕು. ಅಥವಾ ಎಂನ್‌ಸಿಗಳ ಆಗಮನದ ವಿರುದ್ಧ ಆಂದೋಲನ ಸಾರಬೇಕು.’ ಆದರೆ, ನಾವು ಈ ಎರಡೂ ಮಾರ್ಗಗಳನ್ನು ಧಿಕ್ಕರಿಸಿ ನಡೆದೆವು. ಅವರಲ್ಲಿ ಒಳ್ಳೆಯದು ಯಾವುದಿದೆಯೋ ಅದನ್ನೆಲ್ಲ ಸಂತೋಷದಿಂದ ಕಲಿತೆವು. ಅದರ ಫಲವೇ ಇವತ್ತು ಪ್ರಪಂಚದ ಮಾಹಿತಿ ತಂತ್ರಜ್ಞಾನದ ಸರದಾರ ಎನಿಸಿ ನಿಮ್ಮೆಲ್ಲರ ಮುಂದೆ ನಿಂತಿರುವ ಇನ್‌ಪೋಸಿಸ್.
ಎನ್. ಆರ್. ನಾರಾಯಣಮೂರ್ತಿ ಯಾರೆಂದು ಗೊತ್ತಿದ್ದವರಿಗೆ ಇನ್‌ಫೋಸಿಸ್ ಸಂಸ್ಥೆಯ ಪರಿಚಯ ಮಾಡಿಸಬೇಕಿಲ್ಲ. ಅಂತೆಯೇ ಇನ್‌ಫೋಸಿಸ್ ಸಂಸ್ಥೆ ಗೊತ್ತಿದ್ದವರಿಗೆ ನಾರಾಯಣಮೂರ್ತಿ ಅವರನ್ನೂ ಸಹ. ಆದರೆ ಇವತ್ತು ಕನ್ನಡದ ನೆಲದಲ್ಲಿ ಎದ್ದುನಿಂತ ಇಂಥದೊಂದು ಸಂಸ್ಥೆ ಮತ್ತು ಇಂಥವರೊಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ಯಾಕೆ ಸುದ್ದಿ ಮಾಡುತ್ತಿದ್ದಾರೆಂದರೆ....
ವಿಜ್ಞಾನ, ತಂತ್ರಜ್ಞಾನದ ಅತ್ಯಾಧುನಿಕ ಅಂಗಳವೆನಿಸಿರುವ ಹೊಸೂರು ರಸ್ತೆಯ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಆ ಏಳು ಮಂದಿ ಕನಸುಗಾರರು ನೆಟ್ಟಿದ ಒಂದು ಪುಟ್ಟ ಸಸಿ ಅಕ್ಟೋಬರ್ 31ರ ಶನಿವಾರ ಸಂಜೆ ಇನ್ನೊಂದು ಟಿಸಿಲು ಒಡೆಯಿತು. ಈ ಚಿಗುರಿನ ಹೆಸರು ಇನ್‌ಫೋಸಿಸ್ ಸಿಟಿ. ಅದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವ ಇಂಥದಿನ್ನೊಂದು ಸಂಸ್ಥೆ ಜಗತ್ತಿನಲ್ಲೇ ಇಲ್ಲ ಎಂದು ಸಾರಿದ ಉದ್ಯಮಶೀಲರ ‘ವಾರ್ಸಿಟಿ ’
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications