ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ತಂತ್ರಜ್ಞಾನದ ಸಕಲವಸ್ತು ಭಂಡಾರ

By Staff
|
Google Oneindia Kannada News

Bangalore Palaceಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಗಾಲೋಟದಿಂದ ಬೆಳೆಯುತ್ತಿರುವ ನಗರ ಬೆಂಗಳೂರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತಾನು ಮಾಡಿರುವ ಸಾಧನೆಯನ್ನು ಜಗತ್ತಿಗೇ ತೋರಿಸುವ ಕಾಲ ಈಗ ಬಂದಿದೆ. ಏಷ್ಯಾ ಖಂಡದಲ್ಲಿಯೇ ಮಾಹಿತಿ ತಂತ್ರಜ್ಞಾನ ವಿಶ್ವದ ಬೃಹತ್‌ ಪ್ರದರ್ಶನಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತಿರುವ ಬೆಂಗಳೂರು ಐಟಿ ಡಾಟ್‌ಕಾಂ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ಅದೂ ರಾಜ್ಯೋತ್ಸವ ದಿನದಂದು ಆರಂಭಗೊಳ್ಳುತ್ತಿದೆ.

ನವೆಂಬರ್‌ 1ರಿಂದ 5ನೇ ತಾರೀಖಿನವರೆಗೆ ನಡೆಯುವ ಈ ಪ್ರದರ್ಶನಕ್ಕೆ ನವವಧುವಿನಂತೆ ಬೆಂಗಳೂರು ಅರಮನೆ ಆವರಣ ಸಜ್ಜುಗೊಂಡಿದೆ. ಈ ವಸ್ತು ಪ್ರದರ್ಶನದ ವಿಸ್ತೀರ್ಣ ಎಂಟು ಸಾವಿರ ಚದರ ಮೀಟರ್‌ನಷ್ಟಿದೆ. ಈ ವಿಸ್ತಾರ ಭೂ ಪ್ರದೇಶದಲ್ಲಿ 12 ಮಳಿಗೆಗಳಿದ್ದು, 376 ಕಂಪನಿಗಳು ಭಾಗವಹಿಸುತ್ತಿವೆ. ಅಮೆರಿಕಾ ಈ ಮೇಳದ ಪಾಲುದಾರಿಕಾ ರಾಷ್ಟ್ರವಾಗಿರುವುದು ಈ ಬಾರಿಯ ವಿಶೇಷ.

ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸುವುದೇ ಈ ಮೇಳದ ಉದ್ದೇಶ. ಗ್ರಾಮೀಣ ವಿದ್ಯಾರ್ಥಿಗಳೂ ಕೂಡ ಮಾಹಿತಿ ತಂತ್ರಜ್ಞಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕುರಿತ ರಸಪ್ರಶ್ನೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ಇಂಟರ್‌ನೆಟ್‌ ವಿಶ್ವದ ಬಗ್ಗೆ ಇಲ್ಲಿ ಚಿಂತನ - ಮಂಥನ ನಡೆಯಲಿದೆ.

ವಿದ್ಯಾರ್ಥಿಗಳಿಗಾಗಿಯೇ ವಿದ್ಯಾರ್ಥಿಗಳ ಇಂಟರ್‌ನೆಟ್‌ ಎಂಬ ಕಾರ್ಯಕ್ರಮವನ್ನು ಸಹ ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದು, ಇದು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತದೆ. ಈ ಮೇಳದಲ್ಲಿ ಸಿಂಗಾಪೂರ್‌, ಜಪಾನ್‌, ಸ್ವೀಡನ್‌, ಬೆಲ್ಜಿಯಂ, ಸ್ಕಾಟ್ಲೆಂಡ್‌ ರಾಷ್ಟ್ರಗಳ ನಿಯೋಗಗಳೂ ಭಾಗವಹಿಸುತ್ತಿವೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಮೇಳ ನಡೆಸಿ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದ ಬೆಂಗಳೂರು, ಈ ಮೇಳದಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಲಿದೆ. ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಇತ್ತೀಚಿನ ಅಮೆರಿಕಾ ಭೇಟಿ ಸಂದರ್ಭದಲ್ಲಿ ಭಾರತಕ್ಕೆ ಮತ್ತಷ್ಟು ಬೆಂಗಳೂರುಗಳ ಅಗತ್ಯವಿದೆ ಎಂದು ಹೇಳಿರುವುದು ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಗೆ ಹಿಡಿದ ಕನ್ನಡಿಯಾಗಿದೆ.

(ಇನ್‌ಫೊ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X