ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಮೋ ಸೇಪಿಯನ್ಸ್‌ ಭವಿತವ್ಯ ಎಷ್ಟು ಸರಳವಾಗಲಿದೆ?

By Staff
|
Google Oneindia Kannada News

ನಾಗರೀಕತೆ ಬೆಳೆಯುತ್ತಾ ಹೋದಂತೆ ತಂತ್ರಜ್ಞಾನದಲ್ಲೂ ಅಭಿವೃದ್ಧಿಯಾಯಿತು. ಅದು ಮಾಹಿತಿ ಕ್ಷೇತ್ರಕ್ಕೂ ಕಾಲಿಟ್ಟು, ಜನಜೀವನದಲ್ಲಿ ಹಾಸುಹೊಕ್ಕಾಯಿತು. ತಂತುಗಳ ಸಹಾಯದಿಂದ ನಡೆಯುತ್ತಿದ್ದ ಸಂವಹನೆ ಮತ್ತಷ್ಟು ಅಭಿವೃದ್ಧಿ ಹೊಂದಿ ಕಾರ್ಡ್‌ಲೆಸ್‌ ಜಗತ್ತು ಹುಟ್ಟಿಕೊಂಡಿದೆ. ಅಗೋಚರ ಜಾಲ ಎಲ್ಲರನ್ನೂ ಬಂಧಿಸಿಟ್ಟಿದೆ, ಹತ್ತಿರಕ್ಕೆ ತಂದಿದೆ. ಸರ್ಕಾರಗಳೂ ತಮ್ಮ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿ-ವೆ. ಇ- ಆಡಳಿತ ಈಗಾಗಲೇ ಎಷ್ಟೋ ಕ್ಷೇತ್ರಗಳಲ್ಲಿ ಹಳ-ತು.

ಅಪ್ಪ ಕುಂತಲ್ಲೇ ಚಾ ಸವಿಯುತ್ತಾ ವ್ಯಾಪಾರ ಮಾಡುತ್ತಿದ್ದರೆ, ಮಗ ಯಾವುದೋ ಆನ್‌ಲೈನ್‌ ಕೋರ್ಸ್‌ ಮಾಡುತ್ತಿದ್ದಾನೆ. ಅಮ್ಮ ಮಹಿಳಾ ಸಂಘಟನೆಗಳನ್ನೆಲ್ಲಾ ಒಂದು ಜಾಲದಡಿ ತರುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಫ್ಯಾಷನ್‌ ಡಿಸೈನರ್‌ ಆಗಿರುವ ಮಗಳು ಹೊಸ ವಿನ್ಯಾಸವನ್ನು ರೂಪಿಸುತ್ತಿದ್ದಾಳೆ. ಎಲ್ಲಾ ಕೆಲಸಗಳೂ ಬೆರಳುಗಳ ತುದಿಗಳಲ್ಲೇ ನಡೆಯುತ್ತಿವೆ!

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಯಾದಿಯಲ್ಲಿರುವ ಭಾರತ ತೀವ್ರ ಗತಿಯ ಮಾಹಿತಿ ಮತ್ತು ತಂತ್ರಜ್ಞಾನದ ಬದಲಾವಣೆಗೆ ಸ್ಪಂದಿಸುತ್ತಿದೆಯೇ? ನಮ್ಮ ದೇಶಕ್ಕೆ ಇದು ಬೇಕೆ? ಜನ ಈ ಬದಲಾವಣೆಗೆ ಯಾವ ರೀತಿಯಲ್ಲಿ ಸನ್ನದ್ಧರಾಗಬೇಕು? ಹೋಮೋ ಸೇಪಿಯನ್ಸ್‌ ಭವಿತವ್ಯ ಎಷ್ಟು ಸರಳವಾಗಲಿದೆ?....

ಈ ಎಲ್ಲಾ ಪ್ರಶ್ನೆಗಳಿಗೆ ನವಂಬರ್‌ 2 ಹಾಗೂ 3ರಂದು ಹೊಟೇಲ್‌ ಲೀ ಮೆರಿಡಿಯನ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಉತ್ತರ ಸಿಗಲಿದೆ. ಐಟಿ ನುರಿತರು, ಉದ್ಯಮಿಗಳು, ಸಂಶೋಧಕರು, ಕಾರ್ಪೊರೇಟ್‌ ಧುರೀಣರು ಈ ವಿಷಯಗಳ ಬಗೆಗೆ ಮಾತನಾಡಲಿದ್ದಾರೆ. ಸಮಾವೇಶ ವಿಪ್ರೋ ಹಾಗೂ ನಾರ್ಟೆಲ್‌ ನೆಟ್‌ವರ್ಕ್ಸ್‌ ಸಹಯೋಗದಲ್ಲಿ ನಡೆಯಲಿದೆ. ಮುಂದಿನ ಜನಾಂಗಕ್ಕೆ ತಂತ್ರಜ್ಞಾನದ ಕೊಡುಗೆ, ಹಾದಿ, ತಿರುಳು, ಬರಲಿರುವ ದಿನಗಳ ವ್ಯಾಪಾರದ ಸ್ವರೂಪ .... ಎಲ್ಲವುಗಳ ಪಕ್ಷಿನೋಟ ಸಮಾವೇಶದಲ್ಲಿ ಸಿಗಲಿದೆ.

( ಇನ್‌ಫೊ ವಾರ್ತೆ )

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X