ಹುಬ್ಬಳ್ಳಿಯ ಡಿಸ್ಕೋ ರಸ್ತೆಗೆ ರಾಜ್ಯೋತ್ಸವ ಪ್ರಶಸ್ತಿ !
ಹುಬ್ಬಳ್ಳಿ : ಕೆಲವೇ ವರ್ಷಗಳ ಹಿಂದೆ ಮಿಥುನ್ ಚಕ್ರವರ್ತಿ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಡಿಸ್ಕೋ ಡ್ಯಾನ್ಸ್‌ನಿಂದ ಭಾರಿ ಸುದ್ದಿ ಮಾಡಿದ್ದರು. ಆಗಂತೂ ಡಿಸ್ಕೋ ಡ್ಯಾನ್ಸರ್, ಡ್ಯಾನ್ಸ್ ಡ್ಯಾನ್ಸ್ ಮುಂತಾದ ಚಿತ್ರಗಳು ಒಂದರ ಹಿಂದೊಂದು ಯಶಸ್ಸು ಕಂಡವು. ಗೋವಿಂದ ಅಭಿನಯದ ಚಿತ್ರಗಳಲ್ಲೂ ಡಿಸ್ಕೋ ಡ್ಯಾನ್ಸ್ ಯುವಕರನ್ನು ಹುಚ್ಚೆಬ್ಬಿಸಿತ್ತು. ಕನ್ನಡದಲ್ಲೂ ಕಮ್ಮಿ ಏನಿಲ್ಲ ಎನ್ನುವಂತೆ ಚಂಡಿ ಚಾಮುಂಡಿ, ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರಗಳಲ್ಲಿ ಡಿಸ್ಕೋ ಡ್ಯಾನ್ಸ್ ಜನಪ್ರಿಯವಾಯಿತು.
ಬ್ರೇಕ್ ಡ್ಯಾನ್ಸ್ ಜಮಾನಾ ಆರಂಭವಾದ ಮೇಲೆ ಡಿಸ್ಕೋ ಡ್ಯಾನ್ಸ್ ಜನ ಮಾನಸದಿಂದ ಮರೆಯಾಗೇ ಹೋಗಿತ್ತು. ಆದರೆ, ಈಗ ಹುಬ್ಬಳ್ಳಿಯಲ್ಲಿ ಮತ್ತೆ ಡಿಸ್ಕೋ ಡ್ಯಾನ್ಸ್ ಜನಪ್ರಿಯವಾಗಿದೆ. ಸೋಮವಾರ ಇಲ್ಲಿನ ರಸ್ತೆಯಾಂದಕ್ಕೆ ಡಿಸ್ಕೋ ರಸ್ತೆ ಎಂದೇ ನಾಮಕರಣ ಮಾಡುವ ಕಾರ್ಯಕ್ರಮ ಇದೆ. ಆಶ್ಚರ್ಯವಾಯಿತೇ?
ಹುಬ್ಬಳ್ಳಿಯಲ್ಲಿ ಹದಗೆಟ್ಟು ಹೋಗಿರುವ ಕಾಟನ್ ಮಾರ್ಕೆಟ್ ಪ್ರಮುಖ ರಸ್ತೆಯಲ್ಲಿ ನೀವು ನಿಮ್ಮ ವಾಹನವೇರಿ ಒಮ್ಮೆ ಹೋಗಿ ಬಂದರೆ ನಿಮಗರಿವಿಲ್ಲದಂತೆಯೇ ನೀವು ಡಿಸ್ಕೋ ಡ್ಯಾನ್ಸ್ ಮಾಡುತ್ತೀರಿ. ಇದು ಬ್ರೇಕ್ ಡ್ಯಾನ್ಸನ್ನೂ ಮೀರಿಸುತ್ತದೆ. ಅಷ್ಟೇಕೆ ಇದನ್ನು ಬ್ರೇಕ್ ಫೇಲ್ಯೂರ್ ಡ್ಯಾನ್ಸ್ ಎಂದೂ ಕರೆಯಬಹುದು. ಹದಗೆಟ್ಟ ರಸ್ತೆಯ ಬಗ್ಗೆ ಪ್ರತಿಭಟಿಸಲು ಇಲ್ಲಿನ ಗಜಾನನ ಮಹಾ ಮಂಡಳ ಈ ಕೆಟ್ಟ ರಸ್ತೆಗೆ ಡಿಸ್ಕೋ ರಸ್ತೆ ಎಂದು ನಾಮಕರಣ ಮಾಡಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿಬಿಟ್ಟಿದೆ. ಆದಕ್ಕೇ ಈ ಕಾರ್ಯಕ್ರಮ.
ಸದಾ ಸಂಚಾರದ ಒತ್ತಡ ಇರುವ ಈ ಕಾಟನ್ ಮಾರ್ಕೆಟ್ ರಸ್ತೆ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದ್ದರೂ ಇತ್ತ ಗಮನ ಹರಿಸದ ಪಾಲಿಕೆಯ ಗಮನ ಸೆಳೆಯಲು ಹಾಗೂ ಜನಪ್ರತಿನಿಧಿಗಳ ನಿಸ್ಸೀಮ ನಿರ್ಲಕ್ಷ್ಯವನ್ನು ಜಗಜ್ಜಾಹೀರು ಮಾಡಲು ಮಹಾ ಮಂಡಳ ಕೈಗೊಂಡಿರುವ ಈ ವಿನೂತನ ಪ್ರತಿಭಟನೆಗಾದರೂ ಬೆಲೆ ಸಿಕ್ಕೀತೆ ಎಂಬುದನ್ನು ಕಾದು ನೋಡಬೇಕು.
ಮುಖಪುಟ / ಊರು ಕೇರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications