ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್‌: ಹೆಚ್ಚು ಶುಲ್ಕ ಪಡೆವಕಾಲೇಜುಗಳಿಗೆ ಸಿಇಟಿ ಘಟಕದ ಎಚ್ಚರಿಕೆ

By Staff
|
Google Oneindia Kannada News

ಬೆಂಗಳೂರು : ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಸರಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚು ಶುಲ್ಕ ತೆಗೆದುಕೊಳ್ಳದಂತೆ ಇಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸಿಇಟಿ ಘಟಕ ಎಚ್ಚರಿಕೆ ನೀಡಿದೆ.

ಈ ಕುರಿತು ಶುಕ್ರವಾರ ಹೊರಡಿಸಲಾದ ಸರಕಾರಿ ಆಜ್ಞೆಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದ್ದು, ಕಾಲೇಜುಗಳು ಈ ಸಾಲಿನಲ್ಲಿ ಪರಿಷ್ಕರಿಸಿ ನಿಗದಿ ಪಡಿಸಿದ ಶುಲ್ಕವನ್ನು ಕಳೆದ ವರ್ಷ ಕಾಲೇಜು ಸೇರಿಕೊಂಡ ವಿದ್ಯಾರ್ಥಿಗಳಿಂದಲೂ ವಸೂಲಿ ಮಾಡುತ್ತಿವೆ. ಸರಾಕರದ ಈ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಹೆಚ್ಚು ಶುಲ್ಕ ವಸೂಲಿ ಮಾಡಿದಲ್ಲಿ ಅದಕ್ಕೆ ಕಾಲೇಜು ಪ್ರಾಂಶುಪಾಲರು ಜವಾಬ್ದಾರರಾಗಿದ್ದು, ಅಂತಹ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಸಲಾಗಿದೆ.

ಶುಲ್ಕ ವ್ಯವಸ್ಥೆ : ಸರಕಾರಿ ಕಾಲೇಜುಗಳಲ್ಲಿ ಉಚಿತ ಸೀಟು ಪಡೆದಿರುವ ವಿದ್ಯಾರ್ಥಿಗೆ ಬೋಧನಾ ಶುಲ್ಕ-6,000 ರೂಪಾಯಿ, ಖಾಸಗಿ ಕಾಲೇಜಿನಲ್ಲಿ - 9,000 ರೂಪಾಯಿ. ಪೇಮೆಂಟ್‌ ಸೀಟಾದರೆ, ಒಟ್ಟು ಶುಲ್ಕ 44 ಸಾವಿರ ರೂಪಾಯಿ. ಎನ್‌ಆರ್‌ಐ ಸೀಟುಗಳಿಗೆ 5,000 ಯುಎಸ್‌ ಡಾಲರ್‌ಗಳು. ಇದರ ಜೊತೆಗೆ ಕ್ರೀಡೆ ಮತ್ತಿತರ ಹೆಚ್ಚುವರಿ ಶುಲ್ಕ 2, 590 ರೂಪಾಯಿಯಾಗುತ್ತದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X