ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಕೃಪಾಂಕ : ನಿರ್ಧಾರಕ್ಕೆ ಬರಲು ಪರದಾಡುತ್ತಿರುವ ಸರಕಾರ

By Staff
|
Google Oneindia Kannada News

*ಎಂ.ಕೆ. ಮಧು-ಸೂ--ದ-ನ

ಬೆಂಗ-ಳೂ-ರು : ಗ್ರಾಮೀ-ಣ ಅಭ್ಯ-ರ್ಥಿ-ಗ-ಳಿ-ಗೆ -ಸ-ರ್ಕಾ-ರಿ ನೌಕ-ರಿ-ಯ-ಲ್ಲಿ ಆದ್ಯ-ತೆ ಕ-ಲ್ಪಿ-ಸು-ವ ನಿರ್ಧಾ-ರ-ವ-ನ್ನು ಸರ್ಕಾ-ರ ಮುಂದೂ-ಡಿ-ರು-ವು-ದ-ರಿಂ-ದ, ಗ್ರಾಮೀ-ಣ ಅಭ್ಯ-ರ್ಥಿ-ಗ-ಳು ತ್ರಿಶಂ-ಕು-ಗ-ಳಾ-ಗಿ-ದ್ದಾ-ರೆ.

ಶಿಕ್ಷ-ಣ ಮತ್ತು ಉ-ದ್ಯೋ-ಗ-ದ-ಲ್ಲಿ ಪ್ರತಿ-ಶ-ತ 10 ಮೀಸ-ಲಾ-ತಿ ಕಲ್ಪಿ-ಸ-ಲು ಸರ್ಕಾ-ರ ಇತ್ತೀ-ಚೆ-ಗೆ ತೀ-ರ್ಮಾ-ನಿ--ಸಿ-ದ್ದ-ರೂ, ತನ್ನ ತೀರ್ಮಾ-ನ-ವ-ನ್ನು ಅನು-ಷ್ಠಾ-ನ-ಕ್ಕೆ ತರು-ವ-ಲ್ಲಿ ಗೊಂದ-ಲ-ದ-ಲ್ಲಿ ಬಿ-ದ್ದಿ-ದೆ. ಪ್ರ-ಸ್ತು-ತ ಅಧಿ-ವೇ-ಶ-ನ-ದ-ಲ್ಲಿ-ಯೇ ಗ್ರಾ-ಮೀ-ಣ ಅಭ್ಯ-ರ್ಥಿ-ಗ-ಳಿ-ಗೆ ಶೇ. 10 ಮೀಸ-ಲಾ--ತಿ ಕಲ್ಪಿಸು-ವ ವಿಧೇ-ಯ-ಕ-ವ-ನ್ನು ಮಂಡಿ-ಸ-ಲು ಸರ್ಕಾ-ರ ಉದ್ದೇ-ಶಿ-ಸಿ-ತ್ತು . ಹೊಸ ಪ--ದ್ಧತಿ-ಯ ಪ್ರಕಾ-ರ ಸಾಮಾ-ಜಿ-ಕ-ವಾ-ಗಿ ಹಾಗೂ ಆರ್ಥಿ-ಕ-ವಾ-ಗಿ -ಹಿಂ-ದು-ಳಿ-ದ ಎಲ್ಲಾ ವರ್ಗ-ಗ-ಳ ಗ್ರಾಮೀ-ಣ -ಅ-ಭ್ಯ-ರ್ಥಿ-ಗ-ಳಿ-ಗೆ ಮೀಸ-ಲಾ-ತಿ ಸೌಲ-ಭ್ಯವ-ನ್ನು ಕಲ್ಪಿ-ಸ-ಲಾ-ಗಿ-ದೆ.

ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮತ್ತು ಶಿಕ್ಷಣ ಸಂ-ಸ್ಥೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ. ಈ ಮೀಸಲಾತಿಗೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಹರು. ಆದರೆ ಈಗ ಗ್ರಾಮೀಣ ಪ್ರದೇಶದವರೆಂಬ ಅರ್ಹತೆಯಡಿಯಲ್ಲಿ ಅಭ್ಯರ್ಥಿಗಳು ಮೀಸಲಾತಿ ಪಡೆದರೆ ಅದು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ. ಈ ಹಿಂದೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ ನೀಡುವುದನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳೆರಡೂ, ಮೀಸಲಾತಿಯಾಳಗೆ ಮತ್ತೊಂದು ಮೀಸಲಾತಿ ನೀಡಿದಂತಾಗುತ್ತದೆ ಎಂದು ವಿರೋಧಿಸಿದ್ದವು. ನಂತರ, ಗ್ರಾಮೀಣ ಕೃಪಾಂಕದ ಕುರಿತು ಅಧ್ಯಯನ ಮಾಡುವಂತೆ ಸ-ರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ರಾಮಕೃಷ್ಣ ಆಯೋಗವು ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ 5ರ ಮೀಸಲಾತಿ ನೀಡುವ ಶಿಫಾರಸು ಮಾಡಿತ್ತು.

ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲು ಸರಕಾರ ಬದ್ಧವಾಗಿದೆ ಎಂದು ಗ್ರಾಮೀಣ ಪ್ರದೇಶದವರಿಗೆ ಮೀಸಲಾತಿ ನೀಡುವ ಕುರಿತು ವಿರೋಧ ಪಕ್ಷಗಳ ನಾಯಕರ ಜೊತೆ ಚರ್ಚಿಸಿದ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇ-ಗೌ-ಡ ಐಎಎನ್‌ಎಸ್‌ ಜೊತೆ ಮಾತನಾಡುತ್ತಾ ಹೇಳಿದರು. ಆದರೆ ವಿರೋಧ ಪಕ್ಷಗಳ ನಾಯಕರ ಜೊತೆಗಿನ ಮಾತುಕತೆಯಿಂದ ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗಲಿಲ್ಲ . 1992 ರವರೆಗೆ 20ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶವನ್ನು ಗ್ರಾಮೀಣ ಪ್ರದೇಶವೆಂದು ಗುರುತಿಸಲಾಗುತ್ತಿತ್ತು. ನಂತರ ಅದನ್ನು 50 ಸಾವಿರದ ಮಿತಿಗೇರಿಸಲಾಯಿತು. ಆದರೆ ಈಗ ಸರಕಾರವು ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು ಸಾಧ್ಯವಿಲ್ಲ ಎಂದು ಸಚಿವರು ಹೇಳುವುದರೊಂದಿಗೆ ಈ ಸಮಸ್ಯೆ ಇನ್ನೂ ತ್ರಿಶಂಕುವಿನಲ್ಲಿಯೇ ಉಳಿದಂತಾಗಿದೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X