Get Updates
Get notified of breaking news, exclusive insights, and must-see stories!

ಜೈವಿಕ ತಂತ್ರಜ್ಞಾನ ಮತ್ತು ಮಹಿ-ಳೆ : ಏನಂಥಾ ನಂಟು?

*ಮಹ್ಮದ್‌ ಶಫೀಕ್‌

ಹೈದರಾಬಾದ್‌ : ಮಹಿಳಾ ಸಾಹಿತಿಗಳ ಸಮಾವೇಶ, ದುಡಿಯುವ ಮಹಿಳೆಯರ ಸಭೆ ....ಜಾಗೃತ ಗೃಹಿಣಿಯರ ಮೇಳ ....ಹೀಗೆ ಮಹಿಳಾ ವೇದಿಕೆಗಳು ತಮ್ಮ ಹಕ್ಕು, ಶೋಷಣೆಗಳ ಬಗ್ಗೆ ಘೋಷಣೆ ಕೂಗುವುದು ಹೊಸದೇನಲ್ಲ. ಈಗ ಪ್ರಗತಿ ಪರ ದೇಶಗಳ ಮಹಿಳೆಯರೆಲ್ಲಾ ಸೇರಿಕೊಂಡು ಐದು ದಿನಗಳ ಅಂತರರಾಷ್ಟ್ರೀಯ ಸಮಾವೇಶವೊಂದನ್ನು ಸದ್ಯ-ದ-ಲ್ಲೇ ನ-ಡೆ-ಸ-ಲು ಸಜ್ಜಾ-ಗಿ-ದ್ದಾ-ರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಮತ್ತು ಮಹಿಳೆಯರಿಗೆ ದೊರಕಬಹುದಾದ ವೈಜ್ಞಾನಿಕ ಸೌಲಭ್ಯಗಳ ಕುರಿತು ಚರ್ಚಿಸಲಿದ್ದಾರೆ.

‘ಮಹಿಳೆ : ಜೈವಿಕ ತಂತ್ರಜ್ಞಾನ, ಪರಿಸರ ಮತ್ತು ಅಸಂಪ್ರದಾಯಿಕ ಶಕ್ತಿ ’ ಸಮಾವೇಶವನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಅಧ್ಯಯನ ಪರಿಷತ್‌, ತೃತೀಯ ಜಗತ್ತಿನ ರಾಷ್ಟ್ರಗಳ ಮಹಿಳಾ ವಿಜ್ಞಾನಿಗಳ ಸಂಘಟನೆ (TWOWS) ಮತ್ತು ತೃತೀಯ ಜಗತ್ತಿನ ವಿಜ್ಞಾನ ಅಕಾಡೆಮಿಗಳು ಜಂಟಿಯಾಗಿ ಆಯೋಜಿಸಿದೆ.

ಕ್ಯಾಮರೂನ್‌ , ಬಾಂಗ್ಲಾ ದೇಶ್‌, ನೇಪಾಳ, ಫಿಲಿಫೈನ್ಸ್‌ , ದಕ್ಷಿಣ ಆಫ್ರಿಕಾ ಮತ್ತು ಮಲೇಶಿಯಾಗಳ ಸುಮಾರು 150 ಮಹಿಳಾ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜೈವಿಕ ತಂತ್ರಜ್ಞಾನ ಮತ್ತು ಅಸಾಂಪ್ರದಾಯಿಕ ಶಕ್ತಿ ವಿಷಯಗಳು ಪುರುಷರಿಗಿಂತ ಹೆಚ್ಚು ಮಹಿಳೆಯರಿಗೇ ಸಂಬಂಧಿಸಿರುವುದರಿಂದ ಈ ವಿಷಯಗಳನ್ನೇ ಸಮಾವೇಶದಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದು (TWOWS)ನ ಏಷಿಯಾ ಫೆಸಿಫಿಕ್‌ ವಲಯದ ಉಪಾಧ್ಯಕ್ಷೆ ವಿಜ್ಞಾನಿ ಕೈಸರ್‌ ಜಮಿಲಾ ಹೇಳುತ್ತಾರೆ. ಅವರ ಮಾತಿನಲ್ಲೇ ಹೇಳುವುದಾದರೆ, ಜೈವಿಕ ತಂತ್ರಜ್ಞಾನ , ಪರಿಸರ ಮತ್ತು ಶಕ್ತಿ , ಮಹಿಳೆಯ ಬದುಕಿಗೆ ತುಂಬಾ ಹತ್ತಿರವಾಗಿ-ರು-ವು-ದ-ರಿಂ-ದ ಸಮಾವೇಶದ ಚರ್ಚಾ ವಿಷಯವನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.

ಜೈವಿಕ ತಂತ್ರಜ್ಞಾನದ ಮೂಲಕ ಮಹಿಳೆ ಆರ್ಥಿಕ ಮತ್ತು ಪರಿಸರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲಳು. ಅಲ್ಲದೆ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯಗಳಿಗೆ ಮಹಿಳೆಯು ಹೊರತಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಪ್ರತಿಪಾದಿಸಲಾಗುವುದು. ಯಾಕೆಂದರೆ ಮಹಿಳೆಯರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸುಕೊಳ್ಳುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಕಾಲೇಜಿನಲ್ಲಿ ಕಲಿಯುವ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯ, ಪ್ರಾಯೋಗಿಕ ಬದುಕಿನಲ್ಲಿ ಉಪಯೋಗಕ್ಕೆ ಬರುವುದು ಕಡಿಮೆ ಎಂದು ಜಮೀಲಾ ಹೇಳುತ್ತಾರೆ.

ಸುಮಾರು 50 ಕ್ಕೂ ಹೆಚ್ಚು ಮಂದಿ ಮಹಿಳಾ ವಿಜ್ಞಾನಿಗಳು ಸಮಾವೇಶದಲ್ಲಿ ಪರಿಸರ ಮಾಲಿನ್ಯ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಜೀವ ರಸಾಯನಕ್ಕೆ ಸಂಬಂಧಿಸಿದ ಇನ್ನಿತರ ಅನೇಕ ವಿಷಯಗಳ ಬಗ್ಗೆ ತಮ್ಮ ಅಧ್ಯಯನ ವರದಿ ಮಂಡಿಸಲಿದ್ದಾರೆ. ಲಕ್ನೋ, ಭುವನೇಶ್ವರ, ಗೋವಾ ಮತ್ತು ಒಸ್ಮಾನಿಯಾ ವಿಶ್ವವಿದ್ಯಾಲಯದ ವೈಜ್ಞಾನಿಕ ಅಧ್ಯಯನ ಸಂಸ್ಥೆಗಳ ಪ್ರಮುಖರೂ ವರದಿ ಮಂಡಿಸುತ್ತಾರೆ.

ಪ್ರಯೋಗಾಲಯದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ನೌಕರಿ ಮಾಡುವುದರಿಂದ ಅವರ ಜ್ಞಾನವೃದ್ಧಿಗೆ ಈ ಸಮಾವೇಶ ಸಹಕರಿಸುತ್ತದೆ ಎಂದು ಮಲಯಾ ವಿವಿಯ ರಸಾಯನ ಶಾಸ್ತ್ರ ವಿಭಾಗದ ನೂರ್‌ ಸಾಧಾ ಹೇಳುತ್ತಾರೆ. ಫಿಲಿಫೈನ್ಸ್‌ ವಿವಿಯ ಲರ್ಮಾ ಮೋರಾನ್‌ ಹೇಳುವುದು, ಈ ಕ್ಷೇತ್ರದಲ್ಲಿ ಪುರುಷರಷ್ಟೇ ಅವಕಾಶಗಳನ್ನು ಮಹಿಳೆಯರೂ ಬಳಸಿಕೊಳ್ಳಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಯುವ, ಮಹಿಳಾ ವಿಜ್ಞಾನಿಗಳ ಪ್ರಥಮ ಅಂತರ ರಾಷ್ಟ್ರೀಯ ಸಮಾವೇಶದ ಆತಿಥ್ಯವನ್ನು (TWOWS)ನ ಹೈದರಾಬಾದ್‌ ಘಟಕ ವಹಿಸಿದೆ.

(ಐಎ-ಎ-ನ್‌-ಎ-ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+