ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವರ್ಣ ಜಯಂ-ತಿ ಸಂಭ್ರ-ಮ-ದ-ಲ್ಲಿ ಸಿಎಫ್‌ಟಿಆರ್‌ಐ

By Staff
|
Google Oneindia Kannada News

*ವರ-ದ-ರಾ-ಜ ಬಾಣಾ-ವ-ರ

CFTRIಮೈಸೂರಿನಲ್ಲಿ ಇರುವ ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಅಕ್ಟೋಬರ್‌ 21ರಂದು ಸ್ವರ್ಣ ಜಯಂತಿ ಆಚರಿಸಲಿದೆ . ಈ ಸಂಸ್ಥೆ ಪ್ರಾರಂಭವಾಗಿದ್ದು 1950ರ ಅಕ್ಟೋಬರ್‌ 21ರಂದು. ಇದು ದೆಹಲಿಯ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಪರಿಷತ್‌ನ ಅಂಗ ಸಂಸ್ಥೆ.

ಆಹಾರ ವಿಜ್ಞಾನ, ಆಹಾರ ತಂತ್ರಜ್ಞಾನ, ಹಾಗೂ ಆಹಾರ ಇಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ 50 ವರ್ಷಗಳಿಂದ ಸತತವಾಗಿ ನಡೆಸಿರುವ ಸಂಶೋಧನೆಗಳಿಂದ ಸಿಎ-ಫ್‌-ಟಿ-ಆ-ರ್‌-ಐ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.

ಮೈಸೂರನ್ನು ಆಳಿದ ಮಹಾರಾಜರ ಚೆಲುವಾಂಬ ವಿಲಾಸ ಅರಮನೆಯಲ್ಲಿ ಈ ಸಂಸ್ಥೆ ಇದೆ. 1948ರ ಡಿಸೆಂಬರ್‌ 29ರಂದು ಪ್ರಧಾನಿಯಾಗಿದ್ದ ನೆಹರು, ರಾಜರಿಂದ ಈ ಕಟ್ಟಡವನ್ನು ಸ್ವೀಕರಿಸಿದರು. ಡಾ. ವಿ. ಸುಬ್ರಹ್ಮಣ್ಯನ್‌ ಸ್ಥಾಪಕ ನಿರ್ದೇಶಕರು. ಜಯಚಾಮರಾಜೇಂದ್ರ ಒಡೆಯರ್‌ ಅವರು ಸಂಸ್ಥೆಯ ಪ್ರಾರಂಭೋತ್ಸವ ನೆರವೇರಿಸಿದರು.

ಪ್ರಾರಂಭದಲ್ಲಿ 55 ವೈಜ್ಞಾನಿಕ, ಆಡಳಿತ ಸಿಬ್ಬಂದಿ ಇದ್ದರು. ಪ್ರೊಟೀನು, ಶಿಶು ಆಹಾರ, ಹಣ್ಣು ತರಕಾರಿಗಳ ಸಂರಕ್ಷಣೆ ಸಾಂಬಾರ ಪದಾರ್ಥ, ಸಸ್ಯ ಜನ್ಯ ಪ್ರೊಟೀನುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿತ್ತು. ಮೊದಲು ಚೆಲುವಾಂಬ ಅರಮನೆ ಕಟ್ಟಡದಲ್ಲೇ ಎಲ್ಲಾ ಕಚೇರಿಗಳಿದ್ದವು. ನಂತರ ಇದಕ್ಕೆ ಧಕ್ಕೆಯಾಗದಂತೆ ಸುತ್ತಲೂ ಕಟ್ಟಡಗಳನ್ನು ನಿರ್ಮಿಸಲಾಯಿತು. ಹಂತ ಹಂತವಾಗಿ ನವೀನ ಉಪಕರಣಗಳು, ಸಿಬ್ಬಂದಿ ಹೆಚ್ಚಿದವು. ಈಗ 712 ಮಂದಿ ಸಿಬ್ಬಂದಿ ಇದ್ದಾರೆ. ದೇಶದ ಆರು ಕಡೆ ಪ್ರಾಂತೀಯ ಕಚೇರಿಗಳಿವೆ. ಬೆಂಗಳೂರಿನಲ್ಲಿ ಸಂಪರ್ಕ ಕಚೇರಿ ಸಂಸ್ಥೆಯು ಪ್ರಾರಂಭದಿಂದಲೇ ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆ ಒಡನಾಟ ಹೊಂದಿದೆ. ಕೊಲಂಬೋ ಯೋಜನೆ, ಸಿಎಫ್‌ಟಿಆರ್‌ಐ - ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧನಾ ಕಾರ್ಯಕ್ರಮಗಳು, ಆಹಾರ ಮತ್ತು ಕೃಷಿ ಸಂಘಟನೆಗಳು ಪ್ರಮುಖವಾದವು.

FAO, NIH, ಎಸ್ಕಾಪ್‌, ಯುನಿಸೆಫ್‌, ಇಂಡೋ ಆಸ್ಟ್ಟ್ರೇಲಿಯಾ, WHO, ವಿಶ್ವ ಸಂಸ್ಥೆಯ ವಿಶ್ವ ವಿದ್ಯಾಲಯ, ಇಂಡೋ ಸ್ವೀಡನ್‌ ಸಹಕಾರ, ಇಂಡೋ- ಬ್ರಿಟನ್‌, ಇಂಡೋ ಫ್ರೆಂಚ್‌, ಇಂಡೋ ಕೊರಿಯಾ , ಇಂಡೋ- ಡೇನಿಷ್‌, ಇಂಡೋ- ಸ್ವಿಟ್ಜರ್‌ಲ್ಯಾಂಡ್‌, ಸಹಯೋಗಗಳು ಇವೆ.

ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎಸ್ಸಿ (ಫುಡ್‌ಡೆಕ್‌) ಪದವಿ ನೀಡುವ ಅಂತರ ರಾಷ್ಟ್ರೀಯ ತರಬೇತಿ ಕೇಂದ್ರ ಇದೆ. ಎಂ. ಎಸ್ಸಿ. ಫುಡ್‌ ಸೈನ್ಸ್‌ನಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ವಿಶ್ವದ 50 ದೇಶಗಳ ಸಿಬ್ಬಂದಿ ವಿಜ್ಞಾನಿಗಳು, ತಂತ್ರಜ್ಞರು ತರಬೇತಿ ಪಡೆದಿದ್ದಾರೆ.

ಸಿಎಫ್‌ಟಿಆರ್‌ಐ ಜಪಾನಿನ ಅಂತರರಾಷ್ಟ್ರೀಯ ವಿಶ್ವ ವಿದ್ಯಾಲಯಗಳ(ಯುಎನ್‌ಯು) ಸಹಸಂಸ್ಥೆ. 30 ದೇಶಗಳ 116 ಮಂದಿ ಇಲ್ಲಿ ತರಬೇತಿ ಪಡೆದಿದ್ದಾರೆ.

ಸಿಎಫ್‌ಟಿಆರ್‌ಐ ಕೈಗಾರಿಕೆಗಳನ್ನು ಹೆಚ್ಚು ತಲುಪುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಶಿಶು ಆಹಾರ, ಪೂರಕ ಶಕ್ತಿ, ಆಹಾರ, ಸಾಂಬಾರ ಉತ್ಪನ್ನಗಳು, ಇನ್‌ಸ್ಟಂಟ್‌ ಆಹಾರ ಮಿಶ್ರಣಗಳು, ಸಂಸ್ಕರಿತ ಆಹಾರ ಸಂಸ್ಥೆಗಳನ್ನು ಸೃಷ್ಟಿಸಿದೆ. 325ಕ್ಕೂ ಹೆಚ್ಚು ತಂತ್ರವಿಧಿಗಳನ್ನು ಅಳವಡಿಸಿಕೊಳ್ಳಲಾಗಿದೆ.

ಕಿಣ್ವಗಳ ಸ್ಥಿರೀಕರಣ, ಕಾಳುಗಳಿಂದ ಪ್ರೊಟೀನ್‌ ಸಾರ ಉತ್ಪತ್ತಿ, ಆಹಾರ ಪದಾರ್ಥಗಳ ಒಟ್ಟಾರೆ ಅರಿವು ಹೆಚ್ಚಿಸುವಲ್ಲಿ ನಡೆದಿರುವ ಸಂಶೋಧನೆಗಳು ಮಹತ್ತರ ಕೊಡುಗೆ ನೀಡಿದೆ. ಆಹಾರ ಗುಣಮಟ್ಟದ ಮತ್ತೊಂದು ಹೆಸರೇ ಸಿಎಫ್‌ಟಿಆರ್‌ಐ.

ಇಂದು ಸಿಎಫ್‌ಟಿಆರ್‌ಐ ಬಹು ವಿಷ-ಯ ಅಧ್ಯಯನ ಮಾರ್ಗ ಅನುಸರಿಸುವ ವಿಶಿಷ್ಟ ಆಹಾರ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆದಿದೆ. 17 ಸಂಶೋಧನಾ ವಿಭಾಗಗಳಿವೆ. ಲಾಯ್ಡ್ಸ್‌ ರಿಜಿಸ್ಟರ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸಂಸ್ಥೆ ISO-9001 ಮಾನ್ಯತಾ ಪತ್ರ ನೀಡಿದೆ. ಈಗಿನ ನಿರ್ದೇಶಕರು ಕನ್ನಡಿಗರೇ ಆದ ಡಾ. ಇ. ವಿ. ಪ್ರಕಾಶ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X