ಆಂಧ್ರದಿಂದ ಸಿಹಿಸುದ್ದಿ, ಬೆಂಗಳೂರಿನಲ್ಲಿ ಚುಮುಚುಮು ಮಳೆ
ಬೆಂಗಳೂರು : ನೆರೆಯ ಆಂಧ್ರದಿಂದ ಇದ್ದುದರಲ್ಲಿ ಸಂತಸಪಡುವ ಸುದ್ದಿ ಬಂದಿದೆ. ಅದು ರಾಜ್ಯದ ತೀರಪ್ರದೇಶಗಳನ್ನು ಅಪ್ಪಳಿಸಲಿದ್ದ ಚಂಡಮಾರುತ ದುರ್ಬಲಗೊಂಡಿದೆ ಎಂಬ ಸಮಾಚಾರವನ್ನು ಹೊತ್ತು ತಂದಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಎಂದು ಹೇಳಲಾಗಿದ್ದ ಚಂಡಮಾರುತದ ವೇಗ 40 ಕಿಲೋಮೀಟರ್ಗಿಳಿದಿದೆ.
ಇತ್ತ ರಾಜ್ಯಾದ್ಯಂತ ಮುಂಗಾರು ದುರ್ಬಲಗೊಂಡಿದೆ. ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಸಿರಗುಪ್ಪದಲ್ಲಿ 2 ಸೆಂಟಿಮೀಟರ್, ಸುಬ್ರಹ್ಮಣ್ಯ, ಆಲಮಟ್ಟಿಗಳಲ್ಲಿ ತಲಾ 1 ಸೆಂಟಿಮೀಟರ್ ಮಳೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಉಶ್ಣಾಂಶದಲ್ಲಿ ಬದಲಾವಣೆ ಕಂಡುಬಂದಿದೆ. ಉಳಿದಂತೆ ತೀರಪ್ರದೇಶದ ಜಿಲ್ಲೆಗಳು ಮತ್ತು ಒಳನಾಡಿನ ಪ್ರದೇಶಗಳಲ್ಲಿ ಉಷ್ಣಾಂಶ ಗಮನಾರ್ಹ ಪ್ರಮಾಣದಲ್ಲಿ ಬದಲಾಗಿಲ್ಲ.
ಗುಲ್ಬರ್ಗಾದಲ್ಲಿ ಗರಿಷ್ಠ 31. 5 ಡಿಗ್ರಿ ಸೆಲಿಸಿಯಸ್ ಮೈಸೂರಿನಲ್ಲಿ ಕನಿಷ್ಠ 21 ಡಿಗ್ರಿ ಸೆಲಿಸಿಯಸ್ ಉಷ್ಣಾಂಶ ದಾಖಲಾಗಿದೆ. ಶನಿವಾರ ಬೆಳಗಿವವರೆಗಿನ ಹವಾ ಮನ್ಸೂಚನೆಯಂತೆ ಒಳನಾಡು ಮತ್ತು ತೀರಪ್ರದೇಶದ ಕೆಲವು ಕಡೆ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಮತ್ತು ದಕ್ಷಿಣ ಒಳನಾಡು ಹಾಗೂ ತೀರಪ್ರದೇಶದ ಕೆಲವು ಸ್ಥಳಗಳಲ್ಲಿ ಹಗುರ ಇಲ್ಲವೇ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಿನ ಸುತ್ತಮುತ್ತ ಮೊಡ ಮುಸುಕಿದ ವಾತಾವರಣವಿರಲಿದ್ದು ಸಂಜೆ ವೇಳೆ ಮಳೆ ಬರುವ ನಿರೀಕ್ಷೆ ಇದೆ. ಗುರುವಾರ ಸಂಜೆ ಚುಮುಚುಮು ಮಳೆ ಬಂದಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications