ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ಯುಗದತ್ತ ಮಂಗಳ ಗಂಗೋತ್ರಿ

By Staff
|
Google Oneindia Kannada News

ಮಂಗಳೂರು : ಮಂಗಳ ಗಂಗೋತ್ರಿಯಲ್ಲಿ ಅಕ್ಟೋಬರ್‌ 16ರಂದು ಎರಡು ಹೊಸ ಕೋರ್ಸುಗಳು ಉದ್ಘಾಟನೆಗೊಂಡ ಸಂದರ್ಭದಲ್ಲಿ ಕಂಪ್ಯೂಟರ್‌ ಸಾಯನ್ಸ್‌ ಮತ್ತು ಮೆಟೀರಿಯಲ್‌ ಸಾಯನ್ಸ್‌ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಜಯಗೋಪಾಲ್‌ ಉಚ್ಚಿಲ ತಮ್ಮ ಭಾಷಣದಲ್ಲಿ ಕೋರ್ಸಿನ ವಿವರಗಳನ್ನು ವಿವರಿಸಿದರು. ಭಾಷಣದ ಮುಖ್ಯಾಂಶಗಳು ಇಲ್ಲಿವೆ.

ಇಪ್ಪತ್ತೊಂದನೇ ಶತಮಾನದ ಪ್ರಥಮ ನೋಬೆಲ್‌ ಪ್ರಶಸ್ತಿ ಪಡೆದ ಭೌತಶಾಸ್ತ್ರದ ವಿಜ್ಞಾನಿಗಳು ಅಧ್ಯಯನ ಮಾಡಿ ಸಾಧಿಸಿರುವುದು ಕಾಂಪ್ಯಾಕ್ಟ್‌ ಡಿಸ್ಕ್‌, ಮೊಬೈಲ್‌ ಫೋನ್‌ ಮತ್ತು ಕಂಪ್ಯೂಟರ್‌ ಕ್ಷೇತ್ರಗಳಲ್ಲಿ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ವಿಷಯಗಳು ಪ್ರಾಥಮಿಕ ಹಂತದಲ್ಲೇ ಅಗತ್ಯವಾಗಿವೆ. ಸಾಫ್ಟ್‌ ವೇರ್‌ ಕ್ಷೇತ್ರದ ಕೇಂದ್ರ ಬಿಂದುವಾಗಿರುವ ಭಾರತದಲ್ಲಿ ವಿದ್ಯಾರ್ಥಿಗಳನ್ನು ಮಾಹಿತಿ ತಂತ್ರಜ್ಞಾನ ಪರಿಣತರನ್ನಾಗಿ ರೂಪಿಸುವ ದೃಷ್ಟಿಯಿಂದ ಅ. 16 ರಂದು ಮಂಗಳೂರು ವಿಶ್ವ ವಿದ್ಯಾಲಯ ಎರಡು ಹೊಸ ಕೋರ್ಸುಗಳನ್ನು ಆರಂಭಿಸುತ್ತಿದೆ.

ಕಂಪ್ಯೂಟರ್‌ ಸಾಯನ್ಸ್‌ ಮತ್ತು ಕಂಪ್ಯೂಟರ್‌ ಸಾಫ್ಟ್‌ ವೇರ್‌ನಲ್ಲಿ ಎಂ. ಎಸ್ಸಿ ಪದವಿ , ಕಂಪ್ಯೂಟರ್‌ ಆ್ಯಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ(ಎಂಸಿಎ) ಕಲಿಯುವ ಅವಕಾಶವನ್ನು ವಿವಿಯು ಈಗಾಗಲೇ ವಿದ್ಯಾರ್ಥಿಗಳಿಗೆ ಕ-ಲ್ಪಿಸಿ-ದೆ. ಈ ಸಾಲಿಗೆ ಸೇರ್ಪಡೆಯಾಗಿರುವ ಹೊಸ ವಿಷಯಗಳೆಂದರೆ, ಇನ್ಫರ್‌ಮೇಷನ್‌ ಸಿಸ್ಟಮ್ಸ್‌ ನಲ್ಲಿ ಎಂ ಎಸ್ಸಿ ಮತ್ತು ಜಿಯೋ ಇನ್ಫರ್‌ಮ್ಯಾಟಿಕ್ಸ್‌ನಲ್ಲಿ ಎಂ. ಎಸ್‌. ಪದವಿ ಅಧ್ಯಯನ . ಸಾಂಪ್ರದಾಯಿಕ ವಿಷಯಗಳಾದ ಭೌತಶಾಸ್ತ್ರ , ಗಣಿತ, ಮೆಟೀರಿಯಲ್‌ ಸಾಯನ್ಸ್‌, ಇಲೆಕ್ಟ್ರಾನಿಕ್ಸ್‌ ಮತ್ತು ಸ್ಟ್ಯಾಟಿಸ್ಟಿಕ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿ ಅವಕಾಶ ಈಗಾಗಲೇ ಇದೆ. ಕಂಪ್ಯೂಟರ್‌ಗೆ ಸಂಬಂಧಿಸಿದ ವಿಷಯಗಳೆಲ್ಲವೂ ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗಿರುವುದರಿಂದ ಮಂಗಳೂರು ವಿಶ್ವ ವಿದ್ಯಾಲಯ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಮಾಹಿತಿ ತಂತ್ರಜ್ಞಾನ ಪರಿಣತರು ವಿದೇಶಗಳಲ್ಲಿ ಗ್ರೀನ್‌ಕಾರ್ಡ್‌ ಪಡೆಯಬೇಕಿದ್ದರೆ, ಮಾಹಿತಿ ತಂತ್ರಜ್ಞಾನ ಅಧ್ಯಯನದ ಸರ್ಟಿಫಿಕೇಟ್‌ ಇರು-ವು-ದು ಅಗ-ತ್ಯ. ಆದ್ದರಿಂದ, ಕರ್ನಾಟಕದಲ್ಲಿ ಐಟಿ ವಿಷಯದಲ್ಲಿ ಪ್ರಮಾಣ ಪತ್ರ ನೀಡುವ ಮೊದಲ ವಿಶ್ವವಿದ್ಯಾಲಯ ಇದಾಗಲಿದೆ.

ವಿದ್ಯಾರ್ಥಿಗಳು ಒಂದು ವರ್ಷ ವಿವಿಯಾಳಗೆ ಅಧ್ಯಯನ ಮಾಡಬೇಕು, ಮತ್ತೊಂದು ವರ್ಷ ಯಾವುದಾದರೂ ಮಾಹಿತಿ ತಂತ್ರಜ್ಞಾನ ಕೈಗಾರಿಕೆಯಲ್ಲಿ ತರಬೇತಿ ಪಡೆಯಬೇಕು. ಈ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಶೇ 90ರಷ್ಟು ವಿದ್ಯಾರ್ಥಿಗಳು ಸಾಫ್ಟ್‌ ವೇರ್‌ ಕ್ಷೇತ್ರದಲ್ಲಿ ಉದ್ಯೋಗಿಗಳಾಗುವುದರಲ್ಲಿ ಸಂಶಯವಿಲ್ಲ. ಕಂಪ್ಯೂಟರ್‌ ತಂತ್ರಜ್ಞಾನ ಮತ್ತು ಸಿಸ್ಟಂ ಆಡ್ಮಿನಿಸ್ಟ್ರೇಷನ್‌ ವಿಷಯಗಳನ್ನು ಅಧ್ಯಯನ ಮಾಡಿರುವವರಿಗೆ ಉದ್ಯೋಗವಕಾಶ ಸಾಕಷ್ಟಿದೆ. ಇದೇ ಮುಂದಾಲೋಚನೆಯಿಂದ ಹೊಸ ಕೋರ್ಸುಗಳ ಪಾಠ ಪಠ್ಯ ತಯಾರಿಕೆಗೆ ವಿವಿಯು, ವಿಪ್ರೋ, ಡಿಜಿಟಲ್‌ ಮತ್ತು ಟೆಕ್ಸಾಸ್‌ನ ಐಟಿ ಪರಿಣತರ ಸಮಿತಿಯಾಂದನ್ನು ಎಲ್‌. ಎಂ. ಪಟ್ನಾಯಿಕ್‌ ನೇತೃತ್ವದಲ್ಲಿ ರಚಿಸಲಾಗಿದೆ. 1992ರಲ್ಲಿ ವಿಪ್ರೋ, ಟಾಟಾ ಎಲೆಕ್ಸಿ ಮತ್ತು ಡಿಜಿಟಲ್‌ ಸಂಸ್ಥೆಗಳು ಬೆಂಗಳೂರಿನ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದ ಮೂಲಕ ಹೊಸ ಕೋರ್ಸುಗಳು ಹೇಗಿರಬೇಕು ಎಂದು ಚರ್ಚಿಸಲಾಗಿದೆ. ಈ ಕೋರ್ಸುಗಳನ್ನು ಮುಗಿಸಿ ಬರುವ ವಿದ್ಯಾರ್ಥಿಗಳು ನೇರವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಈ ವಿಷಯಗಳ ಪಾಠ ಪಠ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದುದೇ ಆಗಿರುತ್ತದೆ.

ಒಟ್ಟಿನಲ್ಲಿ ಈ ಕೋರ್ಸುಗಳನ್ನು ಐಟಿ ಕ್ಷೇತ್ರದಲ್ಲಿರುವ ಅಗತ್ಯಗಳನ್ನು ಗಮನಿಸಿಕೊಂಡು ಐಟಿ ಪರಿಣತರ ಸಲಹೆಯಾಂದಿಗೆ ನಿರ್ಮಿಸಲಾಗಿದೆ.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X