ಭಾರತ ಹಾಕಿ ತಂಡಕ್ಕೆ ವಿದೇಶೀ ಕೋಚ್ ಬೇಕೆ?
ಚೆನ್ನೈ : ಭಾರತ ಹಾಕಿ ತಂಡದ ಮಾಜಿ ಫಾರ್ವರ್ಡ್ ಆಟಗಾರ ಮುಕೇಶ್ ಕುಮಾರ್, ನಮ್ಮ ಹಾಕಿ ತಂಡಕ್ಕೆ ವಿದೇಶೀ ನುರಿತರು ತರಬೇತಿ ನೀಡಬೇಕು ಎಂದು ಬಲವಾಗಿ ಒತ್ತಾಯಿಸಿದ್ದು, ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಒಲಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲದ್ದೇ ಈ ಸೊಲ್ಲಿಗೆ ಕಾರಣ.
ಮುಕೇಶ್ ಕುಮಾರ್ ಒತ್ತಾಯಕ್ಕೆ ಕೆಲವು ಮಾಜಿಗಳು ಬೆಂಬಲ ಸೂಚಿಸಿದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಿಶ್ರ ಪ್ರತಿಕ್ರಿಯೆಗಳ ಸಾರಾಂಶ ಇಲ್ಲಿದೆ....
ಮುಕೇಶ್ ಮಾತಿಗೆ ತಂಡದ ಈಗಿನ ಕೋಚ್ ವಿ. ಭಾಸ್ಕರನ್ ಏನೂ ಹೇಳಲು ಇಚ್ಛಿಸುವುದಿಲ್ಲ. ಭಾರತ ಹಾಕಿ ತಂಡದ ದಕ್ಷಿಣ ಭಾರತದ ಮೊದಲ ನಾಯಕ ವಿ.ಜೆ.ಫಿಲಿಪ್, ಮಾಜಿ ಗೋಲ್ ಕೀಪರ್ ಹಾಗೂ ಪ್ರಸ್ತುತ ಎಸ್‌ಎಐ ತಂಡದ ಕೋಚ್ ಚಾರ್ಲ್ಸ್ ಕಾರ್ನೆಲಿಯಸ್ ಮುಕೇಶ್ ಮಾತನ್ನು ಖಂಡಾತುಂಡಾಗಿ ವಿರೋಧಿಸುತ್ತಾರೆ.
ನಮ್ಮಲ್ಲೇ ನುರಿತ ಕೋಚ್‌ಗಳಿದ್ದಾರೆ. ಅನುಭವಿ ಆಟಗಾರರಷ್ಟೇ ಅಲ್ಲದೆ, ಎನ್‌ಐಎಸ್‌ನಿಂದ ತೇರ್ಗಡೆಯಾಗಿ ಬರುವ ವೃತ್ತಿಪರರೂ ಇದ್ದಾರೆ. ಅವರಿಗೆಲ್ಲಾ ಜವಾಬ್ದಾರಿ ನಿಗದಿಪಡಿಸಿ, ಸರಿಯಾದ ರೀತಿಯಲ್ಲಿ ದುಡಿಸಿಕೊಳ್ಳಬೇಕಷ್ಟೆ. ವಿದೇಶೀ ತರಬೇತುದಾರ ಬೇಕಿಲ್ಲ ಎನ್ನುತ್ತಾರೆ 1975ರಲ್ಲಿ ವಿಶ್ವ ಕಪ್ ಗೆದ್ದ ಭಾರತ ಹಾಕಿ ತಂಡದ ಆಟಗಾರ ಫಿಲಿಪ್ಸ್.
ಮುಕೇಶ್ ಹೇಳುತ್ತಿರುವುದು ಸರಿ ಎನ್ನುತ್ತಾರೆ ಮಾಜಿ ಆಟಗಾರರಾದ ಮುನೀರ್ ಸೇಟ್ ಹಾಗೂ ಪಿ.ಕೃಷ್ಣಮೂರ್ತಿ. 1968 ಹಾಗೂ 72ರ ಒಲಂಪಿಕ್ಸ್ ಕಂಚು ಗೆದ್ದ ತಂಡದಲ್ಲಿದ್ದ ಕೃಷ್ಣಮೂರ್ತಿ ಹೀಗೆನ್ನುತ್ತಾರೆ- ನಾವಾಡುತ್ತಿದ್ದ ಕಾಲವೇ ಬೇರೆ. ಈ ಕಾಲವೇ ಬೇರೆ. ಈಗ ಆಟಕ್ಕೆ ವೈಜ್ಞಾನಿಕ ರೀತಿಯಲ್ಲಿ ಪಳಗಬೇಕು. ಭಾರತ ಪಂದ್ಯಗಳನ್ನು ಗೆಲ್ಲಲು ಯೂರೋಪಿಯನ್ ತಂತ್ರ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಆಟಗಾರರಿಗೆ ವಿದೇಶೀ ಕೋಚ್ ಅಗತ್ಯವಿದೆ.
ಹಿಂದೆ ಜರ್ಮನಿಯ ಹೆಸರಾಂತ ಆಟಗಾರ ಪಾಲ್ ಲಸೆಕ್ ಮಲೇಶಿಯಾ ತಂಡದ ಸಲಹೆಗಾರರಾಗಿದ್ದರು. ಈ ಕಾರಣದಿಂದಲೇ ಒಲಂಪಿಕ್ಸ್‌ನಲ್ಲಿ ಈಗಲೂ ಮಲೇಶಿಯಾ ತಂಡ ಪಾಕಿಸ್ತಾನ, ನೆದರ್‌ಲ್ಯಾಂಡ್ಸ್‌ನಂಥ ಪ್ರಬಲ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡುತ್ತಿದೆ. ಮಲೇಶಿಯಾ ತಂಡಕ್ಕೆ ಈಗ ವಿದೇಶೀ ತರಬೇತುದಾರರಿಲ್ಲ. ಈ ನಿಟ್ಟಿನಲ್ಲಿ ಭಾರತಕ್ಕೂ ವಿದೇಶೀ ಕೋಚ್ ಬೇಕು. ಅವರಿಂದ ನಮ್ಮ ದೇಶದ ಕೋಚ್‌ಗಳೂ ಸಾಕಷ್ಟು ಕಲಿಯಬಹುದಾಗಿದೆ ಎನ್ನುತ್ತಾರೆ ಮುನೀರ್ ಸೇಟ್.
ವಿದೇಶೀ ಕೋಚ್ ಬೇಕೋ ಬೇಡವೋ ಎಂಬ ಬಗ್ಗೆ ಹೀಗೇ ಚರ್ಚೆಗಳು ನಡೆಯುತ್ತಿವೆ. ಭಾರತ ಹಾಕಿ ಫೆಡರೇಷನ್ ಏನು ತೀರ್ಮಾನ ಕೈಗೊಳ್ಳುವುದೋ ಕಾದು ನೋಡಬೇಕು. ಈ ವಿಷಯ ಕುರಿತು ಇನ್ಫೋಗೆ ನಿಮ್ಮ ಅಭಿಪ್ರಾಯಗಳನ್ನೂ ಕಳುಹಿಸಿ.
(ಯುಎನ್‌ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications