Get Updates
Get notified of breaking news, exclusive insights, and must-see stories!

ಕ್ರಿಕೆಟ್‌ -ಯುವರಾಜ !

ನವ-ದೆ-ಹ-ಲಿ : ಆಸ್ಟ್ರೇಲಿ-ಯಾ ವಿರು-ದ್ಧ-ದ ಐಸಿಸಿ ಪಂದ್ಯ. ವಿಶ್ವ-ಖ್ಯಾ-ತಿ-ಯ ಘಟಾನು-ಘ-ಟಿ-ಗ-ಳು ಕ್ರೀ-ಸ್‌ನ-ಲ್ಲಿ ಹೆ-ಚ್ಚು ಹೊತ್ತು ನಿಲ್ಲ-ದೆ ಪೆವಿ-ಲಿ-ಯ-ನ್‌-ಗೆ ವಾಪ-ಸ್ಸಾಗು-ತ್ತಿ-ದ್ದಾ-ಗ, ಮತ್ತದೇ ಚಾಳಿ ಅಂದುಕೊಂಡು ಜನ ಗೊಣಗುತ್ತಲೇ ಟಿವಿ ನೋಡುತ್ತಿದ್ದರು. 19ನೇ ಓವರ್‌. ಭಾರತ 90ಕ್ಕೆ 3 ವಿಕೆಟ್‌ ಕಳೆದುಕೊಂಡಿದೆ. ಆಗ ಕ್ರೀಸಿಗೆ ಬಂದ 19 ವರ್ಷದ ಯುವಕ ಜನರ ಗೊಣಗನ್ನು ದೂರ ಮಾಡಿ, 265 ರನ್‌ಗಳಿಸಲು ಕಾರಣನಾದ. ಆತನೇ ಯುವರಾಜ್‌ ಸಿಂಗ್‌.

ತಾವು ಬ್ಯಾಟು ಹಿಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಗವಾಸ್ಕರ್‌, ಟೋನಿ ಗ್ರೆಗ್‌ ಮುಂತಾದ ದಿಗ್ಗಜರಿಂದ ಯುವರಾಜ್‌ ಪ್ರಶಂಸೆ ಗಿಟ್ಟಿಸಿದರು. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದ ಡೆಬ್ಯೂ ಬ್ಯಾಟಿಂಗ್‌ನಲ್ಲಿ ಭಾರತದ ಪರ ಯಾವ ಆಟಗಾರನೂ ಗಳಿಸದ ಸ್ಕೋರು (80 ಎಸೆತಗಳಲ್ಲಿ 84) ಬಾರಿಸಿದ ಯುವರಾಜ್‌ ವಿಶ್ವ ಚಾಂಪಿಯನ್ನರಿಂದ ಸತತ 7 ಸೋಲುಂಡಿದ್ದ ಭಾರತಕ್ಕೆ ವಿಜಯ ದಕ್ಕಿಸಿಕೊಟ್ಟರು. ಭಾರತದ ಬ್ಯಾಟಿಂಗ್‌ ಬೆನ್ನೆಲುಬಿನ ಅಲ್ಲಾಡುತ್ತಿದ್ದ ಮಧ್ಯಭಾಗವನ್ನು ಬಿಗಿಗೊಳಿಸಿದರು.

ದಕ್ಷಿಣ ಆಫ್ರಿಕ ವಿರುದ್ಧದ ಸೆಮಿಫೈನಲ್ಸ್‌ನಲ್ಲೂ ಸಿಕ್ಕ ಸ್ವಲ್ಪ ಅವಕಾಶದಲ್ಲೇ ಮತ್ತೆ ಮಿಂಚಿದರು. 35 ಎಸೆತಗಳಲ್ಲಿ 6 ಬೌಂಡರಿಗಳಿದ್ದ 41 ರನ್‌ ಗಿಟ್ಟಿಸಿದರು. ನಂತರ ಮಾಡಿದ 4 ಓವರ್‌ಗಳಲ್ಲಿ 15 ರನ್ನಿತ್ತು ಅಂತರರಾಷ್ಟ್ರೀಯ ಪಂದ್ಯದ ತಮ್ಮ ಮೊದಲ ವಿಕೆಟ್‌ ಸಂಪಾದಿಸಿದರು. ಡೊನಾಲ್ಡ್‌ ಟು ಯುವರಾಜ್‌ ಫಾರ್‌ ದಿ ಫಸ್ಟ್‌ ಟೈಂ. ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಯುವರಾಜ್‌ಗೇ ಜಯ. ಅದೇ ಓವರ್‌ನಲ್ಲಿ ಇನ್ನೆರಡು 4. ಭರವಸೆ ಹುಟ್ಟಿಸಲು ಇಷ್ಟು ಬೇಕಾದಷ್ಟಾಯಿತು.

ಕಪಿಲ್‌ ನಾಡವರೇ (ಚಂಡೀಗಢ) ಆದ ಯುವರಾಜ್‌ ಓದಿದ್ದೂ ಅವರೋದಿದ ಕಾಲೇಜಿನಲ್ಲೇ (ಡಿಎವಿ ಕಾಲೇಜ್‌). ಯುವರಾಜ್‌ ತಂದೆ, ಯೋಗರಾಜ್‌ 1980-81ರಲ್ಲಿ ಕಪಿಲ್‌ ಜೊತೆ ಹೊಸ ಚೆಂಡನ್ನು ಬೌಲ್‌ ಮಾಡಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಸ್ಕೇಟಿಂಗ್‌ ಗೀಳಿಗೆ ಬಿದ್ದ ಯುವರಾಜ್‌ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಕೂಡ ಗೆದ್ದರು. ತನ್ನ ಮಗ ಕ್ರಿಕೆಟಿಗನಾಗಬೇಕೆಂಬ ಕನಸನ್ನು ಅಪ್ಪ ಅನೇಕರಿಗೆ ಆಗಲೇ ಹಂಚಿ ಬಿಟ್ಟಿದ್ದರು. ಮಗ ಸ್ಕೇಟಿಂಗ್‌ ಕಡೆ ವಾಲಿದ್ದು, ಅಪ್ಪ ಕೆಲವರ ಮೂದಲಿಕೆಗೆ ಗುರಿಯಾಗಬೇಕಾಯಿತು.

ಮಗನಿಗೆ ತಿಳಿಹೇಳಿದರು. ಕ್ರಿಕೆಟ್‌ ಕಿಟ್‌ ಕೊಡಿಸಿ ತಮ್ಮ ಆಸೆ ಈಡೇರಿಸುವಂತೆ ಕೇಳಿದರು. ಅಂದಿನಿಂದ ಯುವರಾಜ್‌ ಅಭ್ಯಾಸ ಶುರುವಾಯಿತು. 1996-97ರಲ್ಲಿ ರಣಜಿ ಟೂರ್ನಿಯಲ್ಲಿ ಒರಿಸ್ಸಾ ವಿರುದ್ಧ ಮೊದಲ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟರು. ದೇಬಶಿಶ್‌ ಮೊಹಾಂತಿ ಬೌಲಿಂಗ್‌ನಲ್ಲಿ ಸೊನ್ನೆಗೇ ಔಟಾದ ಯುವರಾಜ್‌ ರಣಜಿಯಿಂದ ಹೊರಗುಳಿದು ಜೂನಿಯರ್‌ ಕ್ರಿಕೆಟ್‌ಗೆ ಆಡಿದರು.

ತಮ್ಮೂರಿನ ಸುಖ್‌ವಿಂದರ್‌ ಸಿಂಗ್‌ ಬಾವಾ ಪಾಳಯದಲ್ಲಿ ಪಳಗಿದರು. ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ರೇಲ್ವೇಸ್‌ ವಿರುದ್ಧ 278 ರನ್‌ ಗಳಿಸಿದ್ದು, ಇವರ ಸಾಧನೆಗೆ ಕನ್ನಡಿ ಹಿಡಿದಂತಿ-ತ್ತು. ಆ ಮುಂಚೆ ಅದೇ ಟ್ರೋಫಿಯಲ್ಲಿ ಬಂಗಾಳ ವಿರುದ್ಧ ಗಳಿಸಿದ್ದ 140 ರನ್‌ ಎಂ.ಎ. ಚಿದಂಬರಂ ಟ್ರೋಫಿಯಲ್ಲಿ ರೆಸ್ಟ್‌ ಆಫ್‌ ಇಂಡಿಯಾ ವಿರುದ್ಧ ಗಳಿಸಿದ್ದ 54 ರನ್‌ಗಳು ಲೆಕ್ಕಕ್ಕಿಲ್ಲದಂತಾಯಿತು.

ಮತ್ತೆ ಹೈದರಾಬಾದ್‌ ವಿರುದ್ಧ ಮೊಹಾಲಿಯಲ್ಲಿ ನಡೆದ ರಣಜಿ ಪಂದ್ಯಕ್ಕೆ ಪ್ರವೇಶ. ಎರಡೂ ಇನ್ನಿಂಗ್ಸ್‌ಗಳಲ್ಲಿ 25 ಹಾಗೂ 31 ರನ್‌ಗಳಿಸಿ ಅಜೇಯ. ಸಿಕ್ಕಿದ್ದು ಒಂದೇ ವಿಕೆಟ್‌. ರಣಜಿ ತಂಡದಯಲ್ಲುಳಿಯಲು ಅಷ್ಟು ಸಾಕಾಯಿತು. ನಂತರ ಪಂಜಾಬ್‌ ತಂಡದ ನಾಯಕತ್ವ ವಹಿಸಿದ ಯುವರಾಜ್‌ ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 40 ಬೌಂಡರಿ, 6 ಸಿಕ್ಸರ್‌ಗಳಿದ್ದ 358ರನ್‌ ಹೊಡೆದರು.

ಈ ವರ್ಷದ ಜನವರಿಯಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 33.83 ಸರಾಸರಿಯಲ್ಲಿ 203 ರನ್‌ ಗಳಿಸಿ, 11.50 ಸರಾಸರಿ ರನ್‌ ಕೊಟ್ಟು 12 ವಿಕೆಟ್‌ ಗಳಿಸಿದ್ದು ಆಯ್ಕೆದಾರರ ಕಣ್ಣು ತೆರೆಸಿತು. ಅಪ್ಪನಂತೆ ಅಜಾನುಬಾಹು (5 ಅಡಿ 11 ಇಂಚು ಎತ್ತರ) ಆಗಿರುವ ಯುವರಾಜ್‌ ಸ್ವೀಟ್‌ ಟೈಮಿಂಗ್‌ ಬಗ್ಗೆ ಗವಾಸ್ಕರ್‌, ಜೆಫ್‌ ಬಾಯ್ಕಾಟ್‌, ಇಯಾನ್‌ ಚಾಪೆಲ್‌ ಇನ್ನೂ ಮಾತನಾಡುತ್ತಲೇ ಇದ್ದಾರೆ. ಬಿನ್ನಿ, ವೆಂಗ್‌ಸರ್ಕರ್‌ ಕೂಡ ಇವರನ್ನು ಶ್ಲಾಘಿಸಿದ್ದಾರೆ.

ಇವರನ್ನು ನಿಯಂತ್ರಿಸಲು ತಿಣುಕಾಡಿದ ಸ್ಟೀವ್‌ ವಾ, ಈತ ಒಬ್ಬ ದಿಟ್ಟ ಆಟಗಾರ. ತಂತ್ರಕ್ಕೆ ಜಗ್ಗದ ಮನಸ್ಥಿತಿ ಇದೆ. ತದೇಕಚಿತ್ತತೆ, ಕೆಟ್ಟ ಬಾಲಿಗೆ ಹಿಂದೂಮುಂದೂ ನೋಡದೆ ಚಚ್ಚುವುದನ್ನು ಮೆಚ್ಚಲೇಬೇಕು ಎಂದಿದ್ದಾರೆ. ಇವರಿಂದ ಬೌಂಡರಿ ಚಚ್ಚಿಸಿಕೊಂಡ ಮೆಕ್‌ಗ್ರಾತ್‌ ದುರುಗುಟ್ಟುವಿಕೆಗೂ ಈತ ಬ್ಯಾಟ್‌ನಿಂದಲೇ ಉತ್ತರ ಕೊಟ್ಟಿದ್ದಾರೆ.

ಇನ್ನಾದರೂ ಸಚಿನ್‌, ಗಂಗೂಲಿಗೆ ಒತ್ತಡ ಕಡಿಮೆಯಾಗಲಿದೆಯೇ? ಜನ ಈಗಾಗಲೇ ಹೌದೆನ್ನುತ್ತಿದ್ದಾರೆ, ಯುವರಾಜ್‌ ಸಿಂಗ್‌ ನೆಚ್ಚಿಕೊಂಡು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+