ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈ-ಸೂ-ರು- ಮ-ಲ್ಲಿ-ಗೆ ದಳ-ಗ-ಳ-ಲ್ಲಿ ಹನಿ ನೀರು

By Staff
|
Google Oneindia Kannada News

ಬೆಂಗಳೂರು : ನಮ್ಮ ಕಾಲದಲ್ಲಿ ಮೈಸೂರು ತಂಪಾಗಿತ್ತು ಅಂತ ದಸರಾ ಕವಿ ಗೋಷ್ಠಿಯಲ್ಲಿ ಮೂರು ಬಾರಿ ನಿಧಾನವಾಗಿ ಹೇಳಿದ್ದ ರು. ಮುನ್ನೂರು ಅರ್ಥಗಳು ಫಳ ಫಳನೆ ಮಿಂಚುವಂತೆ. ಅವರು ಹಾಗನ್ನುವಾಗ ಅಂದಿನ ರಾಜರು, ಬದುಕು, ಮೈಸೂರಿನ ರಾಜ ರಸ್ತೆಗಳು ಎಲ್ಲ ಅವರ ಮುಂದೆ ಮೆರವಣಿಗೆ ಹೊರಟಿದ್ದವು. ಇವತ್ತು ಬಂದ ಹವಾಮಾನ ವರದಿ ನೋಡಿದಾಗ ಕೆಎಸ್‌ನ ರ ಮಾತುಗಳು ನೆನಪಾದವು.

ಶನಿವಾರ ಮೈಸೂರು ತುಂಬಾ ತಂಪಾಗಿತ್ತು. ‘ ಇಂದು ಕಡಿಮೆ ಉಷ್ಣಾಂಶ’ ಅನ್ನುವ ಹೆಗ್ಗಳಿಕೆ ಬಿಟ್ಟರೆ ಮೈಸೂರು ಬಿಸಿಯೇರುತ್ತಿದೆ. ಐಟಿ, ಕೈಗಾರಿಕೆ , ಶಿಕ್ಷಣ, ಅಭಿವೃದ್ಧಿ....ಹೀಗೆ.... ಇರಲಿ ಬಿಡಿ.

ಬೆಂಗಳೂರು ಹವಾಮಾನ ಕಚೇರಿಯಲ್ಲಿ ದಾಖಲಾದ ರಾಜ್ಯ ಹವಾಮಾನ ವರದಿ ಇಂತಿದೆ. ಉತ್ತರ ಒಳನಾಡಿನಲ್ಲಿ ಮಾನಸೂನ್‌ ಕಂಡಾವಟ್ಟೆ ಇತ್ತು. ಕರಾವಳಿಯಲ್ಲಿ ಮಾತ್ರ ಬೇಕೋ ಬೇಡವೋ ಎಂಬಂತೆ ಮಳೆ ಕಾಲಾಡಿಸಿದೆ. ದಕ್ಷಿಣ ಒಳನಾಡನಲ್ಲಿಯೂ ಮಳೆ ಅಬ್ಬರವಿರಲಿಲ್ಲ.

ಲೆಕ್ಕ ಪ್ರಕಾರ ಹೇಳುವುದಾದರೆ, ಗೋಕಾಕದಲ್ಲಿ 6 ಸೆಂಟಿಮೀಟರ್‌, ಮುಂಡಗೋಡು, ಶಿರಹಟ್ಟಿ, ಬೈಲಹೊಂಗಲಗಳಲ್ಲಿ 5 ಸೆಂಟಿಮೀಟರ್‌, ಜೋಯಿಡಾ, ಮುಧೋಳದಲ್ಲಿ 4ಸೆಂಟಿ ಮೀಟರ್‌, -ಯಲ್ಲಾಪುರದಲ್ಲಿ 3 ಸೆಂಟಿಮೀಟರ್‌ ಮಳೆಯಾಗಿದೆ. ಬಿಜಾಪುರ, ಗುಲ್ಬರ್ಗಾ, ಬೆಳಗಾಂನಲ್ಲಿ ಮಳೆ ಪ್ರಮಾಣ ಕೇವಲ ಎರಡು ಸೆಂಟಿ ಮೀಟರ್‌. ಹೊಸದಾಗಿ ನೆಟ್ಟಿರುವ ಹೂವಿನಗಿಡಗಳು ಚಿಗಿತು ನಿಲ್ಲಲು ಸದ್ಯಕ್ಕೆ ಇಷ್ಟು ಮಳೆ ಸಾಕಲ್ವ ?

ಸೋಮವಾರದ ವರೆಗಿನ ಜ್ಯೋತಿಷ್ಯ

  • ಬೆಂಗಳೂರಿನಲ್ಲಿ ಬೆಳಗಿನಿಂದ ಸಂಜೆವರೆಗೆ ಮಬ್ಬು , ಸಂಜೆ ಮತ್ತೆ ಮುಸಲಧಾರೆಯ ನಿರೀಕ್ಷೆ
  • ಕರಾವಳಿಯಲ್ಲಿ ತಿಳಿಯಾಗಿ ಮಳೆ ಸಂಭವ
  • ಉಳಿದಂತೆ ಎಲ್ಲ ಕ್ಷೇಮ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X