Get Updates
Get notified of breaking news, exclusive insights, and must-see stories!

ದಕ್ಷಿಣ ಒಳನಾಡಿನಲ್ಲಿ ಏರಿದ ಉಷ್ಣಾಂಶ

ಬೆಂಗಳೂರು : ನಾಲ್ಕಾರು ದಿನದ ಮಳೆಯ ಆರ್ಭಟ ಕಡಿಮೆಯಾಗಿದೆ. ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯ ಅಲ್ಲಲ್ಲಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಚದುರಿದಂತೆ ಮಳೆ ಆಗಿದೆ. ಕೆಲವೆಡೆ ಕೆಲಕಾಲ ಭಾರಿ ಮಳೆ ಆದ ವರದಿಗಳು ಬಂದಿವೆ. ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಹಗಲಿನ ಗರಿಷ್ಠ ತಾಪಮಾನ ಏರಿತ್ತು. ಆದರೆ, ಮೈಸೂರಿನಲ್ಲಿ ಕನಿಷ್ಠ ತಾಪಮಾನ 18.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಕೂಡ್ಲಿಗಿಯಲ್ಲಿ ಅತಿಹೆಚ್ಚು ಅಂದರೆ 7 ಸೆಂಟಿ ಮೀಟರ್‌ ಮಳೆ ಬಿದ್ದಿದೆ. ಹೊನ್ನಾವರ, ಅಜ್ಜಂಪುರಗಳಲ್ಲಿ 4 ಸೆಂಟಿ ಮೀಟರ್‌, ಬಾದಾಮಿ, ಮುಧೋಳ, ಸವದತ್ತಿ, ಬೆಂಗಳೂರು ವಿಮಾನ ನಿಲ್ದಾಣ, ಸುಬ್ರಹ್ಮಣ್ಯ, ಅಣ್ಣಿಗೇರಿ, ರಾಣೆಬೆನ್ನೂರು, ಹರಿಹರ, ಹೊಳೆ ನರಸೀಪುರ, ಮೂರ್ನಾಡುಗಳಲ್ಲಿ ತಲಾ 2 ಸೆಂಟಿ ಮೀಟರ್‌ ಮಳೆ ಬಿದ್ದಿದೆ. ಉಳಿದಂತೆ ರಾಜ್ಯದ ತಾಪಮಾನ ಸಾಮಾನ್ಯವಾಗಿತ್ತು.

ಶನಿವಾರ ಬೆಳಗ್ಗೆವರೆಗಿನ ಮುನ್ಸೂಚನೆಯಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಸುರಿಮಳೆ ಬೀಳುವ ಸಂಭವ ಇದೆ. ದಕ್ಷಿಣ ಒಳನಾಡಿನಲ್ಲಿ ಚದುರಿದಂತೆಯೂ ಮಳೆ ಬೀಳುವ ಸಾಧ್ಯತೆ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಗುಡುಗಿನಿಂದ ಕೂಡಿದ ಹಗುರ ಮಳೆ ಸಂಜೆ ಅಥವಾ ರಾತ್ರಿ ಬೀಳುವ ಸಂಭವ ಇದೆ ಎನ್ನುತ್ತದೆ ಹವಾಮಾನ ಇಲಾಖೆ. ಶುಕ್ರವಾರ ಬೆಂಗಳೂರು ನಗರದ ಗರಿಷ್ಠ ಉಷ್ಣಾಂಶ 29 ಡಿಗ್ರಿ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+