ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಎಂಬ ಆಧುನಿಕ ಶ್ರವಣ ಕುಮಾರ

By Staff
|
Google Oneindia Kannada News

ನವದೆಹಲಿ : ಶುಕ್ರವಾರಕ್ಕೆ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರಕ್ಕೆ ಒಂದು ವರ್ಷ ತುಂಬುತ್ತಿದೆ. ಇಂಥ ಸಂತಸದ ಘಳಿಗೆಯನ್ನು ಬಹಿರಂಗವಾಗಿ ಅನುಭವಿಸಲು ಸ್ವತಃ ವಾಜಪೇಯಿ ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಶಸ್ತ್ರಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೂರನೇ ಬಾರಿಗೆ ಪ್ರಧಾನಿಯಾಗಿ ವಾಜಪೇಯಿ ಅಧಿಕಾರ ಸ್ವೀಕರಿಸಿದ್ದು, ಅಕ್ಟೋಬರ್‌ 13ರಂದು. 24 ಪಕ್ಷಗಳ ತಂಡವನ್ನು ಹೆಗಲಿಗಿಟ್ಟುಕೊಂಡು ಒಂದು ವರ್ಷ ಪೂರೈಸುವಾಗ 75ರ ಹರೆಯದ ವಾಜಪೇಯಿ ಅವರ ಹಾದಿ ಸುಗಮವಾಗೇನೂ ಇರಲಿಲ್ಲ. ಈವರೆಗೆ ತಮ್ಮ ಪಕ್ಷ ಹಾಗೂ ಮಿತ್ರಪಕ್ಷಗಳ ಮೇಲಿನ ಪ್ರಶ್ನಾತೀತ ಹಿಡಿತ ಮುಂದುವರಿಸಿರುವ ವಾಜಪೇಯಿ ಅವರಿಗೆ ಆರೋಗ್ಯ ಹಾಗೂ ಮಿತ್ರಪಕ್ಷಗಳ ಕೆಲ ನಿಲುವುಗಳು ಘಾಸಿಗೊಳಿಸಿದ್ದಿದೆ.

ತಮ್ಮನ್ನು ಶಸ್ತ್ರಚಿಕಿತ್ಸೆಯ ಕಾಲದಲ್ಲಿ ಭೇಟಿ ಮಾಡುವ ಮೂಲಕ ಇತರ ರೋಗಿಗಳಿಗೆ ತೊಂದರೆ ಕೊಡಬಾರದೆಂದು ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದ ವಾಜಪೇಯಿ, ಒಂದು ವರ್ಷ ತುಂಬಿದ ಸಂದರ್ಭದಲ್ಲೂ ಕೂಡಾ ಮಹಾರಾಷ್ಟ್ರದ ಬಿಜೆಪಿಯ ಕೆಲವು ನಾಯಕರು ಮತ್ತು ಕೇಂದ್ರದ ಕೆಲವೇ ಸಚಿವರಿಗೆ ಅಭಿನಂದನೆ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಎಂದು ಕೆಲವು ಅಧಿಕೃತ ಮೂಲಗಳು ತಿಳಿಸಿವೆ.

ವರ್ಷ ಪೂರೈಸಿದ ಸಂಭ್ರದ ನಡುವೆ ಇನ್ನೊಂದು ಸಂತೋಷದ ಸುದ್ದಿ ಎಂದರೆ ಅವರಿಗೆ ಯಶಸ್ವೀ ಶಸ್ತ್ರಚಿಕಿತ್ಸೆ ಆಗಿರುವುದು. ಇದು ವಾಜಪೇಯಿ ಅವರು ಇನ್ನಷ್ಟು ಕ್ರೀಯಾಶೀಲರಾಗಿ ಕೆಲಸ ಮಾಡುವ ಬಲ ಕೊಡಲಿದೆ ಎಂಬ ಆಶಯ ಅನೇಕ ರಾಜಕೀಯ ತಜ್ಞರದು.

1 ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X